ನವದೆಹಲಿ, ಜುಲೈ 15: ನಾವು ದೂರದ ಊರಿಗೆ ಪ್ರಯಾಣ ಮಾಡಬೇಕಿದ್ದರೆ ತಿಂಗಳುಗಳ ಮೊದಲೆ ಟಿಕೆಟ್ ಬುಕ್ ಮಾಡಿರುತ್ತೇವೆ. ಆದರೆ ಕೊನೆ ಕ್ಷಣದಲ್ಲಿ ಅನಿವಾರ್ಯಕ್ಕೆ ಸಿಕ್ಕು ಟಿಕೆಟ್ ಕ್ಯಾನ್ಸಲ್ ಮಾಡಬೇಕಾಗುತ್ತದೆ. ಟಿಕೆಟ್ ಕ್ಯಾನ್ಸಲ್ ಮಾಡಿಕೊಂಡರೆ ಅಪಾರ ನಷ್ಟ ಮಾಡಿಕೊಳ್ಳಬೇಕಾಗುತ್ತದೆ. ಹಾಗಿದ್ದರೆ ಇಂಥ ನಷ್ಟದಿಂದ ಪಾರಾಗುವುದು ಹೇಗೆ? ನಿಮಗೆ ಹಣ ರೀಫಂಡ್ ಆಗುವುದಕ್ಕೆ ಏನು ಮಾಡಬೇಕು?
ವಿಮಾನ ರದ್ದತಿ, ಹೋಟೆಲ್ ಬುಕಿಂಗ್ ಕ್ಯಾನ್ಸಲೇಷನ್, ರೈಲ್ವೇ, ಚಲನಚಿತ್ರ ಟಿಕೆಟ್ ಅಥವಾ ಇನ್ನಾವುದೇ ಆಗಿರಲಿ, ರದ್ದತಿ ನೀತಿಯ ಬಗ್ಗೆ ಓದುವ ಅಗತ್ಯವಿಲ್ಲ ಅಂತ ತುಂಬಾ ಜನ ಭಾವಿಸಿದ್ದಾರೆ. ಅಲ್ಲದೇ ಆತುರದಿಂದ ಸಾವಿರಾರು ರೂಪಾಯಿ ಖರ್ಚು ಮಾಡಿ ಟಿಕೆಟ್ ಪಡೆಯುತ್ತಾರೆ. ಒಂದು ವೇಳೆ ಟಿಕೆಟ್ ಕ್ಯಾನ್ಸಲ್ ಮಾಡಿದ್ರೆ ಏನಾಗುತ್ತದೆ ಅನ್ನೋದು ಗೊತ್ತಿರೋದಿಲ್ಲ. ಎಷ್ಟು ರೀಫಂಡ್ ಸಿಗುತ್ತೆ..? ಅದಕ್ಕಾಗಿ ಯಾವುದೇ ವೆಬ್ಸೈಟ್ನಿಂದ ಟಿಕೆಟ್ ಬುಕ್ ಮಾಡುವ ಮುನ್ನ ನೀತಿ-ನಿಯಮಗಳನ್ನು ಓದಿಕೊಳ್ಳೋದು ಮುಖ್ಯವಾಗಿದೆ.

ಅಲ್ಲದೇ ಬೇರೆ ಬೇರೆ ರೀತಿಯ ಸೈಟ್ಗಳಲ್ಲಿ ಬೇರೆ ಬೇರೆ ರೀತಿಯ ನೀತಿ ನಿಯಮ ಇರುತ್ತದೆ. ವಾಸ್ತವವಾಗಿ, ನಿಮ್ಮ ಹಣವನ್ನು ನೀವು ರಕ್ಷಿಸಬಹುದು. ಮೂವಿ ಟಿಕೆಟ್, ಹೋಟೆಲ್ ಬುಕಿಂಗ್ ಅಥವಾ ಫ್ಲೈಟ್ ಟಿಕೆಟ್‌ಗಳಾಗಿರಲಿ, ಪ್ರತಿ ಬುಕಿಂಗ್ ಸೈಟ್ ಕೂಡ ನಿಮ್ಮನ್ನು ರದ್ದತಿಯಿಂದ ಉಳಿಸುವ ನಿಬಂಧನೆಗಳನ್ನು ಹೊಂದಿದೆ. ಆದರೆ ಇದಕ್ಕಾಗಿ ನೀವು ಸ್ವಲ್ಪ ಹೆಚ್ಚುವರಿ ಪಾವತಿಸಬೇಕಾಗಬಹುದು.
ಇತ್ತೀಚಿನ ದಿನಗಳಲ್ಲಿ, ಆನ್‌ಲೈನ್ ಟ್ರಾವೆಲ್ ಸೈಟ್‌ಗಳ ಮೂಲಕ ಟಿಕೆಟ್‌ಗಳನ್ನು ಬುಕ್ ಮಾಡೋದು ಲಾಭದಾಯಕವಾಗಿದೆ. ನೀವು ಆನ್‌ಲೈನ್ ಟ್ರಾವೆಲ್ ಸೈಟ್‌ನಿಂದ ಟಿಕೆಟ್‌ಗಳನ್ನು ಬುಕ್ ಮಾಡಿದಾಗ, ನೀವು ಶೂನ್ಯ ರದ್ದತಿ ಆಯ್ಕೆಯನ್ನ ಆರಿಸಿಕೊಳ್ಳಬೇಕು. ಇದಕ್ಕಾಗಿ, ನೀವು ಕನಿಷ್ಟ 500-600 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಅಂದರೆ ಒಂದು ವೇಳೆ ನೀವು ಟಿಕೆಟ್ ಕ್ಯಾನ್ಸಲ್ ಮಾಡಿಕೊಂಡರೆ ಆಗ ನೀವು 100% ಮರುಪಾವತಿ ಪಡೆಯುತ್ತೀರಿ. ಅದೇ ರೀತಿ, ನೀವು ಹೋಟೆಲ್ ಅನ್ನು ಬುಕ್ ಮಾಡುವಾಗ, ನೀವು ಟ್ರಿಪ್ ಸುರಕ್ಷಿತ ವಿಮೆ ಆಯ್ಕೆಯನ್ನು ಸೇರಿಸಬೇಕು. ಇದಕ್ಕಾಗಿ ನಿಮಗೆ 50-100 ರೂಪಾಯಿ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ. ಈಗ, ನೀವು ಅನಾರೋಗ್ಯಕ್ಕೆ ಒಳಗಾದರೆ ಅಥವಾ ಇತರ ಯಾವುದೇ ತುರ್ತು ಪರಿಸ್ಥಿತಿಯ ಕಾರಣದಿಂದ ನೀವು ಬುಕಿಂಗ್ ರದ್ದುಗೊಳಿಸಿದರೆ ನಿಮ್ಮ ನಷ್ಟವನ್ನು ನಿಮಗೆ ಸರಿದೂಗಿಸಲಾಗುತ್ತದೆ.
ಇನ್ನು ಬಸ್ ಮತ್ತು ರೈಲು ಟಿಕೆಟ್ಗಳನ್ನ ಪ್ರಯಾಣಕ್ಕೂ ಮೊದಲೇ ಕ್ಯಾನ್ಸಲ್ ಮಾಡಿದ್ರೆ ನೀವು ಹೆಚ್ಚಿನ ರೀಫಂಡ್ ಪಡೆಯುತ್ತೀರಿ. ರೈಲ್ವೆ ಟಿಕೆಟ್ ಪ್ರಯಾಣಕ್ಕೆ 48 ಗಂಟೆಗಳ ಮೊದಲು ರದ್ದುಗೊಳಿಸಿದರೆ ನಾಮಿನಲ್ ಕ್ಯಾನ್ಸಲೇಷನ್ ಶುಲ್ಕ ಕೊಡಬೇಕಾಗುತ್ತೆ. ಇದರರ್ಥ ನೀವು ಟಿಕೆಟ್ ಮೊತ್ತವನ್ನು ಸಂಪೂರ್ಣ ಮರಳಿ ಪಡೆಯುತ್ತೀರಿ. ಇನ್ನು 12 ಗಂಟೆಗಳ ಒಳಗೆ ರದ್ದುಗೊಳಿಸಿದರೆ ಶೇಕಡಾ 75 ರಷ್ಟು ಮರುಪಾವತಿಯಾಗುತ್ತದೆ. 12 ಗಂಟೆಗಳಿಗಿಂತ ಕಡಿಮೆ ಮತ್ತು 4 ಗಂಟೆಗಳ ಮೊದಲು ರದ್ದುಗೊಳಿಸಿದರೆ ನಿಮಗೆ ಕೇವಲ ಶೇಕಡಾ 50ರಷ್ಟು ಮರುಪಾವತಿ ಸಿಗುತ್ತದೆ. ಇನ್ನು ಪ್ರಯಾಣದ ದಿನ ನೀವು ಟಿಕೆಟ್ ಕ್ಯಾನ್ಸಲ್ ಮಾಡಿಕೊಂಡರೆ ಆಗ ನಿಮಗೆ ರಿಫಂಡ್ ಸಿಗುವುದಿಲ್ಲ.
ವಿಮಾನಯಾನ ಸಚಿವಾಲಯದ ಏರ್ ಪ್ಯಾಸೆಂಜರ್ ಚಾರ್ಟರ್ ಪ್ರಕಾರ, ಒಂದು ವೇಳೆ ವಿಮಾನ ರದ್ದಾದರೆ ಅಂತಹ ಸಂದರ್ಭಗಳಲ್ಲಿ ಪ್ರಯಾಣಿಕರು ಪರ್ಯಾಯ ವಿಮಾನ ಅಥವಾ ಟಿಕೆಟ್ ಮರುಪಾವತಿ ಅಥವಾ ಪರಿಹಾರಕ್ಕಾಗಿ ವಿನಂತಿಸಬಹುದು. ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರಿಗೆ ಪರ್ಯಾಯ ವಿಮಾನ ಅಥವಾ ಪೂರ್ಣ ಮರುಪಾವತಿಯನ್ನು ಆರಂಭಿಕ ನಿರ್ಗಮನ ಸಮಯದ 2 ಗಂಟೆಗಳ ಒಳಗೆ ಒದಗಿಸಬೇಕು. ಅದೇ ರೀತಿ, ಬಸ್ ರದ್ದುಗೊಂಡರೆ ಮತ್ತು ನೀವು ಸಮಯಕ್ಕೆ ಮರುಪಾವತಿಯನ್ನು ಸ್ವೀಕರಿಸದಿದ್ದರೆ ಮತ್ತು ಬಸ್ ನಿರ್ವಾಹಕರು ಮರುಪಾವತಿ ಪ್ರಕ್ರಿಯೆಯನ್ನು ವಿಳಂಬಗೊಳಿಸಿದರೆ, ನೀವು ಗ್ರಾಹಕರ ವೇದಿಕೆಗೆ ದೂರು ಸಲ್ಲಿಸಬಹುದು. ನೀವು ಮರುಪಾವತಿಯನ್ನು ಜತೆ ಪರಿಹಾರ ಸಹ ಪಡೆದುಕೊಳ್ಳಬೇಕು.
ರದ್ದತಿಯ ಸಂದರ್ಭದಲ್ಲಿ ನೀವು ನಷ್ಟವನ್ನು ತಪ್ಪಿಸುವ ಇನ್ನೊಂದು ಮಾರ್ಗ ಇದೆ. ಅದು ಪ್ರಯಾಣ ವಿಮೆ.. ಪ್ರಯಾಣ ವಿಮೆಯನ್ನು ಮಾಡಿಸೋದು ಉತ್ತಮ ಅಂತ ತಜ್ಞರು ಸಲಹೆ ನೀಡುತ್ತಾರೆ. ಇದು ವಿಮಾನ ರದ್ದತಿ, ಬಸ್ ರದ್ದತಿ ಅಥವಾ ಇನ್ನಾವುದೇ ಅಪಘಾತವಾಗಿರಲಿ, ವಿಮೆಯು ಈ ಎಲ್ಲಾ ರದ್ದತಿಗಳನ್ನು ಒಳಗೊಂಡಿದೆ. ಈ ರೀತಿಯಲ್ಲಿ, ನೀವು ಪರಿಹಾರ ಪಡೆಯುತ್ತೀರಿ ಮತ್ತು ನೀವು ಹಣ ಕಳೆದುಕೊಳ್ಳುವ ಬಗ್ಗೆ ಚಿಂತಿಸದೇ ನಿಮ್ಮ ಪ್ರಯಾಣ ಪ್ಲ್ಯಾನ್ ಮಾಡಬಹುದು.
ಆದ್ದರಿಂದ, ರದ್ದುಗೊಳಿಸುವ ಗೋಜಿನಲ್ಲಿ ನಿಮ್ಮ ಸಂಪೂರ್ಣ ಟಿಕೆಟ್ ಮೊತ್ತವನ್ನು ಕಳೆದುಕೊಳ್ಳಬೇಡಿ. ನಾವು ಕೊಟ್ಟ ಕೆಲವೊಂದು ಸಲಹೆಗಳನ್ನು ಪ್ರಯತ್ನಿಸಿ.. ಮೊದಲನೆಯದಾಗಿ, ನೀವು ಪೂರ್ಣ ಮರುಪಾವತಿಯನ್ನು ಪಡೆಯಲು ಸಾಧ್ಯವಾಗದಿದ್ದರೆ, ನೀವು ಭಾಗಶಃ ಮರುಪಾವತಿಗೆ ಅರ್ಹರಾಗಿದ್ದೀರಾ ಅನ್ನೋದನ್ನ ಖಚಿತಪಡಿಸಿಕೊಳ್ಳಿ. ನಿಮ್ಮ ಹಣ ಪೋಲಾಗದಂತೆ ರಕ್ಷಿಸಿಕೊಳ್ಳುವ ಜವಾಬ್ದಾರಿ ನಿಮ್ಮ ಬಳಿಯೇ ಇರುತ್ತದೆ.


Click it and Unblock the Notifications