ಇಡ್ಲಿ ತಿಂದರೆ ಕ್ಯಾನ್ಸರ್..? ಕರ್ನಾಟಕದಲ್ಲಿ ಹಲವು ಇಡ್ಲಿ ಮಾದರಿಗಳ ಪರೀಕ್ಷೆ..ಆರೋಗ್ಯಕರ ಇಡ್ಲಿಯಲ್ಲೇ ಹಾನಿಕಾರಕ ಅಂಶ ಪತ್ತೆ..!

ಕರ್ನಾಟಕದಲ್ಲಿ ಇಡ್ಲಿ ಅದೆಷ್ಟೋ ಜನರಿಗೆ ಫೇವರೇಟ್ ಫುಡ್. ಇಡ್ಲಿ ಇಲ್ಲದೇ ಕೆಲವರಿಗೆ ಬೆಳಗಿನ ಉಪಹಾರವೇ ಆಗುವುದಿಲ್ಲ. ಹೀಗಾಗಿಯೇ ಕರ್ನಾಟಕದಲ್ಲಿ ಇಡ್ಲಿಗೊಂದು ವಿಶೇಷವಾದ ಬೇಡಿಕೆಯಿದೆ. ಅದ್ರಲ್ಲೂ ಡಯಟ್ ಮಾಡುವವರು ಇಡ್ಲಿ ಬೆಸ್ಟ್ ಬ್ರೇಕ್‌ಫಾಸ್ಟ್ ಅಂತಲೇ ಹೇಳುತ್ತಾರೆ. ಆದರೆ ಅದೇ ಇಡ್ಲಿಯಲ್ಲಿ ಈಗ ಕ್ಯಾನ್ಸರ್ ಕಾರಕ ಅಂಶ ಕಂಡುಬಂದಿದೆ ಎನ್ನುವುದು ದುರಾದೃಷ್ಟಕರ ಸಂಗತಿ. ಏಕೆಂದರೆ ಇಡ್ಲಿ ತಯಾರಿಕೆಗೆ ಬಹುತೇಕ ಕಡೆ ಪ್ಲಾಸ್ಟಿಕ್ ಬಳಸುತ್ತಾರೆ. ಇತ್ತೀಚೆಗಷ್ಟೇ ಕರ್ನಾಟಕದಲ್ಲಿ ದೊಡ್ಡ ದೊಡ್ಡ ರೆಸ್ಟೋರೆಂಟ್‌ಗಳಿಂದ ಹಿಡಿದು, ಬೀದಿಬದಿಯ ಹೋಟೆಲ್‌ಗಳಲ್ಲಿ ಮಾರಾಟವಾಗುವ ಇಡ್ಲಿಗಳ ಮಾದರಿ ಪರೀಕ್ಷೆ ಮಾಡಲಾಗಿದೆ. ಅಂದರೆ 500 ಮಾದರಿಗಳನ್ನು ಪರೀಕ್ಷೆ ಮಾಡಲಾಗಿದ್ದು, 35 ಮಾದರಿಗಳಲ್ಲಿ ಕ್ಯಾನ್ಸರ್‍‌ಕಾರಕ ಅಂಶ ಇರುವುದು ಪತ್ತೆಯಾಗಿದೆ. ಹೀಗಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಪ್ಲಾಸ್ಟಿಕ್ ವಿರೋಧಿ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.

ಇದೊಂದು ಗಂಭೀರವಾದ ವಿಚಾರವಾಗಿದೆ. ಇಡ್ಲಿಗಳನ್ನು ಬೇಯಿಸಲು ಪಾಲಿಥಿನ್ ಹಾಳೆಗಳ ಬಳಕೆ ಆರೋಗ್ಯಕ್ಕೆ ತುಂಬಾ ಹಾನಿಕಾರಕ. ಅಲ್ಲದೇ ತಾಪಮಾನದಲ್ಲಿ ಬೇಯುವ ಪ್ಲಾಸ್ಟಿಕ್‌ನ ಹಾನಿಕಾರಕ ಅಂಶಗಳು ಇಡ್ಲಿಯೊಂದಿಗೆ ವಿಲೀನಗೊಳ್ಳುತ್ತೆ. ವಿಷಕಾರಿ ರಾಅಸಾಯನಿಕಗಳನ್ನು ಇಡ್ಲಿಯೊಂದಿಗೆ ಸೇರಿಸುತ್ತದೆ. ಇದರಿಂದ ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಕರ್ನಾಟಕದಲ್ಲಿ ಹಲವು ಇಡ್ಲಿ ಮಾದರಿಗಳ ಪರೀಕ್ಷೆ

ಸದ್ಯ ರಾಜ್ಯ ಸರ್ಕಾರ ಮತ್ತು ಆಹಾರ ಸುರಕ್ಷತಾ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡಿದೆ. ಇಂತಹ ಕೆಲಸಗಳನ್ನು ತಡೆಗಟ್ಟಿ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಲು ಮುಂದಾಗಿದೆ. ಇಡ್ಲಿ ತಯಾರಿಸಲು ಪ್ಲಾಸ್ಟಿಕ್ ಬಳಕೆಯ ಬದಲು, ಪರ್ಯಾಯವಾಗಿ ಮರದ ಎಲೆಗಳು ಅಥವಾ ಹಣ್ಣುಗಳ ಎಲೆಗಳನ್ನು ಬಳಸಬಹುದು. ಈ ಪ್ರಯತ್ನದಿಂದ ಹಣ್ಣುಗಳ ಎಲೆಗಳಲ್ಲಿರುವ ಆರೋಗ್ಯಕರ ಅಂಶ ಇಡ್ಲಿಯೊಂದಿಗೆ ಬೆರೆತರೆ ಉತ್ತಮ. ಹಾಗೂ ಇದು ಪರಿಸರ ಸ್ನೇಹಿಯಾಗಿರುವುದರಿಂದ ಬಿಸಾಡಿದಾಗ ಮಣ್ಣಲ್ಲೇ ಗೊಬ್ಬರವಾಗುತ್ತದೆ. ಪ್ರಾಣಿಗಳ ಬಾಯಿಗೆ ಪ್ಲಾಸ್ಟಿಕ್‌ ಸಿಗುವುದು ಕಡಿಮೆಯಾಗುತ್ತದೆ ಎನ್ನಲಾಗಿದೆ.

ಇನ್ನು ಹಲವು ವರ್ಷಗಳ ಹಿಂದೆ ಇಡ್ಲಿ ಬ್ಯಾಟರ್‍‌ನ ಶುದ್ಧ ಹತ್ತಿ ಬಟ್ಟೆಗಳ ಮೇಲೆ ಹಾಕಿ ಇಡ್ಲಿ ತಯಾರಿಸಲಾಗುತ್ತಿತ್ತು. ಬಳಿಕ ಅವುಗಳನ್ನು ಆವಿಯಲ್ಲಿ ಬೇಯಿಸುವ ಮೊದಲು ಟ್ರೇಗಳಲ್ಲಿ ಇಡಲಾಗುತ್ತಿತ್ತು. ಈಗಲೂ ಕೆಲವೊಂದು ಕಡೆ ಇಡ್ಲಿ ತಯಾರಿಕೆ ಹಾಗೆಯೇ ನಡೆಯುತ್ತಿದೆ. ಆದರೂ ಅನೇಕ ರೆಸ್ಟೋರೆಂಟ್‌ಗಳು ಮತ್ತು ರಸ್ತೆಬದಿಯ ಹೋಟೆಲ್‌ಗಳಲ್ಲಿ ಪ್ಲಾಸ್ಟಿಕ್ ಹಾಳೆಗಳನ್ನು ಬಳಸುತ್ತಿದ್ದಾರೆ. ಏಕೆಂದರೆ ಬಟ್ಟೆ ಬಳಸುವ ವಿಧಾನದಿಂದ ಅದನ್ನು ಪದೇ ಪದೆ ತೊಳೆಯುವ ಕೆಲಸ ಇರುತ್ತಿತ್ತು. ಮತ್ತು ಅದನ್ನು ಸ್ವಚ್ಛವಾಗಿ ತೊಳೆಯಲೆಂದೇ ಒಬ್ಬರು ಕೆಲಸಗಾರರು ಬೇಕಿತ್ತು. ಇದು ಸ್ವಲ್ಪ ಕಷ್ಟದ ಕೆಲಸವಾಗಿತ್ತು. ಹೀಗಾಗಿಯೇ ಪರ್ಯಾಯವಾಗಿ ಪ್ಲಾಸ್ಟಿಕ್ ಬಳಕೆಯ ಮೊರೆ ಹೋದರು. ಇದು ಅತೀ ಕಡಿಮೆ ಬೆಲೆಯೂ ಆಗಿತ್ತು. ಆದರೆ ಇದು ಆರೋಗ್ಯಕ್ಕೆ ಹಾನಿಕಾರಕವಾಗಿದ್ದು, ಪ್ಲಾಸ್ಟಿಕ್‌ನ ಅವನತಿಯು ರಾಸಾಯನಿಕ ಮಾಲಿನ್ಯಕಾರಕಗಳನ್ನು ಬಿಡುಗಡೆ ಮಾಡಲು ಕಾರಣವಾಗುತ್ತಿದೆ ಎಂದು ಆರೋಗ್ಯ ಅಧಿಕಾರಿಗಳು ನಂಬಿದ್ದಾರೆ.

ಹೋಟೆಲ್‌ಗಳಲ್ಲಿ, ದೊಡ್ಡ ದೊಡ್ಡ ರೆಸ್ಟೋರೆಂಟ್‌ಗಳಲ್ಲಿ ಹಾಗೂ ಬೀದಿಬದಿಯ ಕ್ಯಾಂಟೀನ್‌ಗಳಲ್ಲಿ ಪ್ಲಾಸ್ಟಿಕ್ ಬಳಕೆಯ ಅಭ್ಯಾಸವನ್ನು ಸಂಪೂರ್ಣವಾಗಿ ನಿಲ್ಲಿಸುವುದನ್ನು ಖಚಿತಪಡಿಸಿಕೊಳ್ಳಲು, ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎನ್ನಲಾಗುತ್ತಿದೆ. ಅಂದರೇ ಪ್ಲಾಸ್ಟಿಕ್ ಬಳಸುವ ಪದ್ದತಿಯನ್ನು ಅನುಸರಿಸುವವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ. ಇಡ್ಲಿಯಷ್ಟೇ ಅಲ್ಲದೇ ಯಾವುದೇ ಆಹಾರ ತಯಾರಿಕೆ ಪ್ರಕ್ರಿಯೆಗಳಲ್ಲಿ ಪ್ಲಾಸ್ಟಿಕ್‌ನ ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಸಚಿವಾಲಯ ತಿಳಿಸಿದೆ.

ಅಲ್ಲದೇ ಯಾರಾದರೂ ಪ್ಲಾಸ್ಟಿಕ್ ಬಳಸಿ ಆಹಾರ ತಯಾರಿಸುತ್ತಿದ್ದರೆ ಅದನ್ನು, ಸರ್ಕಾರದ ಗಮನಕ್ಕೆ ತರಬೇಕು ಎಂದು ದಿನೇಶ್ ಗುಂಡೂರಾವ್ ಅವರು ಹೇಳಿದ್ದಾರೆ. ಬೆಂಗಳೂರಿನ ಆರೋಗ್ಯ ಅಧಿಕಾರಿಗಳು ಈಗಾಗಲೇ 500 ಮಾದರಿಗಳನ್ನು ಸಂಗ್ರಹಿಸಿ ಅದರಲ್ಲಿ 35 ಮಾದರಿಗಳಲ್ಲಿ ಕ್ಯಾನ್ಸರ್‍‌ಕಾರಕ ಅಂಶ ಪತ್ತೆಯಾಗಿದೆ. ಆದರೂ ಇನ್ನೂ ಹೆಚ್ಚುವರಿಯಾಗಿ ನೂರಾರು ಮಾದರಿಗಳ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ.
ಇನ್ನು ಹೋಟೆಲ್‌ಗಳಲ್ಲಿ ಸಿಗುವ ಇತರ ತಿನಿಸುಗಳಿಗೆ ಅರಿವು ಮೂಡಿಸುವ ಅಭಿಯಾನವನ್ನು ಸಚಿವಾಲಯವು ಪ್ರಾರಂಭಿಸುತ್ತಿದೆ ಮತ್ತು ಉಲ್ಲಂಘನೆಗಳಿಗೆ ದಂಡ ವಿಧಿಸುವ ನಿಬಂಧನೆಗಳನ್ನು ತರುವ ಬಗ್ಗೆಯೂ ಯೋಚಿಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+