ಭಾರತದ ಆರ್ಥಿಕತೆ ವೇಗವಾಗಿ ಬೆಳೆಯುತ್ತಿದೆ. ವಿಶ್ವದ ಅನೇಕ ದೊಡ್ಡ ದೇಶಗಳು ಆರ್ಥಿಕ ಹಿಂಜರಿತದ ಸಮಸ್ಯೆಗೆ ಸಿಲುಕಿಕೊಂಡಿವೆ. ಆದರೆ ಭಾರತ ಮಾತ್ರ ಆರ್ಥಿಕತೆಯಲ್ಲಿ ವೇಗವಾಗಿ ಬೆಳೆಯುತ್ತಿದೆ. ಕಳೆದೆರಡು ದಿನಗಳಲ್ಲಿ ವಿಶ್ವದ ಪ್ರತಿಷ್ಠಿತ ಆರ್ಥಿಕ ಸಂಸ್ಥೆಗಳು ಭಾರತ 2025ರ ಒಳಗೆ ಅರ್ಥಿಕತೆಯ ಲೆಕ್ಕಾಚಾರದಲ್ಲಿ ಮೂರನೇ ಸ್ಥಾನಕ್ಕೆ ಹೋಗುತ್ತದೆ ಎಂದು ಭವಿಷ್ಯವನ್ನು ನುಡಿದಿವೆ.
ಐಎಂಎಫ್ ಪ್ರಕಾರ ಭಾರತ 2026ರಲ್ಲಿ ಜಪಾನ್ ದೇಶವನ್ನು ಹಾಗೂ 2027ರಲ್ಲಿ ಜರ್ಮನಿಯನ್ನು ಹಿಂದಿಕ್ಕಲಿದೆ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುತ್ತದೆ ಎಂದು ತಿಳಿಸಿದೆ. ಜಪಾನ್ ಮತ್ತು ಜರ್ಮನಿಯ ಆರ್ಥಿಕತೆಗಳು ಇದೀಗ ಹೆಣಗಾಡುತ್ತಿದ್ದು, ಭಾರತವು ಅಗ್ರ ಮೂರು ಸ್ಥಾನ ತಲುಪಲು ಹೆಚ್ಚು ಸಮಯ ಕಾಯಬೇಕಾಗಿಲ್ಲ ಎಂದು ತೋರುತ್ತದೆ.

ಭಾರತವು ಯುವಜನರ ದೊಡ್ಡ ಜನಸಂಖ್ಯೆಯನ್ನು ಹೊಂದಿದೆ. ಇದು ಮುಂದಿನ ಹಲವು ವರ್ಷಗಳವರೆಗೆ ಜನಸಂಖ್ಯಾ ಲಾಭಾಂಶದಿಂದ ಪ್ರಯೋಜನವನ್ನು ಪಡೆಯುತ್ತದೆ ಎಂದು ನಂಬಲಾಗಿದೆ. ಅಂದರೆ ಮುಂದಿನ ದಶಕ ಭಾರತ್ತದ್ದಾಗಿದೆ ಎಂದು ಅಂದಾಜಿಸಲಾಗುತ್ತಿದೆ. ಆದರೆ ಜಗತ್ತಿನಲ್ಲಿ ಹಲವು ದೇಶಗಳಲ್ಲಿ ಭಾರತೀಯ ಕಾರ್ಮಿಕರು ದೇಶದ ಪ್ರಗತಿಯಲ್ಲಿ ದೊಡ್ಡ ಪಾತ್ರವನ್ನು ನೀಡುತ್ತಿದ್ದಾರೆ. ಭಾರತೀಯರಿಂದಾಗಿ ವಿಶ್ವದ ಹಲವು ದೇಶಗಳು ಈಗ ಪ್ರಗತಿಯ ಪಥದಲ್ಲಿ ನಡೆಯುತ್ತಿವೆ. ಇದಕ್ಕೆ ನಮ್ಮ ದೇಶವಾಸಿಗಳ ಕೊಡುಗೆ ಸಹ ಹೆಚ್ಚು.
ಪ್ರಸ್ತುತ, ವಿಶ್ವದ ಅನೇಕ ದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ಭಾರತೀಯರು ಕೆಲಸ ಮಾಡುತ್ತಿದ್ದಾರೆ. ಹೆಚ್ಚಿನ ಭಾರತೀಯ ಕಾರ್ಮಿಕರು ಮಧ್ಯಪ್ರಾಚ್ಯದ ಹಲವು ದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ, ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಅಂತಹ ದೇಶಗಳ ಪಟ್ಟಿಯನ್ನು ಬಿಡುಗಡೆ ಮಾಡಿತು, ಅಲ್ಲಿ ಭಾರತೀಯ ಉದ್ಯೋಗಿಗಳ ಸಂಖ್ಯೆ ತುಂಬಾ ಹೆಚ್ಚಾಗಿದೆ. ಹೆಚ್ಚಿನ ಕಾರ್ಮಿಕರು ಭಾರತೀಯರೇ ಆಗಿರುವ ದೇಶಗಳಿವು.

ಈ ದೇಶಗಳ ಪಟ್ಟಿಯಲ್ಲಿ ಯುಎಇ ಹೆಸರು ಮೊದಲ ಸ್ಥಾನದಲ್ಲಿದೆ. 35.54 ಲಕ್ಷ ಭಾರತೀಯ ಕಾರ್ಮಿಕರು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಪಟ್ಟಿಯಲ್ಲಿ ಎರಡನೇ ಹೆಸರು ಸೌದಿ ಅರೇಬಿಯಾದ್ದಾಗಿದೆ. ಸೌದಿ ಅರೇಬಿಯಾದಲ್ಲಿ ಸುಮಾರು 22.19 ಲಕ್ಷ ಭಾರತೀಯ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವರ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ.
ಭಾರತೀಯ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡುತ್ತಿರುವ ವಿಶ್ವದ ರಾಷ್ಟ್ರಗಳಲ್ಲಿ ಕುವೈತ್ ಕೂಡ ಸೇರಿದೆ. ಕುವೈತ್‌ನಲ್ಲಿ 8.29 ಲಕ್ಷ ಭಾರತೀಯ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಕುವೈತ್‌ನಂತೆ ಕತಾರ್‌ನಲ್ಲಿಯೂ 8 ಲಕ್ಷ ಭಾರತೀಯ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಈ ದೇಶಗಳ ಪಟ್ಟಿಯಲ್ಲಿ ಒಮಾನ್‌ನ ಹೆಸರೂ ಸೇರಿದೆ. ಒಮಾನ್‌ನಲ್ಲಿ 5.30 ಲಕ್ಷ ಭಾರತೀಯ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.


Click it and Unblock the Notifications