ಬೆಂಗಳೂರು, ಮಾರ್ಚ್ 20: ಇಂಗ್ಲೆಂಡ್ ಮೂಲದ, ಮ್ಯಾಗ್ನಮ್-ಐಸ್ ಕ್ರೀಮ್ ತಯಾರಕ ಹಾಗೂ ಜನಪ್ರಿಯ ಬ್ರ್ಯಾಂಡ್ ಯುನಿಲಿವರ್ ಕಂಪೆನಿಯೂ ಜಾಗತಿಕವಾಗಿ 7,500 ಉದ್ಯೋಗ ಕಡಿತ ಮಾಡೋದಾಗಿ ಮಂಗಳವಾರ ಪ್ರಕಟಿಸಿದೆ. ಮಾತ್ರವಲ್ಲದೇ ವೆಚ್ಚ-ಕಡಿತ ಯೋಜನೆಯ ಭಾಗವಾಗಿ ಯೂನಿಲಿವರ್ ಐಸ್‌ಕ್ರೀಂ ವ್ಯವಹಾರವನ್ನು ಸ್ಥಗಿತಗೊಳಿಸಿ ಅದನ್ನು ಪ್ರತ್ಯೇಕಗೊಳಿಸಿ, ಹೊಸ ಉದ್ಯಮವನ್ನಾಗಿಸುವ ಯೋಜನೆ ರೂಪಿಸಿದೆ.
ಯುನಿಲಿವರ್, ಮ್ಯಾಗ್ನಂ ಹಾಗೂ ಬೆನ್ ಆಂಡ್ ಜೆರಿಯಂತಹ ಜನಪ್ರಿಯ ಐಸ್ ಕ್ರೀಮ್ ಬ್ರ್ಯಾಂಡ್ ಗಳನ್ನು ಹೊಂದಿದೆ. ಇನ್ನು ಯನಿಲಿವರ್ ವಿಭಜನೆ ಪ್ರಕ್ರಿಯೆ ತಕ್ಷಣದಿಂದಲೇ ಆರಂಭವಾಗಲಿದ್ದು, 2025ರ ಅಂತ್ಯಕ್ಕೆ ಕೊನೆಗೊಳ್ಳುವ ನಿರೀಕ್ಷೆಯಿದೆ ಎಂದು ಯುನಿಲಿವರ್ ತಿಳಿಸಿದೆ.

"2025 ರ ಅಂತ್ಯ ದ ವೇಳೆಗೆ ಐಸ್ ಕ್ರೀಮ್ ವ್ಯವಹಾರದ ಸಂಪೂರ್ಣ ಪ್ರತ್ಯೇಕತೆಯನ್ನು ನಿರೀಕ್ಷಿಸಬಹುದು. ಪ್ರತ್ಯೇಕತೆಯ ಬಳಿಕ ಕಂಪನಿಯು ತನ್ನ ನಾವೀನ್ಯತೆ, ಮಾರ್ಕೆಟಿಂಗ್ ಮತ್ತು ಮಾರುಕಟ್ಟೆಗೆ ಪ್ರವೇಶಿಸುವ ಸಾಮರ್ಥ್ಯಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಜಾರಿಗೆ ತರಬಹುದಾಗಿದೆ. ಐಸ್ ಕ್ರೀಮ್ ವಿಭಿನ್ನ ಕಾರ್ಯಾಚರಣಾ ಮಾದರಿಯನ್ನು ಹೊಂದಿದೆ. ಹೀಗಾಗಿ ಐಸ್ ಕ್ರೀಮ್ ಅನ್ನು ಬೇರ್ಪಡಿಸುವುದು ಐಸ್ ಕ್ರೀಮ್ ಮತ್ತು ಯೂನಿಲಿವರ್ ಎರಡರ ಭವಿಷ್ಯದ ಬೆಳವಣಿಗೆಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಮಂಡಳಿಯುನಿರ್ಧರಿಸಿದೆ" ಎಂದು ಮಾರ್ಚ್ 19ರಂದು ಹೇಳಿಕೆಯಲ್ಲಿ ಸಂಸ್ಥೆ ತಿಳಿಸಿದೆ.
ಯೂನಿಲಿವರ್ ವಿಭಜನೆಯ ನಂತರ ಮಾರಾಟದ ಬೆಳವಣಿಗೆ ಮತ್ತು ಸಾಧಾರಣ ಮಾರ್ಜಿನ್ ಸುಧಾರಣೆಯನ್ನು "ಸರಳ ಮತ್ತು ಹೆಚ್ಚು ಕೇಂದ್ರೀಕೃತ ಕಂಪನಿ" ಯಾಗಿ ಪರಿವರ್ತಿಸುವ ಗುರಿಯನ್ನು ಹೊಂದಿದೆ ಎಂದು ಯೂನಿಲಿವರ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಮತ್ತೊಂದೆಡೆ ಐಸ್ ಕ್ರೀಮ್ ಘಟಕವನ್ನು ಪ್ರತ್ಯೇಕಿಸುವುದರಿಂದ ಯುನಿಲಿವರ್ ಗೆ ಕೆಲವು ಸಮಸ್ಯೆಗಳು ತಗ್ಗಲಿವೆ ಎಂದು ಲೆಕ್ಕಚಾರ ಹಾಕಲಾಗಿದೆ.
"ಐಸ್ ಕ್ರೀಂ ಸಂಸ್ಥೆಯ ಪ್ರತ್ಯೇಕತೆ ಮತ್ತು ಉತ್ಪಾದಕತೆಯು ಹೆಚ್ಚಿನ ಕಾರ್ಯಕ್ಷಮತೆಯ ಯೂನಿಲಿವರ್ ಅನ್ನು ರಚಿಸಲು ಸಹಾಯ ಮಾಡುತ್ತದೆ. ಇದು ವಿಶ್ವ-ಪ್ರಮುಖ ಐಸ್ ಕ್ರೀಮ್ ಬ್ರ್ಯಾಂಡ್ ಆಗುವತ್ತ ಕೆಲಸ ಮಾಡುತ್ತದೆ. ಜೊತೆಗೆ ಸ್ವತಂತ್ರ ವ್ಯವಹಾರವಾದರೆ ಉತ್ತಮ ಭವಿಷ್ಯದ ರಚನೆಯೂ ಸಾಧ್ಯವಾಗುತ್ತದೆ, "ಎಂದು ಯೂನಿಲಿವರ್‌ನ ಅಧ್ಯಕ್ಷ ಇಯಾನ್ ಮೀಕಿನ್ಸ್ ಹೇಳಿದ್ದಾರೆ.
ಈ ಉದ್ಯೋಗ ಕಡಿತವು ಮುಖ್ಯವಾಗಿ ಕಚೇರಿ ಕೇಂದ್ರೀಕೃತ ಉದ್ಯೋಗಿಗಳ ಮೇಲೆ ನೇರ ಪರಿಣಾಮ ಬೀರುವ ನಿರೀಕ್ಷೆ ಇದೆ. ಈ ಪುನರಚನೆಯ ಬಳಿಕ ಕಂಪನಿಯು ಸೌಂದರ್ಯ ಹಾಗೂ ಆರೋಗ್ಯ ವರ್ಧನೆ, ಪರ್ಸನಲ್ ಕೇರ್, ಹೋಂ ಕೇರ್ ಹಾಗೂ ನ್ಯೂಟ್ರಿಷಿಯನ್ ಈ ಉದ್ಯಮಗಳ ಮೇಲೆ ತನ್ನ ಗಮನವನ್ನು ಕೇಂದ್ರೀಕರಿಸಲಿದೆ.
ಈ ಪುನರಚನೆಯಿಂದ ಮುಂದಿನ ಮೂರು ವರ್ಷಗಳಲ್ಲಿ ಅಂದಾಜು 800 ಮಿಲಿಯನ್ ಯುರೋಸ್ ಒಟ್ಟು ವೆಚ್ಚ ಉಳಿತಾಯ ಮಾಡುವ ನಿರೀಕ್ಷೆಯನ್ನು ಯೂನಿಲಿವರ್ ಹೊಂದಿದೆ ಆದರೆ ಈ ಬದಲಾವಣೆಯಿಂದ ವಿಶ್ವದಾದ್ಯಂತ ಸಂಸ್ಥೆಯ ಒಟ್ಟು 7,500 ಮಂದಿ ಉದ್ಯೋಗ ಕಳೆದುಕೊಳ್ಳುವ ನಿರೀಕ್ಷೆಯಿದೆ.


Click it and Unblock the Notifications