ಭಾರತದ ಉತ್ತಮ ಆರ್ಥಿಕ ಪ್ರಗತಿಯ ಹಾದಿಯಲ್ಲಿ ನಡೆಯುತ್ತಿದೆ. ಭಾರತದ ಆರ್ಥಿಕತೆಯ ಬಗ್ಗೆ ವಿಶ್ವದ ನಾನಾ ದೇಶಗಳು ನೋಡಿ ಅಚ್ಚರಿ ಮೂಡಿಸಿವೆ. ಈ ಬಗ್ಗೆ ಈಗಾಗಲೇ ವಿಶ್ವದ ಹೆಸರಾಂತ ಕಂಪನಿಗಳು ಈಗಾಗಲೇ ಭವಿಷ್ಯ ನುಡಿದಿವೆ. ಈ ಸಾಲಿಗೆ ಇನ್ನೊಂದು ಸಂಸ್ಥೆ ಸೇರಿಕೊಳ್ಳಲಿದೆ.
2027 ರ ವೇಳೆಗೆ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಜೆಫರೀಸ್ ಬುಧವಾರ ಭವಿಷ್ಯ ನುಡಿದಿತ್ತು. ಇದೀಗ ವಿಶ್ವ ಆರ್ಥಿಕ ವೇದಿಕೆಯ ಅಧ್ಯಕ್ಷ ಬೋರ್ಗೆ ಬ್ರೆಂಡೆ ಭಾರತವು 10 ಟ್ರಿಲಿಯನ್ ಆರ್ಥಿಕತೆಯ ಹಾದಿಯಲ್ಲಿದೆ ಎಂದು ಹೇಳಿದ್ದಾರೆ.

ಪಿಟಿಐಗೆ ನೀಡಿದ ಸಂದರ್ಶನದಲ್ಲಿ ವಿಶ್ವ ಆರ್ಥಿಕ ವೇದಿಕೆಯ ಅಧ್ಯಕ್ಷರು ಈ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಭಾರತವು 10 ಬಿಲಿಯನ್ ಡಾಲರ್ ಆರ್ಥಿಕತೆಯ ಹಾದಿಯಲ್ಲಿದೆ. ಶೀಘ್ರದಲ್ಲೇ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಹೇಳಿದರು.
ವಿಶ್ವದ ಎಲ್ಲಾ ಪ್ರಮುಖ ಆರ್ಥಿಕತೆಗಳಲ್ಲಿ ಭಾರತದ ಆರ್ಥಿಕತೆಯು ವೇಗವಾಗಿ ಬೆಳೆಯುತ್ತಿದೆ. ದಾವೋಸ್‌ನಲ್ಲಿ ನಡೆದ ಈ ವಿಶ್ವ ಆರ್ಥಿಕ ವೇದಿಕೆ ಸಭೆಯಲ್ಲಿ ನಾವು ಭಾರತದಲ್ಲಿ ಹೂಡಿಕೆ ಮಾಡಲು ಹೆಚ್ಚಿನ ಆಸಕ್ತಿಯನ್ನು ನೋಡಿದ್ದೇವೆ. ಇದು ಭವಿಷ್ಯದಲ್ಲಿಯೂ ಮುಂದುವರಿಯುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಬೋರ್ಗೆ ಬ್ರೆಂಡೆ ತಿಳಿಸಿದ್ದಾರೆ.

ವಿಶ್ವ ಆರ್ಥಿಕ ವೇದಿಕೆಯ ಅಧ್ಯಕ್ಷರು ಮಾತನಾಡಿ, ನೀವು ಭಾರತಕ್ಕೆ ಬಂದಾಗಲೆಲ್ಲಾ ನೀವು ಭರವಸೆಯ ತುಂಬಿರುವಿರಿ. ಇದು ಪ್ರಪಂಚದ ಬೇರೆ ದೇಶದಲ್ಲಿ ನೋಡಲು ಸಾಧ್ಯವಿಲ್ಲ ಎಂದಿದ್ದಾರೆ.
ಭಾರತವು ಆರ್ಥಿಕವಾಗಿ ಶೇ.7 ರ ದರದಲ್ಲಿ ಬೆಳೆಯುತ್ತಿದೆ ಮತ್ತು ವಿಶ್ವದ ಅತಿದೊಡ್ಡ ಆರ್ಥಿಕತೆಯಾಗಿರುವ ಅಮೆರಿಕ ಕೂಡ ಉತ್ತಮ ಸಾಧನೆ ಮಾಡುತ್ತಿದೆ. ಮುಂದಿನ ಎರಡು ಮೂರು ವರ್ಷಗಳಲ್ಲಿ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಸಾಧ್ಯತೆ ಇದೆ. ಭಾರತದ ಗುರಿಯ ಕುರಿತು ಬೋರ್ಗೆ ಬ್ರೆಂಡೆ ಮಾತನಾಡಿ, ಮುಂಬರುವ ವರ್ಷಗಳಲ್ಲಿ ಭಾರತವು 10 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಹಾದಿಯಲ್ಲಿದೆ ಎಂದು ಹೇಳಿದರು.
ಭಾರತವು ಪ್ರಮುಖ ಸುಧಾರಣೆಗಳ ಮೂಲಕ ಸಾಗಿದೆ ಎಂದು ಬೋರ್ಗೆ ಬ್ರೆಂಡೆ ಹೇಳಿದರು. ಮತ್ತು ಎರಡು ದೊಡ್ಡ ಆರ್ಥಿಕತೆಗಳಾದ ಅಮೆರಿಕ ಮತ್ತು ಚೀನಾಕ್ಕೆ ಹೋಲಿಸಿದರೆ ಇದು ಉತ್ತಮ ಸ್ಥಾನದಲ್ಲಿದೆ. ಭಾರತದಲ್ಲಿ ವಿದೇಶಿ ಹೂಡಿಕೆಯಲ್ಲಿ ನಿರಂತರ ಹೆಚ್ಚಳವಿದೆ. ಉತ್ಪಾದನಾ ಚಟುವಟಿಕೆಯು ಈ ಹಿಂದೆ ಇತರ ದೇಶಗಳಲ್ಲಿ ಕಂಡುಬಂದಿದೆ ಎಂದಿದ್ದಾರೆ.


Click it and Unblock the Notifications