ಐಟಿ ರಿಟರ್ನ್ಸ್‌ ಸಲ್ಲಿಕೆ ಗಡುವು ಮತ್ತೆ ವಿಸ್ತರಣೆ: ಏನೆಲ್ಲಾ ಬದಲಾಗಿದೆ ಪರೀಕ್ಷಿಸಿ..

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಗಡುವನ್ನು ಆದಾಯ ತೆರಿಗೆ ಇಲಾಖೆ ಈ ಹಿಂದಿನ ನವೆಂಬರ್ 30ರ ಗಡುವನ್ನು ಮತ್ತೆ ಮುಂದೂಡಿದ್ದು, ವರ್ಷದ ಕೊನೆಯವರೆಗೆ ಅಂದರೆ ಡಿಸೆಂಬರ್ 31ರವರೆಗೆ ಐಟಿಆರ್‌ ಸಲ್ಲಿಸಲು ಅವಕಾಶವನ್ನು ನೀಡಿದೆ.

ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆ ತೆರಿಗೆದಾರರು ಎದುರಿಸುತ್ತಿರುವ ನಿಜವಾದ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು ತೆರಿಗೆ ಇಲಾಖೆಯು ಅಂತಿಮ ಗಡುವನ್ನು ಸಹ ವಿಸ್ತರಿಸಿದೆ.

ಕೊರೊನಾವೈರಸ್ ಸೋಂಕಿನ ದೃಷ್ಟಿಯಿಂದ, ವೈಯಕ್ತಿಕ ತೆರಿಗೆ ಪಾವತಿದಾರರು ಏಪ್ರಿಲ್ 1, 2019 ರಿಂದ ಮಾರ್ಚ್ 31, 2020ರ ನಡುವಿನ ಐಟಿಆರ್ ಸಲ್ಲಿಸಲು ಡಿಸೆಂಬರ್ 31ರವರೆಗೆ ಅವಕಾಶವಿದೆ. ಈ ಹಿಂದಿದ್ದ ನವೆಂಬರ್ 30ರ ಬದಲು ಡಿಸೆಂಬರ್ 31ಕ್ಕೆ ವಿಸ್ತರಿಸಲಾಗಿದೆ.

IT ರಿಟರ್ನ್ಸ್‌ ಸಲ್ಲಿಕೆ ಗಡುವು ಮತ್ತೆ ವಿಸ್ತರಣೆ:ಏನೆಲ್ಲಾ ಬದಲಾಗಿದೆ?

ಇದರ ಜೊತೆಗೆ ತೆರಿಗೆ ಪಾವತಿದಾರರಿಗೆ ಲೆಕ್ಕಪರಿಶೋಧನೆ ಮಾಡಬೇಕಾದ ಐಟಿಆರ್ ಸಲ್ಲಿಕೆಯ ದಿನಾಂಕವನ್ನು ಜನವರಿ 31, 2020 ಕ್ಕೆ ವಿಸ್ತರಿಸಲಾಗಿದೆ. ತೆರಿಗೆ ಲೆಕ್ಕಪರಿಶೋಧನಾ ವರದಿ ಮತ್ತು ಅಂತರರಾಷ್ಟ್ರೀಯ / ನಿಗದಿತ ದೇಶೀಯ ವಹಿವಾಟಿಗೆ ಸಂಬಂಧಿಸಿದ ವರದಿ ಸೇರಿದಂತೆ ಕಾಯಿದೆಯಡಿ ವಿವಿಧ ಲೆಕ್ಕಪರಿಶೋಧನಾ ವರದಿಗಳನ್ನು ಸಲ್ಲಿಸುವ ದಿನಾಂಕವನ್ನು ಜನವರಿ 31, 2021 ಕ್ಕೆ ವಿಸ್ತರಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+