ಇಂಡಿಯಾ ರೇಟಿಂಗ್ಸ್ ಅಂಡ್ ರೀಸರ್ಸ್ (Ind- Ra) ಭಾರತದ FY21 ಗ್ರಾಸ್ ಡೊಮೆಸ್ಟಿಕ್ ಪ್ರಾಡಕ್ಟ್ (ಜಿಡಿಪಿ) ಅಂದಾಜನ್ನು ಪರಿಷ್ಕರಿಸಿದೆ. ಈ ಹಿಂದೆ ಜಿಡಿಪಿ 11.4 ಪರ್ಸೆಂಟ್ ಕುಗ್ಗಬಹುದು ಎಂಬ ಅಂದಾಜು ಮಾಡಲಾಗಿತ್ತು. ಈಗ ಆ ಪ್ರಮಾಣವು 7.8 ಪರ್ಸೆಂಟ್ ಗೆ ಕುಗ್ಗಬಹುದು ಎಂದು ಪರಿಷ್ಕರಿಸಲಾಗಿದೆ. ಕೋವಿಡ್- 19 ಪ್ರಮಾಣ ಕಡಿಮೆ ಆಗುತ್ತಿರುವುದು ಹಾಗೂ ಎರಡನೇ ತ್ರೈಮಾಸಿಕದ ಫಲಿತಾಂಶ ನಿರೀಕ್ಷೆಗಿಂತ ಉತ್ತಮವಾಗಿರುವುದರಿಂದ ಈ ಬೆಳವಣಿಗೆ ಕಂಡಿದೆ.
"ಆದರೆ, ಎರಡನೇ ತ್ರೈಮಾಸಿಕದಲ್ಲಿ ಕಂಡ ಚೇತರಿಕೆ ಎಷ್ಟು ಸಮಯ ಹೀಗೆ ನಿರಂತರವಾಗಿ ಇರುತ್ತದೆ ಎಂಬ ಪ್ರಶ್ನೆ ಇದೆ. ಬಹುಮುಖ್ಯವಾಗಿ ಹಬ್ಬದ ಋತುವಿನ ಕಾರಣಕ್ಕೆ ಉತ್ತೇಜನ ದೊರೆತಿತ್ತು ಹಾಗೂ ಬೇಡಿಕೆ ಕುದುರಿತ್ತು" ಎಂದು Ind- Ra ಹೇಳಿಕೆಯಲ್ಲಿ ತಿಳಿಸಿದೆ.
ಸಾಮೂಹಿಕವಾಗಿ ಲಸಿಕೆ ಹಾಕುವ ತನಕ ಕೋವಿಡ್- 19 ಸವಾಲುಗಳು ಸಂಪೂರ್ಣವಾಗಿ ಹೋಗುವುದಿಲ್ಲ. ಆರ್ಥಿಕ ಚಟುವಟಿಕೆಗಳು, ಸಂಸ್ಥೆಗಳು ಕೊರೊನಾ ನಂತರದ ಜಗತ್ತಿಗೆ ಶೀಘ್ರವಾಗಿ ಹೊಂದಾಣಿಕೆ ಆಗಬೇಕಿದೆ ಎಂದು ಹೇಳಿಕೆಯಲ್ಲಿ ಹೇಳಲಾಗಿದೆ.

Ind- Ra ಈಗ ನಿರೀಕ್ಷೆ ಮಾಡಿರುವ ಪ್ರಕಾರ, FY21 GDP ಬೆಳವಣಿಗೆ 0.8 ಪರ್ಸೆಂಟ್ ಕುಗ್ಗಬಹುದು ಮತ್ತು FY21 ನಾಲ್ಕನೇ ತ್ರೈಮಾಸಿಕ ಜಿಡಿಪಿ ಬೆಳವಣಿಗೆ ಸಕಾರಾತ್ಮಕವಾಗಿ 0.3 ಪರ್ಸೆಂಟ್ ಆಗಬಹುದು ಎಂದಿದೆ. ಈ ಹಿಂದೆ FY22ನ ನಾಲ್ಕನೇ ತ್ರೈಮಾಸಿಕದಲ್ಲಿ ಸಕಾರಾತ್ಮಕ ಆಗಬಹುದು ಎಂದು ಅಂದಾಜಿಸಿತ್ತು.
Ind- Raದಿಂದ FY22ಕ್ಕೆ 9.6% ಬೆಳವಣಿಗೆ ನಿರೀಕ್ಷಿಸಿದೆ. ಮುಖ್ಯವಾಗಿ FY21ರ ಅನುಕೂಲಕರ/ದುರ್ಬಲ ಆಧಾರದ ಮೇಲೆ ಇಂಥ ಬೆಳವಣಿ ನಿರೀಕ್ಷೆ ಮಾಡಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಉತ್ಪಾದನೆ ಅಥವಾ ವಿದ್ಯುತ್ ಮತ್ತು ಇತರ ವಲಯಗಳು FY21 ಎರಡನೇ ತ್ರೈಮಾಸಿಕದಲ್ಲಿ ಸಕಾರಾತ್ಮಕ ಬೆಳವಣಿಗೆ ದಾಖಲಿಸಿದೆ ಮತ್ತು ಗಣಿಗಾರಿಕೆ ಹಾಗೂ ನಿರ್ಮಾಣ ವಲಯವು ನಕಾರಾತ್ಮಕ ಬೆಳವಣಿಗೆಯನ್ನು ಮಹತ್ತರ ಪ್ರಮಾಣದಲ್ಲಿ ಕುಗ್ಗಿಸಿದೆ.
ಆದರೆ, ಇದು ವ್ಯಾಪಾರ, ಹೋಟೆಲ್, ರಿಯಲ್ ಎಸ್ಟೇಟ್ ಹಾಗೂ ಪ್ರವಾಸೋದ್ಯಮಕ್ಕೆ ಅನ್ವಯಿಸಲ್ಲ. ಇನ್ನೂ ಕೆಲ ಕಾಲ ಬೇಡಿಕೆ ಚೇತರಿಸಿಕೊಳ್ಳುವ ಸಾಧ್ಯತೆ ಇಲ್ಲ ಎನ್ನಲಾಗಿದೆ. ಅದಕ್ಕೆ ಕಾರಣ ಸಾಮಾಜಿಕ ಅಂತರದ ನಿಯಮ ಮತ್ತು ಅಪಾಯದ ಸಾಧ್ಯತೆ ಹಾಗೇ ಇದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.


Click it and Unblock the Notifications