ಪಬ್ ಜೀ ಸೇರಿ 275 ಚೀನೀ ಆಪ್ ಗಳ ನಿಷೇಧಕ್ಕೆ ಮತ್ತೊಂದು ಪಟ್ಟಿ ಸಿದ್ಧವಾಗಿದೆಯಾ?

ಭಾರತದಲ್ಲಿ ಭದ್ರತೆ ಹಾಗೂ ಬಳಕೆದಾರರ ಗೋಪ್ಯತೆ ಕಾಪಾಡಿಕೊಳ್ಳಲು ಇನ್ನಷ್ಟು ಚೀನಾ ಮೂಲದ ಆಪ್ ಗಳನ್ನು ನಿಷೇಧಿಸಲಾಗುತ್ತದೆಯೇ? ಅದಕ್ಕಾಗಿಯೇ 275 ಚೀನೀ ಆಪ್ ಗಳನ್ನು ಪಟ್ಟಿ ಮಾಡಲಾಗಿದೆಯೇ? ಹೀಗೊಂದು ಮಾಹಿತಿಯನ್ನು ಹೊರಗೆ ಇಡುತ್ತವೆ ಹೆಸರು ಹೇಳಲು ಇಚ್ಛಿಸದ ಹಾಗೂ ಈ ಬೆಳವಣಿಗೆ ಬಗ್ಗೆ ಮಾಹಿತಿ ಇರುವ ಮೂಲಗಳು.

ಕಳೆದ ತಿಂಗಳಷ್ಟೇ 59 ಚೀನೀ ಆಪ್ ಗಳನ್ನು ನಿಷೇಧಿಸಲಾಗಿತ್ತು. ಅದರಲ್ಲಿ ಟಿಕ್ ಟಾಕ್ ಸೇರಿದಂತೆ ಹಲವು ಆಪ್ ಗಳಿದ್ದವು. ಇದೀಗ ಟೆನ್ಸೆಂಟ್ ಬೆಂಬಲದ ಪಬ್ ಜಿ, ಶಿಯೋಮಿಯ ಝಿಲಿ, ಅಲಿಬಾಬದ ಅಲಿ ಎಕ್ಸ್ ಪ್ರೆಸ್, ರೆಸ್ಸೋ ಹಾಗೂ ಯುಲೈಕ್ ಸೇರಿದಂತೆ ವಿವಿಧ ಆಪ್ ಗಳಿಗೆ ನಿಷೇಧ ಹೇರಬಹುದು ಎನ್ನಲಾಗುತ್ತಿದೆ.

ಮಾಹಿತಿ ಸೋರಿಕೆ, ಗೋಪ್ಯತೆ ಕಾರಣ

ಮಾಹಿತಿ ಸೋರಿಕೆ, ಗೋಪ್ಯತೆ ಕಾರಣ

ಸರ್ಕಾರದಿಂದ ಈ ಎಲ್ಲವನ್ನೂ ನಿಷೇಧಿಸಬಹುದು, ಕೆಲವು ಅಥವಾ ಯಾವುದನ್ನೂ ನಿಷೇಧ ಮಾಡದಿರಬಹುದು ಎಂದು ಮತ್ತೊಬ್ಬರು ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಕೇಂದ್ರ ಗೃಹ ಸಚಿವಾಲಯವನ್ನು ಮಾಧ್ಯಮವೊಂದು ಸಂಪರ್ಕಿಸಿದ್ದು, ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಮೂಲಗಳು ಹೇಳುವಂತೆ, ಇನ್ನೂ ಹೆಚ್ಚು ಚೀನೀ ಆಪ್ ಗಳನ್ನು ಮತ್ತು ಅವುಗಳಿಗೆ ಹಣಕಾಸಿನ ಮೂಲಗಳನ್ನು ಗುರುತಿಸುವ ಕೆಲಸ ನಡೆಯುತ್ತಿದೆ. ಈ ಅಪ್ಲಿಕೇಷನ್ ಗಳಲ್ಲಿ ಕೆಲವಕ್ಕೆ ಭದ್ರತೆಯ ಕಾರಣಕ್ಕೆ ಅವಕಾಶ ನಿರಾಕರಿಸಬಹುದು ಹಾಗೂ ಇನ್ನೂ ಕೆಲವಕ್ಕೆ ಮಾಹಿತಿ ಸೋರಿಕೆ ಹಾಗೂ ಗೋಪ್ಯತೆ ಕಾರಣ ನೀಡಿ ನಿಷೇಧ ಹೇರಬಹುದು ಎಂದು ಅಧಿಕಾರಿಗಳು ವಿವರಿಸುತ್ತಾರೆ.

ಭಾರತದಿಂದ ನಿಷೇಧ, ಚೀನಾದ ಆಕ್ಷೇಪ

ಭಾರತದಿಂದ ನಿಷೇಧ, ಚೀನಾದ ಆಕ್ಷೇಪ

ಮಾಹಿತಿ ಹೇಗೆ ಈ ಆಪ್ ಗಳ ಮೂಲಕ ಹರಿದಾಡುತ್ತದೆ ಎಂಬ ಮೂಲವನ್ನು ಪರೀಕ್ಷಿಸಲಾಗುತ್ತದೆ. ಅದರಲ್ಲೂ ಭಾರತದ ಸಾರ್ವಭೌಮತೆ ಹಾಗೂ ಸಮಗ್ರತೆಗೆ ಅಪಾಯ ತಂದೊಡ್ಡಬಹುದಾದ ಆಪ್ ಗಳ ಕಡೆಗೆ ಹೆಚ್ಚಿನ ನಿಗಾ ಇರುತ್ತದೆ. ಚೀನಾ ಮೂಲದ ಕಂಪೆನಿಗಳು ಎಲ್ಲಿಂದ ಬೇಕಾದರೂ ಕಾರ್ಯ ನಿರ್ವಹಿಸಲಿ, ಆದರೆ ಆ ದೇಶದ ಜತೆಗೆ ಮಾಹಿತಿ ಹಂಚಿಕೊಳ್ಳುವ ವಿಚಾರವನ್ನು ಪರೀಕ್ಷೆ ಮಾಡಲಾಗುತ್ತದೆ. ಕಳೆದ ತಿಂಗಳು ಭಾರತ- ಚೀನಾ ಗಡಿಯಲ್ಲಿ ಉದ್ವಿಗ್ನತೆ ಕಾಣಿಸಿಕೊಂಡ ಮೇಲೆ ಚೀನಾ ಅಪ್ಲಿಕೇಷನ್ ಗಳು ಕೆಲವನ್ನು ಸರ್ಕಾರವು ನಿಷೇಧ ಮಾಡಿತ್ತು. ಈ ನಡೆಗೆ ಚೀನಾವು ಭಾರೀ ಆಕ್ಷೇಪ ವ್ಯಕ್ತಪಡಿಸಿತ್ತು. ಇತ್ತೀಚಿನ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ಪಡೆಯಲು ಟೆನ್ಸೆಂಟ್, ಶಿಯೋಮಿ, ಬೈಟ್ ಡ್ಯಾನ್ಸ್ ಹಾಗೂ ಅಲಿಬಾಬ ಈ ಕಂಪೆನಿಗಳನ್ನು ಸಂಪರ್ಕಿಸಿದಾಗ ಯಾವುದರಿಂದಲೂ ಮಾಧ್ಯಮಗಳಿಗೆ ಪ್ರತಿಕ್ರಿಯೆ ಸಿಕ್ಕಿಲ್ಲ.

30 ಕೋಟಿ ಯೂನಿಕ್ ಬಳಕೆದಾರರಿದ್ದಾರೆ

30 ಕೋಟಿ ಯೂನಿಕ್ ಬಳಕೆದಾರರಿದ್ದಾರೆ

ಚೀನೀ ಇಂಟರ್ ನೆಟ್ ಕಂಪೆನಿಗಳಿಗಳಿಗೆ ಭಾರತದಲ್ಲಿ 30 ಕೋಟಿ ಯೂನಿಕ್ ಬಳಕೆದಾರರಿದ್ದಾರೆ. ಅಂದರೆ ದೇಶದಲ್ಲಿ ಸ್ಮಾರ್ಟ್ ಫೋನ್ ಬಳಸುವ ಮೂರನೇ ಎರಡು ಭಾಗದಷ್ಟು ಬಳಕೆದಾರರು ಚೀನಿ ಆಪ್ ಡೌನ್ ಲೋಡ್ ಮಾಡಿಕೊಂಡಿದ್ದಾರೆ ಎಂಬ ಅಂದಾಜಿದೆ. ಇನ್ನು ಸರ್ಕಾರದ ಸಂಬಂಧಪಟ್ಟ ಸಚಿವಾಲಯದಿಂದ ಈ ಬಗ್ಗೆ ಕಾನೂನು ರೂಪಿಸುವುದಕ್ಕೆ ಆಲೋಚನೆ ನಡೆಯುತ್ತಿದೆ. ಭಾರತದಲ್ಲಿ ಕಾರ್ಯ ನಿರ್ವಹಿಸುವ ಅಪ್ಲಿಕೇಷನ್ ಗಳ ಬಗ್ಗೆ ಭವಿಷ್ಯದಲ್ಲಿ ನಿಯಮಿತವಾಗಿ ಪರಿಶೀಲನೆ ಮಾಡುವ ಉದ್ದೇಶದಿಂದ ಈ ಕಾನೂನು ರೂಪಿಸುವುದಕ್ಕೆ ಚಿಂತನೆ ನಡೆದಿದೆ. ಆದರೆ ಇದಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಇನ್ನು ನಿಷೇಧ ಹೇರುವ ವಿಚಾರಕ್ಕೆ ಸಂಬಂಧಿಸಿದಂತೆ ಸಮಿತಿಯೊಂದನ್ನು ರಚಿಸಲಾಗಿದ್ದು, ಆ ಸಮಿತಿ ತೀರ್ಮಾನವನ್ನು ಕೈಗೊಳ್ಳಲಿದೆ.

ಪಬ್ ಜಿಗೆ ದೊಡ್ಡ ಮಾರುಕಟ್ಟೆ ಭಾರತ

ಪಬ್ ಜಿಗೆ ದೊಡ್ಡ ಮಾರುಕಟ್ಟೆ ಭಾರತ

ವಿಶ್ವದ ಐದನೇ ದೊಡ್ಡ ಆರ್ಥಿಕತೆಯಾದ ಭಾರತದಲ್ಲಿ ಈಗ ಚೀನಾ ಹಾಗೂ ಅಮೆರಿಕದ ಇಂಟರ್ ನೆಟ್ ಕಂಪೆನಿಗಳು ಪಾರಮ್ಯ ಸಾಧಿಸಲು ಯತ್ನಿಸುತ್ತಿವೆ. ಏಕೆಂದರೆ, ಭಾರತದಲ್ಲಿ ಅಂದಾಜು ನಲವತ್ತೈದು ಕೋಟಿ ಸ್ಮಾರ್ಟ್ ಫೋನ್ ಬಳಕೆದಾರರಿದ್ದಾರೆ. ಕಳೆದ ವಾರ ಝಿಲಿ ಹಾಗೂ ಸ್ನ್ಯಾಕ್ ವಿಡಿಯೋ ಗೂಗಲ್ ಪೇನಲ್ಲಿ ಟಾಪ್ ಟೆನ್ ಪಟ್ಟಿಗೆ ಬಂದಿದೆ. ಇವೆರಡೂ ಸಹ ಚೀನೀ ಆಪ್ ಆಗಿದ್ದು, ಈಗಾಗಲೇ ನಿಷೇಧ ಆಗಿರುವ ಟಿಕ್ ಟಾಕ್ ಗೆ ಬದಲಿಯಾಗಿ ಇವು ಬಂದಿವೆ. ಟಿಕ್ ಟಾಕ್ ಗೆ ಭಾರತದಲ್ಲಿ ಇಪ್ಪತ್ತು ಕೋಟಿ ನೋಂದಾಯಿತ ಬಳಕೆದಾರರು ಇದ್ದರು. ಅದು ಆರಂಭವಾದ ಎರಡು ವರ್ಷದಲ್ಲಿ ಅರವತ್ತಾರು ಕೋಟಿ ಬಾರಿ ಡೌನ್ ಲೋಡ್ ಆಗಿತ್ತು. ಇಡೀ ವಿಶ್ವಕ್ಕೆ ಹೋಲಿಸಿದಲ್ಲಿ ಇದು ಮೂವತ್ತು ಪರ್ಸೆಂಟ್ ಆಗುತ್ತದೆ. ಇನ್ನು ಪಬ್ ಜಿಗೆ ಭಾರತವೇ ದೊಡ್ಡ ಮಾರುಕಟ್ಟೆ. ಇಲ್ಲಿಯ ತನಕ 17.5 ಕೋಟಿಯಷ್ಟು ಇನ್ ಸ್ಟಾಲ್ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+