IBM Layoffs: ಎಐ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಹಲವಾರು ಕ್ಷೇತ್ರದಲ್ಲಿ ಉದ್ಯೋಗಿಗಳ ಉದ್ಯೋಗವನ್ನು ಕಿತ್ತುಕೊಳ್ಳತ್ತಿದೆ ಎಂಬುದುಕ್ಕೆ ಸಾಕ್ಷಿಯಂತೆ ಪ್ರಮುಖ ಐಟಿ ಕಂಪನಿಯಾದ ಐಬಿಎಂ 8,000 ಉದ್ಯೋಗಿಗಳನ್ನ ಕೆಲಸದಿಂದ ವಜಾಗೊಳಿಸಿ ಗೇಟ್ ಪಾಸ್ ನೀಡಿದೆ.
ಹೌದು, ಐಬಿಎಂ ಆಟೋಮೇಷನ್ ಪ್ರಚಾರದ ಭಾಗವಾಗಿ 200 ಮಾನವ ಸಂಪನ್ಮೂಲ (HR ) ಪಾತ್ರಗಳನ್ನು Al ಏಜೆಂಟ್ ಗಳೊಂದಿಗೆ ಬದಲಾಯಿಸಿದೆ ಎಂದು ಇತ್ತೀಚೆಗಷ್ಟೇ ವರದಿಯಾಗಿತ್ತು ಇದು ಆದ ಕೆಲವೇ ದಿನಗಳಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದ್ದಾರೆ. ಈಗ ಮಾನವರು ನಿರ್ವಹಿಸುತ್ತಿದ್ದ ಕೆಲಸವನ್ನು Al ಮಾಡುತ್ತಿರುವುದರಿಂದ ಅನೇಕ ಉದ್ಯೋಗಿಗಳಿಗೆ ಕೆಲಸವಿಲ್ಲದಂತೆ ಆಗಿದೆ. HR ವಿಭಾಗದ ಪಾತ್ರಗಳಿಗೆ ಎಐ ಏಜೆಂಟ್‌ಗಳನ್ನು ಬದಲಾಯಿಸುವಿದರಿಂದ ಅವರ ಎಲ್ಲಾ ಕೆಲಸವನ್ನುಎಐ ನಿರ್ವಹಿಸುತ್ತಿದೆ. ಮುಂದಿನ ಕೆಲವು ದಿನಗಳಲ್ಲಿ ಇತರ ವಿಭಾಗ ಉದ್ಯೋಗಿಗಳು ಸಹ ಕೆಲಸದಿಂದ ಹಂತ ಹಂತವಾಗಿ ತಗೆದು ಹಾಕಬಹುದು.

ಈ ಕುರಿತು ಐಬಿಎಂ ಕಂಪನಿ ಸಿಇಒ ಅರವಿಂದ್ ಕೃಷ್ಣ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಈ ಬದಲಾವಣೆಯ ಬಗ್ಗೆ ಸುಳಿವು ನೀಡಿದ್ದರು. ಕಂಪನಿಯ ಕೆಲವು ಉದ್ಯಮ ಪ್ರಕ್ರಿಯೆಗಳನ್ನು ಸುಗಮಗೊಳಿಸಲು ಮತ್ತು ತಂಡಗಳನ್ನು ಹೆಚ್ಚು ಪರಿಣಾಮಕಾರಿಯಾಗಿಸಲು ಕೃತಕ ಬುದ್ಧಿಮತ್ತೆ ಮತ್ತು ಯಾಂತ್ರೀಕರಣವನ್ನು ಬಳಸಲಾಗುತ್ತಿದೆ ಎಂದು ಅವರು ಹೇಳಿದ್ದರು.
ಕಂಪನಿಗೆ ಯಾಂತ್ರೀಕರಣದಿಂದ ಉಳಿತಾಯವನ್ನು ಸಾಫ್ಟ್‌ವೇರ್ ಅಭಿವೃದ್ಧಿ, ಮಾರ್ಕೆಟಿಂಗ್ ಮತ್ತು ಮಾರಾಟದಂತಹ ವ್ಯವಹಾರದ ಇತರ ಭಾಗಗಳಲ್ಲಿ ಹೂಡಿಕೆ ಮಾಡಲಾಗುತ್ತದೆ ಎಂದಿದ್ದರು.
ನಾವು ಐಬಿಎಂ ಒಳಗೆ ಕೃತಕ ಬುದ್ಧಿಮತ್ತೆ (AI) ಮತ್ತು ಕೆಲವು ಉದ್ಯಮ ಕಾರ್ಯಪ್ರವಾಹಗಳಲ್ಲಿ ಯಾಂತ್ರೀಕರಣವನ್ನು ಬಳಸಿಕೊಳ್ಳುವಲ್ಲಿ ಕೆಲಸ ಮಾಡಿದ್ದರೂ, ನಮ್ಮ ಒಟ್ಟು ಉದ್ಯೋಗಾವಕಾಶಗಳು ವಾಸ್ತವವಾಗಿ ಹೆಚ್ಚಾಗಿದೆ ಎಂದು ಕೃಷ್ಣ ಹೇಳಿದರು. "ಇದು ಇತರ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲು ನಿಮಗೆ ಹೆಚ್ಚಿನ ಹೂಡಿಕೆಯನ್ನು ನೀಡುತ್ತದೆ ಎಂದು ಸಹ ಹೇಳಿದ್ದರು.
ಐಬಿಎಂ (IBM) ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದರೂ, ಕಂಪನಿಯು ಸಂಪೂರ್ಣವಾಗಿ ಕುಗ್ಗುತ್ತಿರುವುದಿಲ್ಲ. ಇದರ ಬದಲು, ಕಂಪನಿಯು ತನ್ನ ವ್ಯವಹಾರ ಮಾದರಿಯಲ್ಲಿ ಮೂಲಭೂತ ಬದಲಾವಣೆಗಳನ್ನು ಮಾಡುತ್ತಿರುವುದಾಗಿ ತಿಳಿಸಿದೆ.
ಸೃಜನಶೀಲತೆ, ಕಾರ್ಯತಂತ್ರದ ಚಿಂತನೆ ಅಥವಾ ಮಾರ್ಕೆಟಿಂಗ್ ಅಥವಾ ಸಾಫ್ಟ್‌ವೇರ್ ಅಭಿವೃದ್ಧಿಯಂತಹ ಜನರ ಕೌಶಲ್ಯಗಳನ್ನು ಅಗತ್ಯವಿರುವ ಉದ್ಯೋಗಗಳು ಇನ್ನೂ ಬೇಡಿಕೆಯಲ್ಲಿವೆ. ಆದರೆ ದಿನನಿತ್ಯದ, ಪುನರಾವರ್ತಿತ ಕೆಲಸವನ್ನು ಒಳಗೊಂಡಿರುವ ಪಾತ್ರಗಳು, ವಿಶೇಷವಾಗಿ ಬ್ಯಾಕ್ -ಆಫೀಸ್ ಕಾರ್ಯಗಳಲ್ಲಿ ಎಐ ಇಳಕೆ ಹೆಚ್ಚಾಗಿ ಇದೆ.
ಈ ಕುರಿತು ಐಬಿಎಂನ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ನಿಕಲ್ ಲಾಮೋರೆಕ್ಸ್, Al ಬಳಕೆಯಿಂದ ಎಲ್ಲಾ ಉದ್ಯೋಗಗಳು ಕಣ್ಮರೆಯಾಗುತ್ತವೆ ಎಂದರ್ಥವಲ್ಲ ಎಂದು ಹೇಳಿದ್ದಾರೆ. ಬಹಳ ಕಡಿಮೆ ಪಾತ್ರಗಳನ್ನು ಸಂಪೂರ್ಣವಾಗಿ ಬದಲಾಯಿಸಲಾಗುತ್ತದೆ ಎಂದು ಅವರು ವಿವರಿಸಿದರು.
Al ಕೆಲಸದ ಪುನರಾವರ್ತಿತ ಭಾಗಗಳನ್ನು ಕಾರ್ಯನಿರ್ವಹಿಸುತ್ತದೆ. ವ್ಯಕ್ತಿಯ ತೀರ್ಪು ಮತ್ತು ನಿರ್ಧಾರ ತೆಗೆದುಕೊಳ್ಳುವಿಕೆಯ ಅಗತ್ಯವಿರುವ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸಲು ಉದ್ಯೋಗಿಗಳನ್ನು ಮುಕ್ತಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ಉದ್ಯೋಗಿಗಳನ್ನು ಕೆಲಸದಿಂದ ರತಗೆದ ನಂತರವು ಐಬಿಎಂ ತನ್ನ Al ಪರಿಕರಗಳನ್ನು ಗ್ರಾಹಕರಿಗೆ ಪ್ರಚಾರ ಮಾಡುವುದನ್ನು ಮುಂದುವರೆಸಿದೆ. ಈ ತಿಂಗಳು ನಡೆದ ವಾರ್ಷಿಕ ಥಿಂಕ್ ಸಮ್ಮೇಳನದಲ್ಲಿ, ಕಂಪನಿಯು ಇತರ ವ್ಯವಹಾರಗಳಿಗೆ ತಮ್ಮದೇ ಆದ AI ಏಜೆಂಟ್‌ಗಳನ್ನು ನಿರ್ಮಿಸಲು ಮತ್ತು ನಡೆಸಲು ಸಹಾಯ ಮಾಡಲು ಹೊಸ ಸೇವೆಗಳನ್ನು ಪ್ರಾರಂಭಿಸಿತು.
ಈ ಪರಿಕರಗಳನ್ನು ಓಪನ್‌ಎಐ, ಅಮೆಜಾನ್ ಮತ್ತು ಮೈಕ್ರೋಸಾಫ್ಟ್ ನ ಪ್ರಮುಖ ವೇದಿಕೆಗಳ ಜೊತೆಗೆ ಕೆಲಸ ಮಾಡಲು ವಿನ್ಯಾಸಗೊಳಿಸಲಾಗಿದೆ ಎಂದು ಹೇಳಿದೆ.
ಅನೇಕ ಕಂಪನಿಗಳು ಎಐ ತಂತ್ರಜ್ಞಾನ ಅಳವಡಿಕೆ
ಎಐ ತಂತ್ರಜ್ಞಾನವನ್ನು ಐಬಿಎಂಗೆ ಮಾತ್ರ ಬಳಕೆ ಮಾಡಿಕೊಳ್ಳುತ್ತಿಲ್ಲ ಪ್ರಪಂಚದಾದ್ಯಂತದ ಅನೇಕ ಕಂಪನಿಗಳು
ಕೆಲಸದ ಕಾರ್ಯಗಳನ್ನು ಸ್ವಯಂಚಾಲಿತಗೊಳಿಸಲು ಮತ್ತು ವೆಚ್ಚವನ್ನು ಕಡಿಮೆ ಮಾಡಲು Al-ಚಾಲಿತ ಪರಿಕರಗಳನ್ನು ಬಳಕೆಯನ್ನು ಪ್ರಯೋಗಿಸುತ್ತಿವೆ. ಕಳೆದ ತಿಂಗಳು, ಡ್ಯುಯೋಲಿಂಗೊ ಮಾನವ ಗುತ್ತಿಗೆದಾರರ ಕೆಲಸಗಳನ್ನು Al ಯೊಂದಿಗೆ ಬದಲಾಯಿಸುವುದಾಗಿ ಘೋಷಿಸಿತು ಎಂದು ಹೇಳಿದ್ದಾರೆ.
ಇನ್ನೂ ಡ್ಯುಯೊಲಿಂಗೊ ಸಿಇಒ ಲೂಯಿಸ್ ವಾನ್ ಅಹ್ ಅವರು AI ನಿರ್ವಹಿಸಬಹುದಾದ ಕೆಲಸಗಳನ್ನು ಮಾಡಲು ನಾವು ಕ್ರಮೇಣ (ಮಾನವ) ಗುತ್ತಿಗೆದಾರರನ್ನು ಬಳಸುವುದನ್ನು ನಿಲ್ಲಿಸುತ್ತೇವೆ ಎಂದು ಹೇಳಿದ್ದಾರೆ.


Click it and Unblock the Notifications