ಅಫ್ಘಾನಿಸ್ತಾನವನ್ನ ತಾಲಿಬಾನ್ ಆಕ್ರಮಿಸಿದ ಬಳಿಕ ಭಾರತದೊಂದಿಗಿನ ಆಮದು ಮತ್ತು ರಫ್ತುಗಳನ್ನು ನಿಲ್ಲಿಸಿದೆ ಎಂದು ಫೆಡರೇಶನ್ ಆಫ್ ಇಂಡಿಯನ್ ಎಕ್ಸ್‌ಪೋರ್ಟ್ ಆರ್ಗನೈಜೇಷನ್ (ಎಫ್‌ಐಇಒ) ಸ್ಪಷ್ಟಪಡಿಸಿದೆ.
ಆಗಸ್ಟ್ 15, 2021 ಭಾನುವಾರ ತಾಲಿಬಾನ್ ಕಾಬೂಲ್ ಪ್ರವೇಶಿಸಿ ಅಫ್ಘಾನಿಸ್ತಾನವನ್ನ ವಶಪಡಿಸಿಕೊಂಡಿತು. ಇದಾದ ಬಳಿಕ ಪ್ರಸ್ತುತ ತಾಲಿಬಾನ್ ಪಾಕಿಸ್ತಾನದ ಸಾಗಣೆ ಮಾರ್ಗಗಳ ಮೂಲಕ ಸರಕು ಸಾಗಣೆಯನ್ನು ನಿಲ್ಲಿಸಿದೆ. ಆ ಮೂಲಕ ದೇಶದಿಂದ ಆಮದು ಮಾಡುವುದನ್ನು ನಿಲ್ಲಿಸಿದೆ ಎಂದು ಎಫ್‌ಐಇಒ ಡೈರೆಕ್ಟರ್ ಜನರಲ್ (ಡಿಜಿ) ಡಾ. ಅಜಯ್ ಸಹಾಯ್ ಹೇಳಿದ್ದಾರೆ.
''ನಾವು ಅಫ್ಘಾನಿಸ್ತಾನದಲ್ಲಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಅಲ್ಲಿಂದ ಪಾಕಿಸ್ತಾನದ ಸಾಗಣೆ ಮಾರ್ಗದ ಮೂಲಕ ಆಮದು ಬರುತ್ತದೆ. ಇಲ್ಲಿಯವರೆಗೆ, ತಾಲಿಬಾನ್ ಪಾಕಿಸ್ತಾನಕ್ಕೆ ಸರಕು ಸಾಗಣೆಯನ್ನು ನಿಲ್ಲಿಸಿದೆ, ಆದ್ದರಿಂದ ವಾಸ್ತವಿಕವಾಗಿ ಭಾರತಕ್ಕೂ ಆಮದು ನಿಲ್ಲಿಸಿದೆ, "ಎಂದು ಅವರು ಹೇಳಿದರು.
ಭಾರತವು ತುಂಬಾ ದೀರ್ಘಕಾಲದಿಂದ ವಿಶೇಷ ವ್ಯಾಪಾರ ಮತ್ತು ಹೂಡಿಕೆಯ ಸಂಬಂಧವನ್ನ ಅಫ್ಘಾನಿಸ್ತಾನದೊಂದಿಗೆ ಹೊಂದಿದೆ.
" ನಾವು ಅಫ್ಘಾನಿಸ್ತಾನದ ಅತಿದೊಡ್ಡ ಪಾಲುದಾರರಲ್ಲಿ ಒಬ್ಬರಾಗಿದ್ದೇವೆ ಮತ್ತು ಅಫ್ಘಾನಿಸ್ತಾನಕ್ಕೆ ನಮ್ಮ ರಫ್ತುಗಳು 2021ರಲ್ಲಿ ಸುಮಾರು $ 835 ಮಿಲಿಯನ್ ರಷ್ಟಿದೆ. ನಾವು ಸುಮಾರು $ 510 ಮಿಲಿಯನ್ ಮೌಲ್ಯದ ವಸ್ತುಗಳನ್ನು ಆಮದು ಮಾಡಿಕೊಂಡಿದ್ದೇವೆ. ಆದರೆ ವ್ಯಾಪಾರದ ಹೊರತಾಗಿ, ನಾವು ಅಫ್ಘಾನಿಸ್ತಾನದಲ್ಲಿ ಗಣನೀಯ ಹೂಡಿಕೆಯನ್ನು ಹೊಂದಿದ್ದೇವೆ. ನಾವು ಅಫ್ಘಾನಿಸ್ತಾನದಲ್ಲಿ ಸುಮಾರು $ 3 ಬಿಲಿಯನ್ ಹೂಡಿಕೆ ಮಾಡಿದ್ದೇವೆ ಮತ್ತು ಅಫ್ಘಾನಿಸ್ತಾನದಲ್ಲಿ 400 ಯೋಜನೆಗಳನ್ನ ಹೊಂದಿದ್ದು, ಅವುಗಳಲ್ಲಿ ಕೆಲವು ಪ್ರಸ್ತುತ ನಡೆಯುತ್ತಿದೆ'' ಎಂದು ಶ್ರೀ ಸಹಾಯ್ ಹೇಳಿದರು.
ಇನ್ನು ಕೆಲವು ಸರಕುಗಳನ್ನು ಅಂತರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್ ಮೂಲಕ ರಫ್ತು ಮಾಡಲಾಗಿದೆ. ಇನ್ನು ಕೆಲವು ಸರಕುಗಳು ದುಬೈ ಮಾರ್ಗದ ಮೂಲಕ ಕಾರ್ಯನಿರ್ವಹಿಸುತ್ತದೆ ಎಂದು ಶ್ರೀ ಸಹಾಯ್ ಹೇಳಿದ್ದಾರೆ.
ಅಫ್ಘಾನಿಸ್ತಾನಕ್ಕೆ ಏನೆಲ್ಲಾ ರಫ್ತು?
ಭಾರತದಿಂದ ಅಫ್ಥಾನಿಸ್ತಾನಕ್ಕೆ ಪ್ರಮುಖವಾಗಿ ಸಕ್ಕರೆ, ಔಷಧಿಗಳು, ಉಡುಪು, ಚಹಾ, ಕಾಫಿ, ಮಸಾಲೆಗಳು ಮತ್ತು ಟ್ರಾನ್ಸಿಮಿಶನ್ ಟವರ್‌ಗಳನ್ನು ರಫ್ತು ಮಾಡಲಾಗುವುದು.
ಭಾರತಕ್ಕೆ ಏನೆಲ್ಲಾ ಆಮದು?
ಅಫ್ಥಾನಿಸ್ತಾನಕ್ಕೆ ಏನೆಲ್ಲಾ ಭಾರತವು ರಫ್ತು ಮಾಡುತ್ತದೆ ಎಂದು ಈ ಮೇಲಿನ ಮಾಹಿತಿ ತಿಳಿದಿದ್ದೀರಾ. ಭಾರತವು ಅಫ್ಥಾನಿಸ್ತಾನದಿಂದ ಪ್ರಮುಖವಾಗಿ ಡ್ರೈ ಫ್ರೂಟ್ಸ್, ಸ್ವಲ್ಪ ಗಮ್ ಮತ್ತು ಈರುಳ್ಳಿಯನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಅದರಲ್ಲೂ ಶೇಕಡಾ 85ರಷ್ಟು ಡ್ರೈ ಫ್ರೂಟ್ಸ್ ಅಫ್ಥಾನಿಸ್ತಾನದಿಂದಲೇ ಆಮದಾಗುವುದು ಎಂದು ಎಫ್‌ಐಇಒ ಡಿಜಿ ಹೇಳಿದ್ದಾರೆ.
ಉಭಯ ರಾಷ್ಟ್ರಗಳ ವ್ಯಾಪಾರ-ವಹಿವಾಟು ನಡೆಯುತ್ತದೆಯೇ?
ಹೌದು ಎನ್ನುತ್ತಾರೆ ಎಫ್‌ಐಇಒ ಡಿಜಿ. ಅಫ್ಘಾನಿಸ್ತಾನದಲ್ಲಿ ವೇಗವಾಗಿ ಬದಲಾಗುತ್ತಿರುವ ಪರಿಸ್ಥಿತಿಯ ಹೊರತಾಗಿಯೂ, ಅಫ್ಘಾನಿಸ್ತಾನದೊಂದಿಗಿನ ಭಾರತ ವ್ಯಾಪಾರ ಸಂಬಂಧಗಳ ಬಗ್ಗೆ ಭರವಸೆ ಮತ್ತು ಆಶಾವಾದಿಯಾಗಿದ್ದಾನೆ ಎಂದು ಶ್ರೀ ಸಹಾಯ್ ಹೇಳಿದ್ದಾರೆ.
'' ಸದ್ಯ ಈ ಪರಿಸ್ಥಿತಿಯಲ್ಲಿ ತಾಲಿಬಾನ್ ಆಮದು ಮತ್ತು ರಫ್ತು ಸ್ಥಗಿತಗೊಳಿಸಿದ್ದರೂ, ಅಫ್ಘಾನಿಸ್ತಾನದ ಆರ್ಥಿಕ ಅಭಿವೃದ್ಧಿಗೆ ಇರುವ ಏಕೈಕ ಮಾರ್ಗ ವ್ಯಾಪಾರ ಎಂಬುದನ್ನು ಅರಿತುಕೊಳ್ಳಲಿದೆ ಎಂದು ಭಾವಿಸುತ್ತೇನೆ . ಹೊಸ ಆಡಳಿತವು ರಾಜಕೀಯ ನ್ಯಾಯಸಮ್ಮತತೆಯನ್ನು ಹೊಂದಲು ಬಯಸುತ್ತದೆ ಎಂದು ನಾನು ಭಾವಿಸುತ್ತೇನೆ ಮತ್ತು ಅದಕ್ಕಾಗಿ ಭಾರತದ ಪಾತ್ರವು ಅವರಿಗೆ ಮುಖ್ಯವಾಗುತ್ತದೆ, "ಎಂದು ಅವರು ಹೇಳಿದರು.
ಡ್ರೈ ಫ್ರೂಟ್ಸ್ ಬೆಲೆ ಏರಿಕೆಯಾಗಲಿದೆ!
ಮುಂಬರುವ ದಿನಗಳಲ್ಲಿ ಅಫ್ಘಾನಿಸ್ತಾನದಲ್ಲಿನ ಬಿಕ್ಕಟ್ಟಿನಿಂದಾಗಿ ಡ್ರೈ ಫ್ರೂಟ್ಸ್ ಬೆಲೆಗಳು ಹೆಚ್ಚಾಗಬಹುದು ಎಂದು ಫೆಡರೇಶನ್ ಆಫ್ ಇಂಡಿಯಾ ರಫ್ತು ಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಭಾರತವು ಸುಮಾರು ಶೇಕಡಾ 85 ರಷ್ಟು ಡ್ರೈ ಫ್ರೂಟ್ಸ್ ಅನ್ನು ಅಫ್ಘಾನಿಸ್ತಾನದಿಂದ ಆಮದು ಮಾಡಿಕೊಳ್ಳುತ್ತಿದೆ.


Click it and Unblock the Notifications