ಮಾರ್ಚ್ 1ರಿಂದ ಏನೆಲ್ಲಾ ನಿಯಮಗಳು ಬದಲಾವಣೆ ಆಗುತ್ತೆ.. ನಾಳೆ ಸಿಲಿಂಡರ್ ಬೆಲೆ ಇಳಿಕೆಯಾಗುತ್ತಾ?

ಮಾರ್ಚ್ 1ನೇ ತಾರೀಖು ಬಂದ್ರೆ ಸಾಕು ಹಣಹಾಸು ವಿಚಾರದಲ್ಲಿ ಹಲವಾರು ಬದಲಾವಣೆಗಳು ಕಾಣಬಹುದು. ಇದರಿಂದ ಜನ ಸಾಮಾನ್ಯರ ಜೇಬಿಗೆ ಕತ್ತರಿ ಬೀಳುವ ಸಾಧ್ಯತೆ ಇರುತ್ತದೆ. ಹಾಗಿದ್ರೆ ಮಾರ್ಚ್ ತಿಂಗಳ ಮೊದಲ ದಿನದಂದು ಯಾವೆಲ್ಲಾ ಬದಲಾವಣೆಗಳು ಜಾರಿಗೆ ಬರುತ್ತೆ ? ಎಂಬ ಹೆಚ್ಚಿನ ವಿವರ ಇಲ್ಲಿದೆ ನೋಡಿ...

ಹೌದು, ಇಂದು ಫೆಬ್ರವರಿ ತಿಂಗಳ ಕೊನೆ ದಿನವಾಗಿದ್ದು, ನಾಳೆಯಿಂದಲೇ ಒಂದಿಷ್ಟು ಸೇವೆಯಲ್ಲಿ ಬದಲಾವಣೆ ಆಗುತ್ತೆ, ಅದರಲ್ಲೂ ಹಣಕಾಸು ನಿಯಮಗಳು ಸಾಕಷ್ಟು ಬದಲಾವಣೆಗಳು ಆಗಿವೆ. ಇವುಗಳಲ್ಲಿ ಮುಖ್ಯವಾಗಿ ಮ್ಯೂಚುಯಲ್ ಫಂಡ್ ಮತ್ತು ಡಿಮ್ಯಾಟ್ ಖಾತೆಗಳ ನಾಮನಿರ್ದೇಶನ (ನಾಮಿನೇಷನ್‌) ನಿಯಮಗಳು, LPG ಸಿಲಿಂಡರ್ ಬೆಲೆಗಳು, FD ಬಡ್ಡಿ ದರಗಳು ಮತ್ತು ತೆರಿಗೆ ಸಂಬಂಧಿತ ಪ್ರಮುಖ ಬದಲಾವಣೆಗಳು ಆಗಿವೆ.

ಮಾರ್ಚ್ 1ರಿಂದ  ಏನೆಲ್ಲಾ ನಿಯಮಗಳು ಬದಲಾವಣೆ ಆಗುತ್ತೆ?

ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ ಬದಲಾವಣೆ

ಮಾರ್ಚ್ ತಿಂಗಳ ಮೊದಲ ದಿನ ಎಲ್ ಪಿಜಿ ಬೆಲೆಯಲ್ಲಿ ದರ ಏರಿಕೆಯಾಗುವ ಸಾಧ್ಯತೆ ಇದೆ. ಆಯಿಲ್ ಮಾರ್ಕೆಟಿಂಗ್ ಕಂಪನಿ , ಎಲ್ ಪಿಜಿ ದರವನ್ನು ಬದಲಾವಣೆಯನ್ನು ಮಾಡಬಹುದು.

ಇದೇ ತಿಂಗಳ ಮೊದಲ ದಿನ ತೈಲ ಕಂಪನಿಗಳು 19 ಕೆಜಿ ವಾಣಿಜ್ಯ ಅನಿಲ ಸಿಲಿಂಡರ್‌ಗಳ ಬೆಲೆಯನ್ನು 7 ರೂಪಾಯಿಗಳಷ್ಟು ಕಡಿಮೆ ಮಾಡಿತ್ತು. 14 ಕೆಜಿ ಗೃಹಬಳಕೆಯ ಅನಿಲ ಸಿಲಿಂಡರ್‌ಗಳ ಬೆಲೆಗಳು ದೇಶದಲ್ಲಿ ದೀರ್ಘಕಾಲದಿಂದ ಸ್ಥಿರವಾಗಿದ್ದು, ಮಾರ್ಚ್ ನಲ್ಲಿ ಬೆಲೆ ಇಳಿಕೆ ನಿರೀಕ್ಷೆ ಮಾಡ್ತಿರುವ ಜನಸಾಮಾನ್ಯರಿಗೆ ಸಂತಸದ ಸುದ್ದಿ ನೀಡುತ್ತಾ ಇಲ್ಲವೋ ಎಂಬುವುದನ್ನು ಕಾದುನೋಡಬೇಕಿದೆ.

ಯುಪಿಐ ಬಳಕೆಯಲ್ಲಿ ಬದಲಾವಣೆ

ಮಾರ್ಚ್ 1, 2025 ರಿಂದ UPI ವ್ಯವಸ್ಥೆಯಲ್ಲಿ ಬರುವ ಈ ಹೊಸ ಬದಲಾವಣೆವು ವಿಮಾ ಪ್ರೀಮಿಯಂ ಪಾವತಿ ಪ್ರಕ್ರಿಯೆಯನ್ನು ಸಾಕಷ್ಟು ಸುಲಭಗೊಳಿಸಲಿದೆ. ವಿಮಾ-ಎಎಸ್‌ಬಿ (Insurance-ASB) ಎಂಬ ಹೊಸ ವೈಶಿಷ್ಟ್ಯವನ್ನು ಸೇರಿಸಲಾಗುವುದರಿಂದ, ಜೀವ ಮತ್ತು ಆರೋಗ್ಯ ವಿಮಾ ಪಾಲಿತಾರರು ತಮ್ಮ ಪ್ರೀಮಿಯಂ ಪಾವತಿಯನ್ನು ಮುಂಚಿತವಾಗಿ ಹಣವನ್ನು ಬ್ಲಾಕ್ ಮಾಡಿ, ನಂತರ ಅವುಗಳನ್ನು ಸಹಜವಾಗಿ ಪಾವತಿಸಬಹುದಾಗಿದೆ.

ಈ ವ್ಯವಸ್ಥೆಯು ಪ್ರೀಮಿಯಂ ಪಾವತಿ ಪ್ರಕ್ರಿಯೆಯಲ್ಲಿ ಹೆಚ್ಚಿನ ವೇಗ ಮತ್ತು ಸುಲಭತೆ ನೀಡುತ್ತದೆ. ಗ್ರಾಹಕರು ತಮ್ಮ ಖಾತೆಗೆ ಲಾಗಿನ್ ಆದ ನಂತರ, ನಿಯಮಾನುಸಾರ ಒಪ್ಪಿಗೆಯನ್ನು ನೀಡಿದಾಗ, ಪಾವತಿ ತಕ್ಷಣವೇ ಸಾಧ್ಯವಾಗುತ್ತದೆ. ಇದರಿಂದ ಪ್ರೀಮಿಯಂ ಪಾವತಿಗಳಲ್ಲಿ ವಿಳಂಬ ಅಥವಾ ತಡವಾಗುವ ಸಾಧ್ಯತೆ ಕಡಿಮೆಯಾಗುತ್ತದೆ.

ಆರ್‌ಡಿಎಐ (RBI) ಫೆಬ್ರವರಿ 18 ರಂದು ಹೊರಡಿಸಿದ ಸುತ್ತೋಲೆಯು, ಈ ಹೊಸ ವೈಶಿಷ್ಟ್ಯದ ಮೂಲಕ ವಿಮಾ ಪಾವತಿಗಳಲ್ಲಿ ವಿಳಂಬವನ್ನು ಕಡಿಮೆ ಮಾಡುವುದನ್ನು ಉದ್ದೇಶಿಸಿದೆ. ಇದರ ಮೂಲಕ, ಗ್ರಾಹಕರು ತಮ್ಮ ವಿಮಾ ಪಾವತಿಗಳನ್ನು ಹೆಚ್ಚು ಸುಲಭವಾಗಿ, ವೇಗವಾಗಿ ಮತ್ತು ನಿಯಮಾನುಸಾರವಾಗಿ ಪಾವತಿಸಬಹುದು. ಇವು ದೇಶಾದ್ಯಾಂತ ವಿಮಾ ಸೇವೆಗಳಲ್ಲಿ ಸುಧಾರಣೆಗಳನ್ನು ತರಲು ಸಹಾಯ ಮಾಗುತ್ತದೆ.

ಮ್ಯೂಚುವಲ್ ಫಂಡ್ ಖಾತೆ ನಾಮಿನಿ ನಿಯಮದಲ್ಲಿ ಬದಲಾವಣೆ
ಮಾರ್ಚ್ 1, 2025 ರಿಂದ, ಮ್ಯೂಚುವಲ್ ಫಂಡ್ ಮತ್ತು ಡಿಮ್ಯಾಟ್ ಖಾತೆಗಳಲ್ಲಿ ನಾಮಿನಿಯನ್ನು ಸೇರಿಸುವ ನಿಯಮಗಳಲ್ಲಿ ಬದಲಾವಣೆ ಬರಲಿವೆ. ಈ ಹೊಸ ನಿಯಮದ ಪ್ರಕಾರ, ಒಬ್ಬ ಹೂಡಿಕೆದಾರರು ಗರಿಷ್ಠ 10 ನಾಮಿನಿಗಳನ್ನು ಸೇರ್ಪಡೆ ಮಾಡಬಹುದು.

ಈ ಬದಲಾವಣೆಯಿಂದ ಹೂಡಿಕೆದಾರರಿಗೆ ತಮ್ಮ ಖಾತೆಗಳಲ್ಲಿ ನಾಮಿನಿಗಳನ್ನು ಹೆಚ್ಚಿಸಲು ಹೆಚ್ಚಿನ ಸ್ವಾತಂತ್ರ್ಯವನ್ನು ನೀಡುತ್ತದೆ, ಆದರೆ ನಾಮಿನಿಯ ಎಲ್ಲಾ ವಿವರಗಳನ್ನು ಒದಗಿಸುವುದು ಅಗತ್ಯ ಎಂದು ಹೇಳಲಾಗಿದೆ. ಇದರಲ್ಲಿ ಹೂಡಿಕೆದಾರರು ನೀಡಬೇಕಾದ ವಿವರಗಳು ಯಾವುವು ಎಂದರೆ, ಫೋನ್ ಸಂಖ್ಯೆ, ಇಮೇಲ್ ವಿಳಾಸ, ವಿಳಾಸ, ಆಧಾರ್ ಸಂಖ್ಯೆ
ಪ್ಯಾನ್ ಸಂಖ್ಯೆ, ಚಾಲನಾ ಪರವಾನಗಿ ದಾಖಲೆಗಳನ್ನು ಒದಗಿಸುವುದು ಇಲ್ಲಿ ಅಗತ್ಯವಾಗಿರುತ್ತದೆ.

ಎಫ್ ಡಿ (FD) ಬಡ್ಡಿದರಗಳಲ್ಲಿ ಬದಲಾವಣೆ

ಮಾರ್ಚ್‌ನಲ್ಲಿ ಬ್ಯಾಂಕ್ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರಗಳಲ್ಲಿ ಬದಲಾವಣೆ ಆಗುವ ಸಾಧ್ಯತೆ ಇದೆ. 5 ವರ್ಷ ಅಥವಾ ಅದಕ್ಕಿಂತ ಕಡಿಮೆ ಅವಧಿಯ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರಗಳು ಬದಲಾಗಬಹುದು ಎಂಬ ನಿರೀಕ್ಷೆ ಇದೆ. ಈ ಬದಲಾವಣೆ ಹೂಡಿಕೆದಾರರಿಗೆ ಹೂಡಿಕೆಯ ಆದಾಯವನ್ನು ಪರಿಣಾಮ ಬೀರುವುದರಿಂದ, ಇವುಗಳ ಮೇಲೆ ಗಮನವಿಡುವುದು ಮುಖ್ಯವಾಗುತ್ತದೆ.

ಮಾರ್ಚ್‌ ತಿಂಗಳಲ್ಲಿ ಬ್ಯಾಂಕ್ ರಜೆ

ಮಾರ್ಚ್ ತಿಂಗಳಲ್ಲಿ ಬ್ಯಾಂಕ್‌ಗಳಿಗೆ 14 ದಿನಗಳು ರಜೆ ಇರಲಿವೆ. ಆರ್‌ಬಿಐ ಬಿಡುಗಡೆ ಮಾಡಿದ ಬ್ಯಾಂಕ್ ರಜೆ ಪಟ್ಟಿಯ ಪ್ರಕಾರ, ಹೋಳಿ, ಈದ್-ಉಲ್-ಫಿತರ್ ಮತ್ತು ಇತರ ಹಬ್ಬಗಳ ಕಾರಣ ಬ್ಯಾಂಕ್‌ಗಳು ಬಾಗಿಲು ಮುಚ್ಚಲಿವೆ.

ಬ್ಯಾಂಕ್‌ಗೆ ಹೋಗುವ ಮುನ್ನ, ನೀವು ರಜೆ ಪಟ್ಟಿ ಚೆಕ್ ಮಾಡಿಕೊಳ್ಳುವುದು ತುಂಬಾ ಮುಖ್ಯ, ಏಕೆಂದರೆ ಬ್ಯಾಂಕ್‌ನ ಸೇವೆಗಳು ಆ ದಿನಗಳಲ್ಲಿ ಲಭ್ಯವಿರುವುದಿಲ್ಲ. ಹೀಗಾಗಿ, ಯಾವುದೇ ಬ್ಯಾಂಕಿಂಗ್ ಕಾರ್ಯಗಳನ್ನು ಪೂರ್ಣಗೊಳಿಸಲು ಅಥವಾ ಸೇವೆಗಳನ್ನು ಬಳಸಲು, ಈ ರಜೆಗಳನ್ನೇ ಗಮನದಲ್ಲಿಟ್ಟುಕೊಂಡು ನಿಮ್ಮ ವೇಳಾಪಟ್ಟಿ ರೂಪಿಸಿಕೊಳ್ಳಿ.

ಸಿಎನ್‌ಜಿ-ಪಿಎನ್‌ಜಿ ಮತ್ತು ಎಟಿಎಫ್ ಬೆಲೆ
ಪ್ರತಿ ತಿಂಗಳ ಆರಂಭದಲ್ಲಿ ಸಿಎನ್‌ಜಿ (CNG), ಪಿಎನ್‌ಜಿ (PNG), ಮತ್ತು ಎಟಿಎಫ್ (ATF) ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. ಈ ಹೊಸ ದರಗಳನ್ನು ತೈಲ ಕಂಪನಿಗಳು ಬಿಡುಗಡೆ ಮಾಡುತ್ತವೆ. ಅಥವಾ, ವಾಯುಯಾನ ಇಂಧನ, ಅಂದರೆ ಏರ್ ಟರ್ಬೈನ್ ಇಂಧನ (ATF) ದರವನ್ನು ಕೂಡ ತೈಲ ಕಂಪನಿಗಳು ತಿಂಗಳ ಆರಂಭದಲ್ಲಿ ಪರಿಷ್ಕರಿಸುತ್ತವೆ. ಇದಾದ ನಂತರ ಹೊಸ ದರ ಬಿಡುಗಡೆಯಾಗುತ್ತದೆ. ಹೊಸ ದರ ನಾಳೆ ಹೊರಬೀಳಲಿದೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+