ಸಂಕ್ರಾಂತಿಗೆ ಹೆಚ್ಚಿದ ಕಬ್ಬಿನ ಬೇಡಿಕೆ! ಕಳೆದ ವರ್ಷಕ್ಕಿಂತ ಈ ವರ್ಷ ದುಬಾರಿಯಾಯ್ತು ಸಂಕ್ರಾಂತಿಯ ಕಪ್ಪು ಕಬ್ಬು!

ಸಂಕ್ರಾಂತಿ ಹಬ್ಬ ಹತ್ತಿರವಾಗುತ್ತಿದ್ದಂತೆ ಎಲ್ಲೆಲ್ಲೂ ಸಂಕ್ರಾಂತಿ ಹಬ್ಬದ ಸಂಭ್ರಮ ಕಳೆಗಟ್ಟುತ್ತಿದೆ. ಸುಗ್ಗಿ ಹಬ್ಬ ಮಕರ ಸಂಕ್ರಾಂತಿಗೆ ಬೆಂಗಳೂರಿನ ಮಾರುಕಟ್ಟೆಗಳು ತುಂಬಿ ತುಳುಕುತ್ತಿವೆ. ಸಂಕ್ರಾಂತಿ ಹಬ್ಬಕ್ಕಾಗಿ ಸಾಮಾಗ್ರಿಗಳನ್ನ ಕೊಳ್ಳಲು ಜನರು ಮರುಕಟ್ಟೆಯಲ್ಲಿ ಮುಗ ಬೀಳುತ್ತಿದ್ದಾರೆ. ಹಬ್ಬಕ್ಕಾಗಿ ಕಬ್ಬು, ಬೆಲ್ಲ, ಹೆಸರು, ಕಡಲೆ, ಎಳ್ಳು , ಅಕ್ಕಿ ಮತ್ತು ತೆಂಗಿನಕಾಯಿ ಕೊಳ್ಳಲು ಜನ ನಾಮುಂದೆ ತಾಮುಂದೆ ಎನ್ನುತ್ತಿದ್ದಾರೆ.

ಸರಿಯಾಗಿ ಸುಗ್ಗಿ ಹಬ್ಬ ಸಂಕ್ರಾಂತಿಯ ವೇಳೆಗೆ ಕಬ್ಬಿನ ಬೆಲೆ ಕೂಡ ಏರಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಸಂಕ್ರಾಂತಿಗೆ ಕಬ್ಬಿನ ಬೆಲೆ ಏರಿಕೆಯಾಗಿದೆ. ಈ ಬಾರಿ ಸುರಿದ ಅಧಿಕ ಮಳೆ ಕಬ್ಬಿನ ಬೆಳೆಯ ಮೇಲೆ ಕೂಡ ಪರಿಣಮ ಬೀರಿದೆ. ಹೀಗಾಗಿ ಸಂಕ್ರಾಂತಿಯ ಸಡಗರವನ್ನ ಹೆಚ್ಚಿಸುವ ಕಬ್ಬು ಈ ಬಾರಿ ದುಬಾರಿಯಾಗಿದೆ.

ಈ ಬಾರಿ ಸಂಕ್ರಾಂತಿಗೆ ದುಬಾರಿಯಾಯ್ತು ಕಬ್ಬಿನ ಬೆಲೆ!

ಹೊಸಕೋಟೆ ಮತ್ತು ಚನ್ನಪಟ್ಟಣದಲ್ಲಿ ಕಬ್ಬಿನ ಹೊಲವನ್ನ ಹೊಂದಿರುವ ರೈತ ಉಮ್ರಾಜ್‌ ಖಾನ್‌ ಮಾತನಾಡಿದ್ದು, ವರ್ಷದಲ್ಲೇ ಸಂಕ್ರಾಂತಿ ಸಮಯದಲ್ಲಿ ಕಬ್ಬಿಗೆ ಸಾಕಷ್ಟು ಬೇಡಿಕೆ ಇರುತ್ತದೆ. ಜನವರಿ 10 ರಿಂದ 14ರವರೆಗೆ ನಾವು ದಿನದ ವರೆಗೆ ನಾವು ದಿನದ 24 ಗಂಟೆಗಳ ಕಾಲ ನಾವು ಕೆಲಸ ಮಾಡತ್ತೇವೆ. ಅಲ್ಲದೆ ಈ ಬಾರ ಕಬ್ಬಿದೆ 100 ರೂ ಏರಿಕೆಯಾಗಿದೆ. ವಿಶೇಷವಾಗಿ ಕರಿ ಕಬ್ಬಿಗೆ ಬೇಡಿಕೆ ಹೆಚ್ಚಿದೆ ಎಂದು ಅವರು ತಿಳಿಸಿದ್ದಾರೆ.

ರೈತ ಶಾಹಿದ್ ಖಾನ್ ಎನ್ನುವವರು ಕೂಡ ಕಬ್ಬಿನ ದರ ಏರಿಕೆ ಕುರಿತು ತಿಳಿಸಿದ್ದಾರೆ. ನಾನು ಬೆಂಗಳೂರಿಗೆ ಮತ್ತು ಹತ್ತಿರದ ನಗರಗಳಿಗೆ ಕಬ್ಬುಗಳನ್ನ ಸಾಗಿಸುತ್ತೇನೆ, ಈ ಹಬ್ಬದ ಸಮಯದಲ್ಲಿ ಸಮಾರು 40 ಟ್ರಿಪ್‌ ಮಾಡುತ್ತೇನೆ. ಈ ಹಿಂದೆ ಅಂದರೆ ಕಳೆದ ವರ್ಷ 10 ಕಬ್ಬಿನ ಮೂಟೆಗೆ 400 ರೂ ಇತ್ತು. ಆದ್ರೆ ಈ ವರ್ಷ ಬೆಲೆ ಹೆಚ್ಚಳವಾಗಿರುವುದರಿಂದ 500 ರೂ. ಏರಿಕೆಯಾಗಿದೆ.

ನಾವು ಕಬ್ಬುಗಳನ್ನ ಸಾಗಿಸುವದಕ್ಕಾಗಿ ಅವರು 7,000 ಕೊಟ್ರು ಕೂಡ ಇದರಿಂದ ಬೆಲೆ ಏರಿಕೆ ವೆಚ್ಚವನ್ನ ಅದು ಭರಿಸುವುದಿಲ್ಲ ಎಂದರು. ಜೊತೆಗೆ ಸಣ್ಣ ಹೆಚ್ಚಳಗಳು ನಮ್ಮ ವೆಚ್ಚಗಳಿಗೆ ಸಹಾಯ ಮಾಡುತ್ತದ, ನಮಗೆ ಬರುವ ಲಾಭ ಕೂಡ ಕಡಿಮೆ ಇರುತ್ತದೆ. ನಾವೇನು ಬೆಲೆ ಹೆಚ್ಚಿಸುವ ಮೂಲಕ ಗ್ರಾಹಕರಿಗೆ ಹೊರೆಯಾಗಿಸಲು ಬಯಸವುದಿಲ್ಲ ಎಂದು ಅವರು ತಿಳಸಿದರು.

ಸಹಜವಾಗಿ ಸಂಕ್ರಾಂತಿ ವೇಳೆ ಕಬ್ಬಿಗೆ ಬೇಡಿಕೆ ಹೆಚ್ಚಾಗುತ್ತದೆ ಅದರಲ್ಲೂ ಕಪ್ಪು ಕಬ್ಬನ್ನು ಕೇಳುವವರ ಸಂಖ್ಯೆ ಹೆಚ್ಚೇ ಇರುತ್ತದೆ. ಸಂಕ್ರಾಂತಿ ಬಂತೆಂದರೆ ಕಬ್ಬು ಬೆಳೆಗಾಗರರಿಗೆ ಹಬ್ಬವೋ ಹಬ್ಬ. ಏಕೆಂದರೆ ಎಲ್ಲೇಲ್ಲೂ ಕೂಡ ಕಬ್ಬು ಕೊಳ್ಳುವವರೇ ಕಣ್ಣಿಗೆ ಬೀಳುತ್ತಾರೆ. ಬೆಂಗಳೂರು, ಮೈಸೂರು, ರಾಮನಗರ ಜಿಲ್ಲಯಲ್ಲಿ ಕಬ್ಬು ಹೇರಳವಾಗಿ ಮಾರಾಟವಾಗುತ್ತದೆ. ಅಲ್ಲದೆ ಹಬ್ಬದ ಸಮಯದಲ್ಲಿ ಕರ್ನಾಟಕದ ಕಬ್ಬನ್ನ ತಮಿಳುನಾಡು ಮಾತ್ರವಲ್ಲದೇ, ಗುಜರಾತ್‌ ರಾಜ್ಯಗಳಿಗೂ ಕೂಡ ರವಾನೆ ಮಾಡಲಾಗುತ್ತದೆ.

ಸಂಕ್ರಾಂತಿ ಸಂಭ್ರಮ ಬೆಲ್ಲದಿಂದಲೇ ಆರಂಭ

ಸಂಕ್ರಾಂತಿ ಹಬ್ಬಕ್ಕಾಗಿ ವಿಶೇಷವಾಗಿ ಕಪ್ಪು ಕಬ್ಬನ್ನು ಎಲ್ಲರೂ ಖರೀದಿ ಮಾಡುತ್ತಾರೆ. ಕಬ್ಬಿಲ್ಲದೆ ಸಂಕ್ರಾಂತಿ ಅಪೂರ್ಣ ಎಂದು ಜನರು ಭಾವಿಸುತ್ತಾರೆ. ಸಂಕ್ಾಂತಗೆ ಕಬ್ಬು ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದ ಹಲವು ಪದಾರ್ಥಗಳಿವೆ. ಕಬ್ಬನ್ನು ಪೂಜೆಗಳಿಗೆ, ಆಚರಣೆಗಳಿಗೆ ಹೆಚ್ಚು ಬಳಕೆ ಮಾಡತ್ತಾರೆ.

ಎಲ್ಳು ಬೆಲ್ಲದ ಸಂಕ್ರಾಂತಿ ಎಂದೇ ಪ್ರತೀ ಹೊಂದಿರುವ ಈ ಮಕರ ಸಂಕ್ರಾಂತಗೆ ಕಬ್ಬಿನಿಂದ ಮಾಡುವ ಬೆಲ್ಲಕ್ಕೂ ಕೂಡ ಅಷ್ಟೇ ಪ್ರಾಮುಖ್ಯತೆ ಇದೆ. ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ ಎಂಬ ಮಾತೆ ಇದೆ. ಹೀಗಾಗಿ ಸಂಕ್ರಾಂತಿಗೆ ಬೆಲ್ಲವೇ ಎಲ್ಲದಕ್ಕಿಂತ ಮುಖ್ಯ ಎಂದೆನಿಕೊಳ್ಳತ್ತದೆ. ಎಳ್ಳು, ಬೆಲ್ಲ, ಹುರಿದ ಕಡಲೆಕಾಳು, ಹೆಸರು ಮತ್ತು ಬೆಲ್ಲದ ಮಿಶ್ರಣವನ್ನ ತಯಾರಿಸಿ ಜನರಿಗೆ ಹಂಚುತ್ತಾರೆ.

ಸೂರ್ಯ ದಕ್ಷಿಣದಿಂದ ಉತ್ತರಕ್ಕೆ ಚಲಿಸುತ್ತಾ ಮಕರ ರಾಶಿಯನ್ನ ಪ್ರವೇಶ ಮಾಡುತ್ತಾನೆ. ಹೀಗಾಗಿ ಈ ಹಬ್ಬವನ್ನ ಮಕರ ಸಂಕ್ರಾಂತಿ ಎನ್ನುತ್ತಾರೆ. ಇನ್ನು ಈ ಸಮಯದಲ್ಲಿ ಸುಗ್ಗಿ ಹಬ್ಬ ಕೂಡ ಆರಂಭವಾಗುತ್ತದೆ. ಹೀಗಾಗಿ ದೇಶದಾದ್ಯಂತ ಮಕರ ಸಂಕ್ರಾಂತಯನ್ನ ದೇಶದಾದ್ಯಂತ ಪ್ರಮುಖ ಹಬ್ಬವಾಗಿ ಆಚರಿಸುತ್ತಾರೆ.

ಈ ಹಬ್ಬವನ್ನ ಒಂದೊಂದು ರಾಜ್ಯದವರು ಒಂದೊಂದು ರೀತಿಯಲ್ಲಿ ಆಚರಿಸಲಾಗುತ್ತದೆ. ಕರ್ನಾಟಕದಲ್ಲಿ ಎಳ್ಳು ಬೆಲ್ಲದ ಹಬ್ಬವನ್ನ ಆಚರಿಸಿದರೆ, ತಮಳುನಾಡಿನಲ್ಲಿ ಪೊಂಗಲ್‌, ಕೇರಳದಲ್ಲಿ ಮಕರ ವಿಳಕ್ಕು, ಗುಜರಾತ್‌ನಲ್ಲಿ ಉತ್ತರಾಯಣ, ಪಂಜಾಬ್‌ನಲ್ಲಿ ಮಘಿ ಹಬ್ಬ, ಅಸ್ಸಾಂನಲ್ಲ ಮಾಘ ಬಿಹು, ತೆಲಂಾಣದಲ್ಲಿ ಹಾಗೆ ಆಂಧ್ರಪ್ರದೇಶದಲ್ಲಿ ಭೋಗಿ ಹಾಗೆ ಉತ್ತರ ಪ್ರದೇಶದಲ್ಲಿ ಲೋಹ್ರಿ ಎಂಬ ಹೆಸರಿನಲ್ಲಿ ವಿಭಿನ್ನವಾಗಿ ಆಚರಿಸಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+