ಪ್ರಮುಖ ಖಾಸಗಿ ಬ್ಯಾಂಕ್‌ಗಳಲ್ಲಿ ಒಂದಾದ ಐಸಿಐಸಿಐ ಬ್ಯಾಂಕ್ ಶನಿವಾರ 2020-21ನೇ ಸಾಲಿನ ಮೂರನೇ ತ್ರೈಮಾಸಿಕ ವರದಿಯನ್ನು ಪ್ರಕಟಿಸಿದ್ದು, ಬ್ಯಾಂಕ್‌ನ ನಿವ್ವಳ ಲಾಭ ಶೇಕಡಾ 19ರಷ್ಟು ಏರಿಕೆಗೊಂಡು 4,940 ಕೋಟಿ ರೂಪಾಯಿಗೆ ತಲುಪಿದೆ.
ಡಿಸೆಂಬರ್ 31ಕ್ಕೆ ಕೊನೆಗೊಂಡ ಮೂರನೇ ತ್ರೈಮಾಸಿಕದಲ್ಲಿ ಬ್ಯಾಂಕ್ 4,940 ಕೋಟಿ ರೂಪಾಯಿಗಳಿಸಿದ್ದು, ವರ್ಷದ ಹಿಂದೆ 4,146 ಕೋಟಿ ರೂಪಾಯಿ ನಿವ್ವಳ ಲಾಭ ದಾಖಲಿಸಿತ್ತು.
ದೇಶದ ಎರಡನೇ ಬಹುದೊಡ್ಡ ಖಾಸಗಿ ಬ್ಯಾಂಕ್ ಐಸಿಐಸಿಐನ ಒಟ್ಟು ಆದಾಯವು ಶೇಕಡಾ 3ರಷ್ಟು ಹೆಚ್ಚಳವಾಗಿ, 24,416 ಕೋಟಿ ರೂಪಾಯಿಗೆ ತಲುಪಿದೆ. ಹಿಂದಿನ ವರ್ಷದ ಅವಧಿಯಲ್ಲಿ 23,638 ಕೋಟಿ ರೂಪಾಯಿಗೆ ಹೋಲಿಸಿದರೆ ಶೇಕಡಾ 3ರಷ್ಟು ಹೆಚ್ಚಳವಾಗಿದೆ.

2020 ರ ಡಿಸೆಂಬರ್ 31 ರಂದು ಒಟ್ಟು ಠೇವಣಿಗಳು ವರ್ಷದಿಂದ ವರ್ಷಕ್ಕೆ ಶೇಕಡಾ 22ರಷ್ಟು, ಹೆಚ್ಚಾಗಿ 8,74,348 ಕೋಟಿಗೆ ಏರಿದೆ. ತೃತೀಯ ತ್ರೈಮಾಸಿಕದಲ್ಲಿ ಬ್ಯಾಂಕ್ ಕರೆಂಟ್ ಮತ್ತು ಸೇವಿಂಗ್ಸ್ ಅಕೌಂಟ್ (ಸಿಎಎಸ್ಎ) ಠೇವಣಿಗಳಲ್ಲಿ ಶೇಕಡಾ 19ರಷ್ಟು ಬೆಳವಣಿಗೆಯನ್ನು ಕಂಡಿದ್ದು, ಸರಾಸರಿ ಸಿಎಎಸ್ಎ ಅನುಪಾತ ಶೇಕಡಾ 41.8ರಷ್ಟಿದೆ ಇನ್ನು ಟರ್ಮ್ ಠೇವಣಿಗಳು 2020 ರ ಡಿಸೆಂಬರ್ 31ರಂದು ವರ್ಷದಿಂದ ವರ್ಷಕ್ಕೆ ಶೇಕಡಾ 26ರಷ್ಟು ಹೆಚ್ಚಾಗಿದೆ.


Click it and Unblock the Notifications