TEPA ಮುಕ್ತ ವ್ಯಾಪಾರ ಒಪ್ಪಂದ.. 100 ಬಿಲಿಯನ್ ಡಾಲರ್‌ ಹೂಡಿಕೆ..ಭಾರೀ ವಿದೇಶಿ ಹೂಡಿಕೆ ಭಾರತಕ್ಕೆ ಬರುವ ನಿರೀಕ್ಷೆ!

ಭಾರತ ಮತ್ತು ಯುರೋಪಿಯನ್ ಫ್ರೀ ಟ್ರೇಡ್ ಅಸೋಸಿಯೇಷನ್ (ಇಎಫ್‌ಟಿಎ) ನಡುವಿನ ವಾಣಿಜ್ಯ ಮತ್ತು ಆರ್ಥಿಕ ಸಹಭಾಗಿತ್ವ ಒಪ್ಪಂದವು ಅಕ್ಟೋಬರ್ 1 ರಿಂದ ಜಾರಿಗೆ ಬರಲಿದೆ. ಐಸ್‌ಲ್ಯಾಂಡ್, ಲಿಚ್ಟೆನ್‌ಸ್ಟೈನ್, ನಾರ್ವೆ ಮತ್ತು ಸ್ವಿಟ್ಜರ್ಲೆಂಡ್ ಈ ಒಕ್ಕೂಟದ ನಾಲ್ಕು ಪ್ರಮುಖ ಸದಸ್ಯ ರಾಷ್ಟ್ರಗಳಾಗಿವೆ.

ಹೌದು, ಮುಂದಿನ 15 ವರ್ಷಗಳಲ್ಲಿ ಭಾರತದ ಆರ್ಥಿಕತೆಯಲ್ಲಿ ಸುಮಾರು 100 ಬಿಲಿಯನ್ ಡಾಲರ್‌ಗಳಷ್ಟು ಬೃಹತ್ ಹೂಡಿಕೆ ಮಾಡಲು ಇಎಫ್‌ಟಿಎ ರಾಷ್ಟ್ರಗಳು ಬದ್ಧವಾಗಿವೆ. ಈ ಹೂಡಿಕೆಯು ದೇಶದಲ್ಲಿ ಸುಮಾರು 1 ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸುವ ಗುರಿಯನ್ನು ಒಳಗೊಂಡಿದೆ. ಒಂದು ವೇಳೆ ಈ ಬದ್ಧತೆಯನ್ನು ಪೂರೈಸಲು ಸಾಧ್ಯವಾಗದಿದ್ದರೆ, ಭಾರತವು ತಾನು ನೀಡಿದ ಸುಂಕ ವಿನಾಯಿತಿಗಳನ್ನು ಹಿಂಪಡೆಯುವ ಹಕ್ಕನ್ನು ಸಹ ಹೊಂದಿರುತ್ತದೆ.

TEPA ಒಪ್ಪಂದ ಭಾರತಕ್ಕೆ ಭಾರಿ ವಿದೇಶಿ ಹೂಡಿಕೆಯ ನಿರೀಕ್ಷೆ!

ಈ ಒಪ್ಪಂದದಡಿಯಲ್ಲಿ ಆಗುವ ಹೂಡಿಕೆಗಳಿಂದಾಗಿ ಉದ್ಯೋಗ ಸೃಷ್ಟಿಯಾಗುವುದರ ಜೊತೆಗೆ, ಶುದ್ಧ ಇಂಧನ, ಜೈವಿಕ ತಂತ್ರಜ್ಞಾನ, ಹಣಕಾಸು ಸೇವೆಗಳು ಮತ್ತು ಡಿಜಿಟಲ್ ವಾಣಿಜ್ಯದಂತಹ ಪ್ರಮುಖ ಕ್ಷೇತ್ರಗಳು ಅಭಿವೃದ್ಧಿ ಹೊಂದುವ ಸಾಧ್ಯತೆಗಳು ಇವೆ.

ವಾಣಿಜ್ಯ ಮತ್ತು ಆರ್ಥಿಕ ಸಹಭಾಗಿತ್ವ ಒಪ್ಪಂದ ಪ್ರಕಾರ,ಎರಡೂ ಕಡೆಯಿಂದ ಕೆಲವು ನಿರ್ದಿಷ್ಟ ವಿನಾಯಿತಿಗಳನ್ನು ನೀಡಲಾಗಿದೆ. ಭಾರತದಿಂದ ರಫ್ತಾಗುವ ಸರಕುಗಳ ಮೇಲೆ ಇಎಫ್‌ಟಿಎ ರಾಷ್ಟ್ರಗಳು ಶೇ 92.2 ರಷ್ಟು ಸುಂಕ ವಿನಾಯಿತಿ ನೀಡಿವೆ. ಇದು ಒಟ್ಟಾರೆ ರಫ್ತಿನ ಶೇ 99.6 ಅನ್ನು ಒಳಗೊಂಡಿದೆ. ಅದರಲ್ಲೂ ಮುಖ್ಯವಾಗಿ ಕೃಷಿಯೇತರ ಉತ್ಪನ್ನಗಳಿಗೆ ಶೇ 100 ಸುಂಕ ರಹಿತ ಪ್ರವೇಶ ದೊರೆಯಲಿದೆ. ಇದು ಭಾರತೀಯ ಕೈಗಾರಿಕೆಗಳಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ಪ್ರವೇಶಿಸಲು ಒಂದು ಉತ್ತಮ ಅವಕಾಶವಾಗಿದೆ.

ಸುಂಕ ವಿನಾಯಿತಿ

ಭಾರತ ತನ್ನ ಪಾಲಿಗೆ, ಇಎಫ್‌ಟಿಎ ರಾಷ್ಟ್ರಗಳಿಂದ ಬರುವ ರಫ್ತುಗಳ ಮೇಲೆ ಶೇ 82.7 ಸುಂಕ ಮಾರ್ಗಗಳಿಗೆ ವಿನಾಯಿತಿ ನೀಡಿದೆ. ಇದು ಇಎಫ್‌ಟಿಎ ದೇಶಗಳ ರಫ್ತಿನ ಶೇ 95.3 ಅನ್ನು ಒಳಗೊಂಡಿದೆ. ಚಿನ್ನದ ಆಮದು ವಿಚಾರದಲ್ಲಿ ಭಾರತವು ಹೆಚ್ಚಿನ ಆದ್ಯತೆ ನೀಡಿದ್ದು, ಶೇ 80 ವರೆಗೆ ಆಮದು ಮಾಡಿಕೊಳ್ಳಲು ಅವಕಾಶ ನೀಡಿದೆ. ಆದರೆ, ಚಿನ್ನದ ಮೇಲಿನ ಆಮದು ಸುಂಕದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ಒಪ್ಪಂದದ ಅನುಷ್ಠಾನದ ಸಂದರ್ಭದಲ್ಲಿ, ಕೆಲವು ಸೂಕ್ಷ್ಮ ವಲಯಗಳನ್ನು ರಕ್ಷಿಸಲಾಗಿದೆ. ಔಷಧಗಳು, ವೈದ್ಯಕೀಯ ಉಪಕರಣಗಳು, ಸಂಸ್ಕರಿಸಿದ ಆಹಾರದಂತಹ ಉತ್ಪನ್ನಗಳ ವಿಷಯದಲ್ಲಿ ಭಾರತೀಯ ನಿಯಮಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ವಿಶೇಷ ಮುನ್ನೆಚ್ಚರಿಕೆಯನ್ನು ತಗೆದುಕೊಳ್ಳಲಾಗಿದೆ.

ಡೈರಿ ಉತ್ಪನ್ನಗಳು, ಸೋಯಾ, ಕಲ್ಲಿದ್ದಲು ಮತ್ತು ಕೆಲವು ಕೃಷಿ ಉತ್ಪನ್ನಗಳನ್ನು ಈ ಒಪ್ಪಂದದ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಈ ಒಪ್ಪಂದವು ಒಂದು ಕಡೆ ವಿದೇಶಿ ಹೂಡಿಕೆಗೆ ಅವಕಾಶಗಳನ್ನು ಸೃಷ್ಟಿಸಿದರೆ, ಮತ್ತೊಂದೆಡೆ ದೇಶೀಯ ಕೈಗಾರಿಕೆಗಳ ಹಿತಾಸಕ್ತಿಗಳನ್ನು ಕಪಾಡಬಹುದು.

ಈ ಒಪ್ಪಂದದ ಮೂಲಕ ಸ್ವಿಸ್ ಕೈಗಡಿಯಾರಗಳು (ರೋಲೆಕ್ಸ್, ಒಮೆಗಾ, ಕಾರ್ಟಿಯರ್), ಚಾಕೊಲೇಟ್‌ಗಳು ಮತ್ತು ಉತ್ತಮ ಗುಣಮಟ್ಟದ ವೈನ್‌ಗಳನ್ನು ಸುಲಭವಾಗಿ ಆಮದು ಮಾಡಿಕೊಳ್ಳಬಹುದು. ಆದರೆ, 5 ಡಾಲರ್‌ಗಿಂತ ಕಡಿಮೆ ಬೆಲೆಯ ವೈನ್‌ಗಳಿಗೆ ಯಾವುದೇ ರಿಯಾಯಿತಿ ನೀಡಲಾಗುವುದಿಲ್ಲ. ಇದು ದೇಶೀಯ ವೈನ್ ಉದ್ಯಮವನ್ನು ರಕ್ಷಿಸುವ ಕ್ರಮವಾಗಿದೆ. ಡೈರಿ, ಸೋಯಾ, ಕಲ್ಲಿದ್ದಲು ಮತ್ತು ಇತರ ಕೃಷಿ ಉತ್ಪನ್ನಗಳನ್ನು ವಿನಾಯಿತಿ ಪಟ್ಟಿಯಲ್ಲಿ ಸೇರಿಕೆಯನ್ನು ಮಾಡಲಾಗಿದೆ. ಔಷಧ ಮತ್ತು ವೈದ್ಯಕೀಯ ಉಪಕರಣಗಳ ವಲಯಗಳನ್ನು ನಿರ್ಬಂಧಗಳಿಂದ ಮುಕ್ತವಾಗಿ ಇಡಲಾಗಿದೆ.

ಭಾರತವು ನಿತ್ಯಹರಿದ್ವರ್ಣ ಪೇಟೆಂಟ್‌ಗಳ ಮೇಲೆ ಸಂಪೂರ್ಣ ರಕ್ಷಣೆಯನ್ನು ಪಡೆದಿದೆ. ಇದರಿಂದ ಜೆನೆರಿಕ್ ಔಷಧಿಗಳ ತಯಾರಿಕೆಯಲ್ಲಿ ಭಾರತಕ್ಕೆ ಮತ್ತೊಂದು ದೊಡ್ಡ ಗೆಲುವು ಸಿಕ್ಕಿದಂತಾಗಿದೆ. ಈ ಒಪ್ಪಂದದಲ್ಲಿ ಸೇವಾ ವಲಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಇಎಫ್‌ಟಿಎ ರಾಷ್ಟ್ರಗಳು ಡಿಜಿಟಲ್, ಹಣಕಾಸು, ಜೈವಿಕ ತಂತ್ರಜ್ಞಾನ, ಆಹಾರ ಸಂಸ್ಕರಣೆ ಮತ್ತು ಲಾಜಿಸ್ಟಿಕ್ಸ್ ಕ್ಷೇತ್ರಗಳಲ್ಲಿ ಭಾರತೀಯ ಹೂಡಿಕೆಯನ್ನು ಆಕರ್ಷಿಸಲು ಆಶಿಸುತ್ತವೆ. ಇದರ ಜೊತೆಗೆ, ಪರಸ್ಪರ ಗುರುತಿಸುವಿಕೆ ಒಪ್ಪಂದಗಳ ಮೂಲಕ ನರ್ಸಿಂಗ್, ಚಾರ್ಟರ್ಡ್ ಅಕೌಂಟೆನ್ಸಿ ಮತ್ತು ವಾಸ್ತುಶಿಲ್ಪದಂತಹ ವೃತ್ತಿಪರ ಸೇವೆಗಳಿಗೆ ಪ್ರವೇಶ ಪಡೆಯಲು ಅವಕಾಶವಿದೆ.

ಈ ಒಪ್ಪಂದದ ಮಾತುಕತೆಗಳು 2008 ರಲ್ಲಿ ಪ್ರಾರಂಭವಾಗಿ 2013 ರಲ್ಲಿ ಸ್ಥಗಿತಗೊಂಡಿತ್ತು. ನಂತರ 2023 ರಲ್ಲಿ ಪುನರಾರಂಭಗೊಂಡವೆ. ಇದರ ಪರಿಣಾಮವಾಗಿ, ವ್ಯಾಪಾರ, ಸೇವೆಗಳು, ಬೌದ್ಧಿಕ ಆಸ್ತಿ ಹಕ್ಕುಗಳು ಮತ್ತು ಸುಸ್ಥಿರ ಅಭಿವೃದ್ಧಿಯಂತಹ ವಿಷಯಗಳನ್ನು ಒಳಗೊಂಡಂತೆ ಒಟ್ಟು 14 ಅಧ್ಯಾಯಗಳೊಂದಿಗೆ ಒಪ್ಪಂದವನ್ನು ಸಿದ್ಧಪಡಿಸಲಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+