ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ ಒಡಿಐ ವಿಶ್ವಕಪ್ 2023 ಗಾಗಿ ಐಸಿಸಿ 20 ಪ್ರಾಯೋಜಕರು ಮತ್ತು ಪಾಲುದಾರರ ಪೋರ್ಟ್‌ಫೋಲಿಯೊವನ್ನು ಸಂಗ್ರಹಿಸಿದೆ. ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಅಕ್ಟೋಬರ್ 5 ರಂದು ಭಾರತದಲ್ಲಿ ಪ್ರಾರಂಭವಾಗಲಿದೆ.
ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ ಐಸಿಸಿ ವಿಶ್ವಕಪ್ 1,248 ಕೋಟಿ ರೂಪಾಯಿಗಿಂತ ಅಧಿಕ ಆದಾಯವನ್ನು ಪ್ರಾಯೋಜಕತ್ವದ ಮೂಲಕ ಗಳಿಸುವ ನಿರೀಕ್ಷೆಯಿದೆ. ಈ ಬಗ್ಗೆ ಮಾಹಿತಿ ಇರುವವರು ಮಾಧ್ಯಮಕ್ಕೆ ತಿಳಿಸಿರುವುದಾಗಿ ಹೇಳಿರುವ ವರದಿ ಅಂಕಿಅಂಶಗಳನ್ನು ಬಹಿರಂಗಪಡಿಸಿದೆ.

ಇವುಗಳಲ್ಲಿ ಆರು ಬ್ರಾಂಡ್‌ಗಳಾದ ಎಂಆರ್‌ಎಫ್ ಟೈಯರ್ಸ್, ಬುಕ್ಕಿಂಗ್ ಡಾಟ್ ಕಾಮ್, ಇಂಡಸ್‌ಇಂಡ್ ಬ್ಯಾಂಕ್, ಮಾಸ್ಟರ್‌ಕಾರ್ಡ್, ಅರಾಮ್ಕೊ, ಎಮಿರೇಟ್ಸ್ ಜಾಗತಿಕ ಪಾಲುದಾರರಲ್ಲಿ ಉತ್ತಮ ಸ್ಥಾನಮಾನವನ್ನು ಪಡೆದುಕೊಂಡಿವೆ.
ಪ್ರಾಯೋಜಕತ್ವಕ್ಕೆ ಈ ಆರು ಬ್ರಾಂಡ್‌ಗಳ ಕೊಡುಗೆಯು 8-10 ಮಿಲಿಯನ್ ಡಾಲರ್ ನಡುವೆ ಇದೆ ಎಂದು ಇಟಿ ವರದಿ ಮಾಡಿದೆ. ಗುಡ್‌ರಿಟರ್ನ್ಸ್ ಈ ವರದಿಯನ್ನು ಪರಿಶೀಲಿಸಲು ಸಾಧ್ಯವಾಗಲಿಲ್ಲ.
ಇಟಿ ವರದಿಯ ಪ್ರಕಾರ ಬಿರಾ91, ಪಾಲಿಕ್ಯಾಬ್, ಥಮ್ಸ್-ಅಪ್, ಅಪ್ಸ್ಟಾಕ್ಸ್, ನಿಸ್ಸಾನ್, ನಿಯಂ, ಓಪೋ, ಡಿಪಿ ವರ್ಲ್ಡ್ಸ್ ಸೇರಿದಂತೆ ಎಂಟು ಅಧಿಕೃತ ಪಾಲುದಾರ ಬ್ರ್ಯಾಂಡ್‌ಗಳು ತಲಾ 6- 8 ಮಿಲಿಯನ್ ಡಾಲರ್ ಮೌಲ್ಯದ ಡೀಲ್‌ಗಳನ್ನು ಮಾಡಿಕೊಂಡಿದೆ.
ರಾಯಲ್ ಸ್ಟಾಗ್, ಡ್ರೀಮ್ 11, ಜಾಕೋಬ್ಸ್ ಕ್ರೀಕ್, ನಿಯರ್ ಫೌಂಡೇಶನ್, ಫ್ಯಾನ್ ಕ್ರೇಜ್ ಮತ್ತು ಟೈಕಾದಂತಹ ಪಾಲುದಾರರು ಕೂಡಾ ಇದ್ದಾರೆ. ಪ್ರಕಟಣೆಯ ಪ್ರಕಾರ, ಈ ಬ್ರ್ಯಾಂಡ್‌ಗಳು 3 ಮಿಲಿಯನ್ ಡಾಲರ್ ಮತ್ತು 4 ಮಿಲಿಯನ್ ಡಾಲರ್ ನಡುವೆ ಕೊಡುಗೆ ನೀಡುವ ನಿರೀಕ್ಷೆ ಇದೆ. ಈ ಬೆಳವಣಿಗೆಗಳ ಬಗ್ಗೆ ಐಸಿಸಿ ಯಾವುದೇ ಅಧಿಕೃತ ಹೇಳಿಕೆಗಳನ್ನು ನೀಡಿಲ್ಲ.
ಜಾಗತಿಕ ರಾಯಭಾರಿಯಾಗಿ ಸಚಿನ್ ತೆಂಡೂಲ್ಕರ್
ಐಸಿಸಿ ಸಚಿನ್ ತೆಂಡೂಲ್ಕರ್‌ರನ್ನು ಮುಂಬರುವ ಪುರುಷರ ಕ್ರಿಕೆಟ್ ವಿಶ್ವಕಪ್ 2023 ರ ಜಾಗತಿಕ ರಾಯಭಾರಿಯಾಗಿ ನೇಮಿಸಿದೆ. ತನ್ನ ಕಟ್ಟಾ ಅನುಯಾಯಿಗಳಿಂದ ಸಾಮಾನ್ಯವಾಗಿ 'ಕ್ರಿಕೆಟ್ ದೇವರು' ಎಂದು ಕರೆಯಲ್ಪಡುವ 'ಮಾಸ್ಟರ್ ಬ್ಲಾಸ್ಟರ್' ತನ್ನ ಸುಪ್ರಸಿದ್ಧ ವೃತ್ತಿಜೀವನದಲ್ಲಿ ಆರು ಐಸಿಸಿ ವಿಶ್ವಕಪ್‌ಗಳಲ್ಲಿ ಭಾಗವಹಿಸಿದ್ದರು.
More From GoodReturns

Biggest Airport: ಭಾರತದ ಅತಿದೊಡ್ಡ ವಿಮಾನ ನಿಲ್ದಾಣ ಸಂಚಾರಕ್ಕೆ ಸಿದ್ಧ; 45 ದಿನದೊಳಗೆ ಆರಂಭ

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

Silver Rate Today: ಚಿನ್ನದಂತೆ ಬೆಳ್ಳಿ ದರವೂ ಭಾರೀ ಕುಸಿತ; ಒಂದೇ ದಿನ 10,000 ರೂ. ಇಳಿಕೆ

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

LPG ಪೂರೈಕೆಯಲ್ಲಿ ಕೊರತೆ; ದೇಶದಲ್ಲಿ ಎಲ್ಪಿಜಿ ಉತ್ಪಾದನೆ 10% ಹೆಚ್ಚಳ

LPG shortage: ಮಧ್ಯಪ್ರಾಚ್ಯದ ಉದ್ವಿಗ್ನತೆ, ಬೆಂಗಳೂರು-ಮುಂಬೈನಲ್ಲಿ LPG ಕೊರತೆ ಆತಂಕ: ರೆಸ್ಟೋರೆಂಟ್ಗಳು ಮುಚ್ಚುವ ಭೀತಿ

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

YES Bank Rules: ಯೆಸ್ ಬ್ಯಾಂಕ್ ಗ್ರಾಹಕರೇ ಇಲ್ಲಿ ಗಮನಿಸಿ; ಏಪ್ರಿಲ್ 1 ರಿಂದ ಬದಲಾಗಲಿದೆ ನಿಯಮ

Adani Total Gas SHareಷೇರು ಮಾರುಕಟ್ಟೆ ಕುಸಿದರೂ, ನಷ್ಟ ಕಾಣದ ಷೇರು ಇದು; ಯಾವುದು ಗೊತ್ತಾ?

Market Prediction: ನಾಳೆ ಹೇಗಿರಲಿದೆ ಷೇರು ಮಾರುಕಟ್ಟೆ? ಲಾಭವೋ? ನಷ್ಟವೋ? ಇಲ್ಲಿದೆ ಓದಿ



Click it and Unblock the Notifications