ಆದಾಯ ತೆರಿಗೆ ಇಲಾಖೆಯು ಮಂಗಳವಾರ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಅನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಪ್ರಕ್ರಿಯೆಗೊಳಿಸಲು ತನ್ನ ಬದ್ಧತೆಯನ್ನು ಒತ್ತಿಹೇಳಿದೆ. 2023-24ರ ಹಣಕಾಸು ವರ್ಷದಲ್ಲಿ 6.98 ಕೋಟಿ ಐಟಿಆರ್‌ಗಳನ್ನು ಫೈಲ್ ಮಾಡಲಾಗಿದ್ದು, ಅದರಲ್ಲಿ 6.84 ಕೋಟಿ ಐಟಿಆರ್‌ಗಳನ್ನು ಪರಿಶೀಲಿಸಲಾಗಿದೆ.
ಆದಾಯ ತೆರಿಗೆ ಇಲಾಖೆ ಪ್ರಕಾರ 6 ಕೋಟಿಗೂ ಹೆಚ್ಚು ಐಟಿಆರ್‌ಗಳನ್ನು ಪ್ರಕ್ರಿಯೆಗೊಳಿಸಲಾಗಿದೆ. ಹಣಕಾಸು ವರ್ಷ 2023-24ಕ್ಕೆ 2.45 ಕೋಟಿಗೂ ಹೆಚ್ಚು ಐಟಿಆರ್ ರಿಫಂಡ್ ಈಗಾಗಲೇ ನೀಡಲಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ. ಆದರೆ ಈ ಎರಡು ವಿಭಾಗಗಳಿಗೆ ಐಟಿಆರ್ ರಿಫಂಡ್ ಪ್ರಕ್ರಿಯೆ ನಡೆಸಲಾಗದು. ಈ ಬಗ್ಗೆ ಇಲ್ಲಿದೆ ವಿವರ...

"ತಡೆರಹಿತ ಮತ್ತು ತ್ವರಿತ ತೆರಿಗೆದಾರರ ಸೇವೆಗಳನ್ನು ಒದಗಿಸಲು ಇಲಾಖೆಯು ನಿರಂತರವಾಗಿ ಪ್ರಯತ್ನ ಮಾಡುತ್ತಿದೆ. ಇದಕ್ಕೆ ಅನುಗುಣವಾಗಿ, ಹಣಕಾಸು ವರ್ಷ 2019-20 ರಲ್ಲಿ 82 ದಿನಗಳು ಮತ್ತು ಹಣಕಾಸು ವರ್ಷ 2022-23 ರಲ್ಲಿ 16 ದಿನಗಳಲ್ಲಿ ಐಟಿಆರ್ ರಿಫಂಡ್ ಪ್ರಕ್ರಿಯೆಗೊಳಿಸಲಾಗಿದೆ. ಅದಕ್ಕೆ ಹೋಲಿಕೆ ಮಾಡಿದರೆ ಹಣಕಾಸು ವರ್ಷ 2023-24ರಲ್ಲಿ ರಿಟರ್ನ್ಸ್‌ಗೆ 10 ದಿನಗಳಿಗಿಂತ ಕಡಿಮೆ ಅವಧಿಯಲ್ಲಿ ರಿಫಂಡ್ ಪ್ರಕ್ರಿಯೆಗೊಳಿಸಲಾಗಿದೆ," ಎಂದು ಕೇಂದ್ರ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಪ್ರಕಟಣೆಯಲ್ಲಿ ತಿಳಿಸಿದೆ.
ಎರಡು ವರ್ಗಗಳ ಐಟಿಆರ್‌ಗಳ ಪ್ರಕ್ರಿಯೆ ಸಾಧ್ಯವಿಲ್ಲ
ಆದಾಯ ತೆರಿಗೆ ಇಲಾಖೆಯು ಎರಡು ರೀತಿಯ ಐಟಿಆರ್‌ಗಳನ್ನು ಪ್ರಕ್ರಿಯೆಗೊಳಿಸಲು ಸಾಧ್ಯವಾಗುವುದಿಲ್ಲ. ಒಂದು ಪರಿಶೀಲನೆಗೆ ಬಾಕಿ ಇರುವ, ಎರಡನೆಯದು ಇಲಾಖೆಯು ತೆರಿಗೆದಾರರಿಂದ ಹೆಚ್ಚುವರಿ ಮಾಹಿತಿಯನ್ನು ಕೇಳಿ, ಪ್ರತಿಕ್ರಿಯೆಗಾಗಿ ಕಾಯುತ್ತಿದ್ದಾಗ ಐಟಿಆರ್ ರಿಫಂಡ್ ಪ್ರಕ್ರಿಯೆ ನಡೆಸಲು ಸಾಧ್ಯವಿಲ್ಲ.
ಮಾಹಿತಿ ಪ್ರಕಾರ ಹಣಕಾಸು ವರ್ಷ 2023-24ರಲ್ಲಿ ಫೈಲ್ ಮಾಡಿದರು ಆದಾಯ ತೆರಿಗೆ ರಿಟರ್ನ್ ಪೈಕಿ 14 ಲಕ್ಷ ಐಟಿಆರ್‌ಗಳನ್ನು ತೆರಿಗೆದಾರರು ಪರಿಶೀಲಿನೆ ಮಾಡಿಲ್ಲ. ಇನ್ನು 12 ಲಕ್ಷ ಐಟಿಆರ್‌ಗಳಿಗೆ ಆದಾಯ ತೆರಿಗೆ ಇಲಾಖೆಯು ಹೆಚ್ಚುವರಿ ಮಾಹಿತಿಯನ್ನು ಕೇಳಿದ್ದು, ಅದಕ್ಕೆ ತೆರಿಗೆದಾರರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ಎರಡು ವಿಭಾಗಗಳಿಗೆ ಇಲಾಖೆಗೆ ಐಟಿಆರ್ ರಿಫಂಡ್ ಫೈಲ್ ಮಾಡಲು ಸಾಧ್ಯವಾಗುವುದಿಲ್ಲ.
ಆದಾಯ ತೆರಿಗೆ ಇಲಾಖೆಯು ರಿಫಂಡ್ ಅನ್ನು ನಿರ್ಧರಿಸುವ ಕೆಲವು ಪ್ರಕರಣಗಳನ್ನು ಇಲಾಖೆಯು ಉಲ್ಲೇಖ ಮಾಡಿದೆ. ಆದರೆ ತೆರಿಗೆದಾರರು ತಮ್ಮ ಬ್ಯಾಂಕ್ ವಿವರಗಳನ್ನು ವೆರಿಫೈ ಮಾಡದ ಕಾರಣ ಇಲಾಖೆಯು ಅವುಗಳನ್ನು ನೀಡಲು ಸಾಧ್ಯವಾಗುವುದಿಲ್ಲ ಎಂದು ಇಲಾಖೆಯು ಹೇಳಿದೆ.
"ಐಟಿಆರ್‌ಗಳನ್ನು ಪ್ರಕ್ರಿಯೆಗೊಳಿಸಿ, ಎಷ್ಟು ರಿಫಂಡ್ ಎಂದು ಕೂಡಾ ನಿರ್ಧಾರ ಮಾಡಲಾಗಿದೆ. ಆದರೆ ತೆರಿಗೆದಾರರು ರಿಫಂಡ್ ಮಾಡುವ ತಮ್ಮ ಬ್ಯಾಂಕ್ ಖಾತೆಯ ವಿವರವನ್ನು ಸರಿಯಾಗಿ ನೀಡದ ಕಾರಣದಿಂದಾಗಿ ರಿಫಂಡ್ ಅನ್ನು ಪ್ರಕ್ರಿಯೆಗೊಳಿಸಲು ಸಾಧ್ಯವಾಗುತ್ತಿಲ್ಲ. ತೆರಿಗೆದಾರರು ತಮ್ಮ ಬ್ಯಾಂಕ್ ಖಾತೆಗಳನ್ನು ಇ-ಫೈಲಿಂಗ್ ಪೋರ್ಟಲ್ ಮೂಲಕ ಶೀಘ್ರವೇ ವೆರಿಫೈ ಮಾಡಬೇಕು," ಎಂದು ಪತ್ರಿಕಾ ಪ್ರಕಟಣೆಯಲ್ಲಿ ಸೇರಿಸಲಾಗಿದೆ.


Click it and Unblock the Notifications