ಪ್ರಪಂಚದಲ್ಲಿ ಕೆಲವರಿಗೆ ಕೆಲವು ವಿಚಿತ್ರ ಸಾಹಸಗಳನ್ನು ಮಾಡುವ ಖಯಾಲಿ ಇರುತ್ತದೆ. ಆಗಾಗ ಇಂತಹ ಸಾಹಸಗಾಥೆಗಳನ್ನು ನಾವು ಕೇಳುತ್ತಿರುತ್ತೇವೆ.
ಐರ್ಲೆಂಡ್ ದೇಶ ಸುಂದರ ಕರಾವಳಿಗಳಿಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿನ ಸಮುದ್ರದಲ್ಲಿ ನಡುಗಡ್ಡೆ ಅಥವಾ ದ್ವೀಪ ಸಮೂಹಗಳು ಕಾಣಸಿಗುತ್ತವೆ. ಈ ದ್ವೀಪಗಳನ್ನು ಜಗತ್ತಿನ ಶ್ರೀಮಂತರು ಕೊಂಡುಕೊಳ್ಳುತ್ತಾರೆ. ಅಲ್ಲಿ ತಮ್ಮದೇಯಾದ ಐಷಾರಾಮಿ ನೆಲೆಯನ್ನು ಹೊಂದುತ್ತಾರೆ.
ಇದೀಗ ಇಂತಹುದೇ ಸಾಹಸವನ್ನು ಮಾಡಿ ವ್ಯಕ್ತಿಯೊಬ್ಬ ಗಮನ ಸೆಳೆದಿದ್ದಾನೆ. ಶ್ರೀಮಂತ ವ್ಯಕ್ತಿಯೊಬ್ಬ ಐರ್ಲೆಂಡ್‌ನ ಹಾರ್ಸ್ ಎಂಬ ದ್ವೀಪವನ್ನು ಖರೀದಿಸಿದ್ದಾನೆ. ಇದರಲ್ಲಿ ಏನಿದೆ ವಿಶೇಷ ಎನ್ನುತ್ತೀರಾ...? ಹಾಗಾದರೆ ಮುಂದೆ ಓದಿ...
6.3 ಬಿಲಿಯನ್ ಡಾಲರ್‌ಗೆ
ಐರ್ಲೆಂಡ್ ಕರಾವಳಿಯ ಖಾಸಗಿ ದ್ವೀಪ ಹಾರ್ಸ್. ಅದನ್ನು ಖರೀದಿಸುವ ಮೊದಲು ಸ್ಥಳವನ್ನು ಭೇಟಿ ಮಾಡದೆ 6.3 ಬಿಲಿಯನ್ ಡಾಲರ್‌ಗೆ ಶ್ರೀಮಂತ ವ್ಯಕ್ತಿಯೊಬ್ಬ ಖರೀದಿ ಮಾಡಿದ್ದಾನೆ. ಖರೀದಿದಾರನ ಯಾವುದೇ ವಿವರಗಳು ಲಭ್ಯವಾಗಿಲ್ಲ ಎಂದು ಸಿಎನ್ಎನ್ ಟ್ರಾವೆಲ್ ವರದಿ ಮಾಡಿದೆ
ವಾಟ್ಸಾಪ್ ಮೂಲಕ ಒಪ್ಪಂದ
ವಾಸ್ತವವಾಗಿ, ಖರೀದಿದಾರನು ವಾಟ್ಸಾಪ್ ಮೂಲಕ ಒಪ್ಪಂದವನ್ನು ಮಾಡಿಕೊಂಡಿದ್ದ ಎಂದು ತಿಳಿದು ಬಂದಿದೆ. ಯುರೋಪಿಯನ್ ಖರೀದಿದಾರನು ಹಾರ್ಸ್ ದ್ವೀಪದ ಚಿತ್ರಗಳು ಮತ್ತು ವೀಡಿಯೊಗಳನ್ನು ನೋಡಿ ಅದನ್ನು ಖರೀದಿ ಮಾಡಿದ್ದಾನೆ. ಐರ್ಲೆಂಡ್ ನೈರುತ್ಯ ದಿಕ್ಕಿನಲ್ಲಿರುವ 157 ಎಕರೆ ಭೂಮಿ ಹೊಂದಿರುವ ದ್ವೀಪವಾಗಿದೆ ಹಾರ್ಸ್.
ಸುಂದರ ದ್ವೀಪ
ಈ ಖಾಸಗಿ ದ್ವೀಪವು ಮೂರು ಕಡಲತೀರಗಳು, ಏಳು ಮನೆಗಳು ಮತ್ತು ನೈಸರ್ಗಿಕ ವನ್ಯಜೀವಿಗಳನ್ನು ಒಳಗೊಂಡಿದೆ ಎಂದು ಸಿಎನ್ಎನ್ ಟ್ರಾವೆಲ್ ವರದಿ ಮಾಡಿದೆ. ಹಾರ್ಸ್ ದ್ವೀಪವು ಅಟ್ಲಾಂಟಿಕ್ ಮಹಾಸಾಗರದ ಹಿನ್ನಲೆಯಲ್ಲಿ ಹಸಿರು ಭೂಪ್ರದೇಶ, ಒಂದು ಮುಖ್ಯ ಮನೆ ಮತ್ತು ಹಲವಾರು ಅತಿಥಿ ಕುಟೀರಗಳನ್ನು ಹೊಂದಿದೆ.
ಮೂಲಸೌಕರ್ಯ ಅದ್ಭುತವಾಗಿದೆ
19 ನೇ ಶತಮಾನದಲ್ಲಿ ಹಾರ್ಸ್ ದ್ವೀಪ ಸುಮಾರು 137 ಜನಸಂಖ್ಯೆಯನ್ನು ಹೊಂದಿತ್ತು. 1960 ರ ಹೊತ್ತಿಗೆ, ಅದರ ನಿವಾಸಿಗಳು ಈ ಸ್ಥಳವನ್ನು ತೊರೆದರು. ಹಾರ್ಸ್ ದ್ವೀಪವು ಪ್ರಸ್ತುತ ಪರಿಷ್ಕರಿಸಿದ ಆಸ್ತಿಯಾಗಿದ್ದು, ಹೆಲಿಪ್ಯಾಡ್, ಜಿಮ್, ಗೇಮ್ಸ್ ಹೌಸ್ ಹೊಂದಿದೆ. ದ್ವೀಪವು ವಿದ್ಯುತ್, ನೀರು ಮತ್ತು ಒಳಚರಂಡಿ ವ್ಯವಸ್ಥೆ ಮತ್ತು ಖಾಸಗಿ ರಸ್ತೆಗಳಿಂದ ತುಂಬಿರುವುದರಿಂದ ಮೂಲಸೌಕರ್ಯ ಅದ್ಭುತವಾಗಿದೆ.
More From GoodReturns

Gold Rate: ಚಿನ್ನಪ್ರಿಯರಿಗೆ ‘ಯುಗಾದಿ’ ಸಿಹಿ; ಬೆಂಗಳೂರಿನಲ್ಲಿ 24K ಬಂಗಾರದ ಬೆಲೆಯಲ್ಲಿ 27,800 ರೂ. ಕುಸಿತ

Gold Rates & Silver Rates Today Live: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಕೆ-ಮಾರುಕಟ್ಟೆಯ ಲೈವ್ ಅಪ್ಡೇಟ್ ತಿಳಿಯಿರಿ

Karnataka Rain: ರಾಜ್ಯದಲ್ಲಿ ಸದ್ಯಕ್ಕೆ ನಿಲ್ಲಲ್ಲ ವರುಣಾರ್ಭಟ; ಎಷ್ಟು ದಿನ ಈ ಮಳೆ ಎಂದು ತಿಳಿಯಿರಿ

Ballari Airport: ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಈ ವಿಚಾರಕ್ಕೆ ಅಡ್ಡಿಯಾಗ್ತಿದ್ಯಾ-ಏನದು ಹೊಸ ವಿಚಾರ ತಿಳಿಯಿರಿ

Bank Holiday: ನಾಳೆ ಕರ್ನಾಟಕದಲ್ಲಿ ಬ್ಯಾಂಕ್ ತೆರೆದಿರುತ್ತೋ, ಇಲ್ಲವೋ? ಸ್ಪಷ್ಟ ಮಾಹಿತಿ ತಿಳಿಯಿರಿ

Silver Price Today: ಬೆಳ್ಳಿ ದರದಲ್ಲಿ ಇಂದು 5,000 ಕುಸಿತ; ಭಾರತದಲ್ಲಿ ಇಂದಿನ ಬೆಲೆ ತಿಳಿಯಿರಿ

LPG Crisis Bengaluru: ಕೋಳಿ ವ್ಯಾಪಾರಕ್ಕೂ ತಟ್ಟಿದ LPG ಕೊರತೆ ಬಿಸಿ; ಬೆಂಗಳೂರಲ್ಲಿ ಮಾರಾಟ ಭಾರಿ ಕುಸಿತ

Bengaluru: ಬೀದಿ ಬದಿ ವ್ಯಾಪಾರಕ್ಕೆ ಅವಕಾಶವಿಲ್ಲ; ಈ ರಸ್ತೆಯ ವ್ಯಾಪಾರಿಗಳಿಗೆ ದೊಡ್ಡ ಸಂಕಷ್ಟ

Eid-ul-Fitr 2026: ರಂಜಾನ್ ಹಬ್ಬ ಇಂದೋ, ನಾಳೆಯೋ; ಕೇರಳದಲ್ಲಿ ಮಾತ್ರ ಇಂದು ಆಚರಣೆ ಯಾಕೆ?

Oil Price Tension: ಮದ್ಯಪ್ರಾಚ್ಯ ಉದ್ವಿಗ್ನತೆ ನಡುವೆ ತೈಲ ಮಾರುಕಟ್ಟೆ ತಲ್ಲಣ, ಭಾರತಕ್ಕೆ ಸವಾಲು; ಎಚ್ಚರಿಕೆ ಸೂಚನೆ

Petrol Price Hike: ಪ್ರೀಮಿಯಂ ಪೆಟ್ರೋಲ್ ದರ ಏರಿಕೆ-ಲೀಟರ್ಗೆ 2 ಹೆಚ್ಚಳ, ಸಾಮಾನ್ಯ ಇಂಧನ ದರ ಸ್ಥಿರ



Click it and Unblock the Notifications