ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆಯು ಚೇತರಿಕೆ ಹಾದಿಯಲ್ಲಿ ಇದ್ದರೂ ದುರ್ಬಲವಾಗಿದ್ದು, ಹೆಚ್ಚುತ್ತಿರುವ ವೆಚ್ಚ ಮತ್ತು ಕೆಲವು ಪ್ರದೇಶಗಳಲ್ಲಿ ಮತ್ತೆ ಕಾಣಿಸಿಕೊಳ್ಳುತ್ತಿರುವ ಪೂರೈಕೆ ವ್ಯತ್ಯಯವು ಆತಂಕಕ್ಕೆ ಕಾರಣ ಆಗಿದೆ ಎಂದು ತನ್ನ ವರದಿಯಲ್ಲಿ ICRA ಹೇಳಿದೆ.
FY21ರ ಮೂರನೇ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿಯಲ್ಲಿ 1%ನಷ್ಟು ಇಳಿಕೆ ಆಗಬಹುದು ಎಂಬ ನಮ್ಮ ಅಂದಾಜನ್ನು ಮುಂದುವರಿಸಿದ್ದೇವೆ. ಆದರೂ ರಾಬಿ ಋತುವಿನ ಬಗೆಗಿನ ಉಜ್ವಲ ಭಾರಸೆ ಮತ್ತು ಕೊರೊನಾ ಲಸಿಕೆಯ ಆಶಾದಾಯಕ ಬೆಳವಣಿಗೆ ಸೇರಿಕೊಂಡು ಬೇಡಿಕೆಗೆ ಜೀವ ತುಂಬಿದೆ. FY21ರ ನಾಲ್ಕನೇ ತ್ರೈಮಾಸಿಕಕ್ಕೆ ಹುರುಪು ತಂದಿದೆ ಎಂದು ಇಕ್ರಾ ಹೇಳಿದೆ.
ತಾಂತ್ರಿಕ ಆರ್ಥಿಕ ಕುಸಿತವು ಆ ತ್ರೈಮಾಸಿಕದಲ್ಲಿ ಕೊನೆಯಾಗಬಹುದು. ನಿಜವಾದ ಚೇತರಿಕೆ ಹಾಗೂ ಮೂಲಭೂತವಾಗಿ ಹೆಚ್ಚಿನ ಪರಿಣಾಮ ಇಲ್ಲದೆ 1.3% ಬೆಳವಣಿಗೆ ಆಗಬಹುದು. ಈ ಕಾರಣಗಳಿಗಾಗಿ ಭಾರತದ ವಾಸ್ತವ ಜಿಡಿಪಿಯು FY2021ಕ್ಕೆ 7.8% ಕುಗ್ಗಬಹುದು ಎಂದು ಹೇಳಲಾಗಿದೆ.

ಇಕ್ರಾ ರೇಟಿಂಗ್ ಏಜೆನ್ಸಿಯ ಪ್ರಕಾರ, ಲಭ್ಯ ಇರುವ ದತ್ತಾಂಶ ತಿಳಿಸುವಂತೆ ಗ್ರಾಹಕರ ಬೇಡಿಕೆಯಲ್ಲಿನ ಚೇತರಿಕೆ ಹಾಗೂ ಪ್ರಮಾಣವು FY21ರ ಮೂರನೇ ತ್ರೈಮಾಸಿಕದಲ್ಲಿ ಹಲವು ವಲಯಗಳಲ್ಲಿ ತಾತ್ಕಾಲಿಕವಾಗಿರುತ್ತದೆ.
ಆರ್ ಬಿಐ ಸಮೀಕ್ಷೆ ತಿಳಿಸುವಂತೆ ನಗರ ಗ್ರಾಹಕರ ಭಾವನಾತ್ಮಕತೆ ಸ್ವಲ್ಪ ಮಟ್ಟಿಗೆ ಚೇತರಿಕೆ ಕಂಡಿದೆ. ಆದರೆ ಹಲವು ವಲಯಗಳಲ್ಲಿ ಇನ್ನೂ ಪೂರ್ಣ ಪ್ರಮಾಣದಲ್ಲಿ ಸ್ಥಿರತೆ ಕಾಣಿಸಿಕೊಳ್ಳಬೇಕಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ದುರ್ಬಲ ಆಗಿದ್ದ ವಲಯಗಳಲ್ಲೂ ಈ ಬಾರಿ ಬೆಳವಣಿಗೆ ಕಾಣಿಸಿದೆ. ಆದರೂ FY2019ರ ಮಟ್ಟಕ್ಕಿಂತ ಹಲವು ವಲಯಗಳು ಕೆಳ ಮಟ್ಟದಲ್ಲೇ ಇವೆ. ಪೂರ್ಣ ಪ್ರಮಾಣದ ಚೇತರಿಕೆ ಇನ್ನೂ ಬಹಳ ದೂರ ಇದೆ ಎಂದು ಇಕ್ರಾ ಹೇಳಿದೆ.
ಆಟೋಮೊಬೈಲ್ಸ್, ಕ್ಯಾಪಿಟಲ್ ಗೂಡ್ಸ್ ನಂಥ ವಲಯಗಳಿಂದಲೂ ಬೇಡಿಕೆ ಕಾಣಿಸಿಕೊಂಡು ಖಾತ್ರಿ ಆಗಲು ಎದುರು ನೋಡುತ್ತಿದ್ದೇವೆ. ಜತೆಗೆ ಕೆಲವು ರಾಜ್ಯಗಳಲ್ಲಿ ಮತ್ತೆ ಪೂರೈಕೆ ಹಾಗೂ ಸಾಗಾಟ ಸಮಸ್ಯೆ ಕಾಣಿಸಿಕೊಂಡಿದೆ. ಕೊರೊನಾಗೆ ಲಸಿಕೆ ಬರುತ್ತದೆ ಎಂದಾದ ಮೇಲೆ ಜಾಗತಿಕ ಮಟ್ಟದಲ್ಲಿ ವಸ್ತುಗಳ ಬೆಲೆ ಏರಿಕೆ ಆಗುತ್ತಿದೆ. ಇನ್ನು ಕಂಪೆನಿಗಳು ವೇತನ ಹೆಚ್ಚಳ ಮಾಡುತ್ತಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.


Click it and Unblock the Notifications