ISRO Chief: ಭಾರತಕ್ಕೆ ಮಂಗಳ, ಶುಕ್ರಕ್ಕೆ ಸಂಚರಿಸುವ ಸಾಮರ್ಥ್ಯವಿದೆ, ಆದರೆ ಹೂಡಿಕೆಬೇಕು: ಇಸ್ರೋ ಮುಖ್ಯಸ್ಥ

ಚಂದ್ರಯಾನ-3 ರ ಲ್ಯಾಂಡರ್‌ ಆಗಸ್ಟ್ 23 ರಂದು ಚಂದ್ರನ ದಕ್ಷಿಣ ಧ್ರುವದ ಬಳಿ ಯಶಸ್ವಿಯಾಗಿ ಲ್ಯಾಂಡ್ ಆಗಿದೆ. ಈ ಮಿಷನ್ ಯಶಸ್ವಿಯಾಗಿದೆ. ಈ ಬೆನ್ನಲ್ಲೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮುಖ್ಯಸ್ಥ ಎಸ್ ಸೋಮನಾಥ್ ಭಾನುವಾರ, "ಭಾರತವು ಚಂದ್ರ, ಮಂಗಳ ಮತ್ತು ಶುಕ್ರಕ್ಕೆ ಪ್ರಯಾಣಿಸುವ ಸಾಮರ್ಥ್ಯವನ್ನು ಹೊಂದಿದೆ. ಆದರೆ ಈ ವಲಯಕ್ಕೆ ಹೆಚ್ಚಿನ ಹೂಡಿಕೆಯ ಅಗತ್ಯವಿದೆ," ಎಂದು ಒತ್ತಿ ಹೇಳಿದ್ದಾರೆ.

ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್, "ಭಾರತವು ಚಂದ್ರ, ಮಂಗಳ ಮತ್ತು ಶುಕ್ರಕ್ಕೆ ಪ್ರಯಾಣಿಸುವ ಸಾಮರ್ಥ್ಯವನ್ನು ಹೊಂದಿದೆ. ಆದರೆ ನಾವು ನಮ್ಮ ಆತ್ಮವಿಶ್ವಾಸ ಹೆಚ್ಚಿಸಬೇಕಾಗಿದೆ. ನಮಗೆ ಹೆಚ್ಚಿನ ಹೂಡಿಕೆಯ ಅಗತ್ಯವಿದೆ. ಬಾಹ್ಯಾಕಾಶ ಕ್ಷೇತ್ರವು ಅಭಿವೃದ್ಧಿ ಹೊಂದಬೇಕು. ಇದರಿಂದ ಇಡೀ ರಾಷ್ಟ್ರವು ಅಭಿವೃದ್ಧಿ ಹೊಂದಬೇಕು. ಅದು ನಮ್ಮ ಧ್ಯೇಯ. ನಾವು ಪ್ರಧಾನಿ ಮೋದಿ ನಮಗೆ ನೀಡಿದ ದೂರದೃಷ್ಟಿಯನ್ನು ಈಡೇರಿಸಲು ಸಿದ್ಧರಾಗಿದ್ದಾರೆ," ಎಂದು ತಿಳಿಸಿದ್ದಾರೆ.

 ಭಾರತ ಮಂಗಳ, ಶುಕ್ರಕ್ಕೆ ಸಂಚರಿಸಬಹುದು, ಆದರೆ ಹೂಡಿಕೆಬೇಕು: ಇಸ್ರೋ

ಚಂದ್ರಯಾನ-3ರ ಸಾಧನೆಯ ನಂತರ ಸೋಮನಾಥ್ ಮಾತನಾಡುತ್ತಾ, "ಸೆಪ್ಟೆಂಬರ್ ಮೊದಲ ವಾರದಲ್ಲಿ ಇಸ್ರೋ ಸೂರ್ಯನ ಸಂಶೋಧನೆಗಾಗಿ ಉಪಗ್ರಹ ಆದಿತ್ಯ-1 ಅನ್ನು ಉಡಾವಣೆ ಮಾಡಲಿದೆ. ಉಡಾವಣೆ ನಂತರ, ಲ್ಯಾಗ್ರೇಂಜ್ ಪಾಯಿಂಟ್ 1 (L1) ಅನ್ನು ತಲುಪಲು ಭೂಮಿಯಿಂದ 125 ದಿನಗಳನ್ನು ತೆಗೆದುಕೊಳ್ಳುತ್ತದೆ. ನಾವು ಅಲ್ಲಿಯವರೆಗೆ ಕಾಯಬೇಕಾಗಿದೆ," ಎಂದು ಮಾಹಿತಿ ನೀಡಿದ್ದಾರೆ.

ರಾಷ್ಟ್ರೀಯ ಬಾಹ್ಯಾಕಾಶ ದಿನ ಘೋಷಣೆ

ಚಂದ್ರಯಾನ ಮಿಷನ್‌ನ ಸಾಧನೆಗೆ ಅಭಿನಂದನೆಗಳನ್ನು ತಿಳಿಸಲು ಪ್ರಧಾನಿ ನರೇಂದ್ರ ಮೋದಿ ಶನಿವಾರ ಬೆಂಗಳೂರಿನ ಇಸ್ರೋ ಕಮಾಂಡ್ ಪ್ರಧಾನ ಕಚೇರಿಗೆ ಆಗಮಿಸಿದ್ದು ವಿಜ್ಞಾನಿಗಳೊಂದಿಗೆ ಮಾತನಾಡಿದರು. ಪ್ರಧಾನಮಂತ್ರಿಯವರು ತಮ್ಮ ಭಾಷಣದಲ್ಲಿ ವಿಕ್ರಮ್ ಮಾಡ್ಯೂಲ್‌ನ ಲ್ಯಾಂಡಿಂಗ್ ಸೈಟ್ ಅನ್ನು ಶಿವಶಕ್ತಿ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಇದೇ ಸಂದರ್ಭದಲ್ಲಿ ಚಂದ್ರಯಾನ-2 ರ 2019 ರ ಕ್ರ್ಯಾಶ್ ಲ್ಯಾಂಡಿಂಗ್ ಸೈಟ್ ಅನ್ನು ತಿರಂಗಾ ಎಂದು ಗುರುತಿಸಿದರು. ಹಾಗೆಯೇ ಚಂದ್ರಯಾನ-3 ರ ಯಶಸ್ವಿಯ ಸ್ಮರಣಾರ್ಥವಾಗಿ ಪ್ರಧಾನಿ ಮೋದಿ ಆಗಸ್ಟ್ 23 ಅನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನ ಎಂದು ಘೋಷಿಸಿದರು.

ಮಂಗಳ ಮತ್ತು ಶುಕ್ರಕ್ಕೆ ಇಸ್ರೋದ ಮಿಷನ್‌ಗಳ ಅಭಿವೃದ್ಧಿ ಈಗಾಗಲೇ ಪ್ರಾರಂಭವಾಗಿದೆ. 2025 ರ ಸುಮಾರಿಗೆ ಶುಕ್ರಯಾನ-1 ಟೇಕ್ ಆಫ್ ಆಗುವ ನಿರೀಕ್ಷೆಯಿದೆ. 2024 ಅಥವಾ 2025 ರಲ್ಲಿ ಭಾರತದ ಎರಡನೇ ಮಂಗಳಯಾನವಾದ ಮಾರ್ಸ್ ಆರ್ಬಿಟರ್ ಮಿಷನ್-2 ಉಡಾವಣೆಯಾಗಲಿದೆ ಎಂದು ಇಸ್ರೋ ಅಧಿಕಾರಿಗಳು ಹೇಳಿದ್ದಾರೆ.

ಬಜೆಟ್ ಹಂಚಿಕೆ ಹೇಗಿದೆ?

ಈ ಹಣಕಾಸು ವರ್ಷದಲ್ಲಿ ನಾವು ನೋಡಿದಾಗ ಬಾಹ್ಯಾಕಾಶ ವಲಯವು ಕಳೆದ ಹಣಕಾಸು ವರ್ಷದಲ್ಲಿ ಪಡೆದ ಫಂಡಿಂಗ್‌ಗಿಂತ ಕಡಿಮೆ ಫಂಡಿಂಗ್ ಅನ್ನು ಪಡೆದಿದೆ. ಆದರೆ ಕಳೆದ ಕೆಲವು ವರ್ಷಗಳಲ್ಲಿ ಬಾಹ್ಯಾಕಾಶ ಇಲಾಖೆಯ ಫಂಡಿಂಗ್ ಹೆಚ್ಚಳವಾಗುತ್ತಾ ಸಾಗಿತ್ತು. ಬಾಹ್ಯಾಕಾಶ ಇಲಾಖೆಗೆ ಹಣಕಾಸು ವರ್ಷ 2023-24ರಲ್ಲಿ 12,543 ಕೋಟಿ ರೂಪಾಯಿ, ಹಣಕಾಸು ವರ್ಷ 2022-23ರಲ್ಲಿ 13,700 ಕೋಟಿ ರೂಪಾಯಿ ಹಂಚಿಕೆ ಮಾಡಲಾಗಿದೆ.

ಇನ್ನು ಹಣಕಾಸು ವರ್ಷ 2021-22ರಲ್ಲಿ (ಕಳೆದ ಐದು ವರ್ಷಗಳ ಅವಧಿಯಲ್ಲೇ ಅಧಿಕ ಹಂಚಿಕೆ) 13,950 ಕೋಟಿ ರೂಪಾಯಿ ಹಂಚಿಕೆ ಮಾಡಲಾಗಿದೆ. ಹಣಕಾಸು ವರ್ಷ 2020-21ರಲ್ಲಿ ಬಾಹ್ಯಾಕಾಶ ಇಲಾಖೆಗೆ 13,480 ಕೋಟಿ ರೂಪಾಯಿ ಮತ್ತು ಹಣಕಾಸು ವರ್ಷ 2019-20ರಲ್ಲಿ 12,470 ಕೋಟಿ ರೂಪಾಯಿಯನ್ನು ಬಜೆಟ್‌ನಲ್ಲಿ ಹಂಚಿಕೆ ಮಾಡಲಾಗಿದೆ. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಮಂಗಳ ಮಿಷನ್, ಚಂದ್ರ ಮಿಷನ್‌ ಯಶಸ್ವಿಯಾಗಿ ನಡೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+