ನವದೆಹಲಿ, ಆಗಸ್ಟ್ 31: ಎಲೆಕ್ಟ್ರಾನಿಕ್ ವಹಿವಾಟುಗಳ ಮೇಲೆ ಶುಲ್ಕ ವಿಧಿಸದಂತೆ ಬ್ಯಾಂಕುಗಳಿಗೆ ಆದಾಯ ತೆರಿಗೆ ಇಲಾಖೆಯು ಭಾನುವಾರ ಎಚ್ಚರಿಕೆ ನೀಡಿದೆ.
ಕೇಂದ್ರ ಸರ್ಕಾರ ಡಿಜಿಟಲ್ ಪಾವತಿಗೆ ಹೆಚ್ಚು ಉತ್ತೇಜನ ನೀಡುತ್ತಲೇ ಬಂದಿದೆ. ಯುಪಿಐ ಪಾವತಿಗಳು ಮುಕ್ತ ಎಂದು ಸರ್ಕಾರ ಹೇಳುತ್ತದೆ. ಇದರ ನಡುವೆ ಕೆಲ ಖಾಸಗಿ ಬ್ಯಾಂಕುಗಳು ಯುಪಿಐ ಪಾವತಿಗೆ ಗರಿಷ್ಠ ವಹಿವಾಟು ಮಿತಿ ಜಾರಿಗೆ ತಂದು ಶುಲ್ಕ ವಿಧಿಸುತ್ತಿವೆ.
ದೇಶದ ದೊಡ್ಡ ಖಾಸಗಿ ಬ್ಯಾಂಕುಗಳು ಯುಪಿಐ (ಏಕೀಕೃತ ಪಾವತಿ ಇಂಟರ್ಫೇಸ್) ಮೂಲಕ ಪ್ರಾರಂಭಿಸಿದ ವ್ಯಕ್ತಿಯಿಂದ ವ್ಯಕ್ತಿಗೆ (ಪಿ 2 ಪಿ) ಪಾವತಿಗಳಿಗೆ 2.5 ರೂ. ರಿಂದ 5 ರೂ.ಗಳವರೆಗೆ ಶುಲ್ಕವನ್ನು ವಿಧಿಸುತ್ತಿವೆ. ಯುಪಿಐ ಪಾವತಿಗಳು ಮುಕ್ತವಾಗಿರುತ್ತವೆ ಎಂದು ಸರ್ಕಾರ ಸಮರ್ಥಿಸಿಕೊಂಡಿದ್ದರೂ, ಬ್ಯಾಂಕುಗಳು ಈ ಶುಲ್ಕಗಳನ್ನು ಜಾರಿಗೆ ತಂದಿವೆ ಎನ್ನಲಾಗಿದೆ.

ಕಳೆದ ವರ್ಷ, ಸರ್ಕಾರವು ಹೊಸ ನಿಬಂಧನೆಯನ್ನು ಸೇರಿಸಿದೆ. ಪ್ರತಿ ವ್ಯವಹಾರವು ವಾರ್ಷಿಕ 50 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ವಹಿವಾಟು ಹೊಂದಿರುವ ಗ್ರಾಹಕರಿಗೆ ನಿಗದಿತ ಪಾವತಿ ವಿಧಾನಗಳ ಮೂಲಕ ಪಾವತಿ ಮಾಡುವ ಆಯ್ಕೆಯನ್ನು ಒದಗಿಸುತ್ತದೆ. ಈ ಪಟ್ಟಿಯಲ್ಲಿ ಭೀಮ್ ಯುಪಿಐ, ಯುಪಿಐ-ಕ್ಯೂಆರ್ ಕೋಡ್, ಆಧಾರ್ ಪೇ, ಕೆಲವು ಡೆಬಿಟ್ ಕಾರ್ಡ್‌ಗಳು, ಎನ್‌ಇಎಫ್‌ಟಿ ಮತ್ತು ಆರ್‌ಟಿಜಿಎಸ್ ಮುಂತಾದ ವ್ಯವಸ್ಥೆಗಳಿವೆ.
ಜಿಎಸ್‌ಟಿ (ಸರಕು ಮತ್ತು ಮಾರಾಟ ತೆರಿಗೆ) ಹೊರತುಪಡಿಸಿ, 1000 ಕ್ಕಿಂತ ಕಡಿಮೆ ಅಥವಾ 1000 ರ ವಹಿವಾಟಿಗೆ 2.5 ರೂ. ಶುಲ್ಕವನ್ನು ವಿಧಿಸಲಾಗುತ್ತಿದೆ. ಇನ್ನು 1000 ರೂಪಾಯಿ ಮೇಲಿನ ವಹಿವಾಟಿಗೆ ಜಿಎಸ್‌ಟಿ ಹೊರತುಪಡಿಸಿ 5 ರೂಪಾಯಿ ಶುಲ್ಕ ವಿಧಿಸುತ್ತಿವೆ.


Click it and Unblock the Notifications