2020-21ರ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆಯು ಶೇಕಡಾ 1.6 ರಷ್ಟು ಏರಿಕೆಯಾಗಿದೆ ಎಂದು ರಾಷ್ಟ್ರೀಯ ಅಂಕಿಅಂಶ ಕಚೇರಿ (ಎನ್‌ಎಸ್‌ಒ) ಬಿಡುಗಡೆ ಮಾಡಿದ ಅಧಿಕೃತ ಅಂಕಿ ಅಂಶಗಳ ಮೂಲಕ ತಿಳಿದುಬಂದಿದೆ.
ಆದರೆ 2020-21ರ ಪೂರ್ಣ ಹಣಕಾಸು ವರ್ಷದಲ್ಲಿ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಬೆಳವಣಿಗೆಯು ಶೇಕಡಾ 7.3ರಷ್ಟು ಕುಗ್ಗಿದೆ. ಇದು ಕಳೆದ ನಾಲ್ಕು ದಶಕದಲ್ಲಿ ಅತ್ಯಂತ ಕೆಳಮಟ್ಟದ್ದಾಗಿದೆ.

2020-21ರ ಮೊದಲ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆಯು ಶೇಕಡಾ 24.4 ರಷ್ಟು ಸಂಕುಚಿತಗೊಂಡಿದ್ದು, ಕಠಿಣ ಲಾಕ್‌ಡೌನ್‌ನಿಂದಾಗಿ ಅಗತ್ಯ ವಸ್ತುಗಳ ಉತ್ಪಾದನೆ ಮತ್ತು ಅಗತ್ಯ ಸೇವೆಗಳನ್ನು ಮಾತ್ರ ವಿನಾಯಿತಿ ನೀಡಲಾಗಿತ್ತು. ಆದರೆ ಉಳಿದ ಸರಕು ಮತ್ತು ಸೇವೆಗಳ ಉತ್ಪಾದನೆ ಮತ್ತು ಬೇಡಿಕೆ ಮೇಲೆ ಸಾಕಷ್ಟು ಪರಿಣಾಮ ಬೀರಿದೆ.
ಸಿಎನ್‌ಬಿಸಿ-ಟಿವಿ 18 ಸಮೀಕ್ಷೆಯಲ್ಲಿ ಜನವರಿ-ಮಾರ್ಚ್ ಅವಧಿಯಲ್ಲಿ ಜಿಡಿಪಿ ಬೆಳವಣಿಗೆಯು ಶೇಕಡಾ 0.9 ರಷ್ಟು ಎಂದು ಅಂದಾಜಿಸಲಾಗಿತ್ತು. ಆದರೆ ಶೇಕಡಾ 1.6 ರಷ್ಟು ದಾಖಲಾಗುವ ಮೂಲಕ ಜಿಡಿಪಿ ದರ ಉತ್ತಮವಾಗಿದೆ. ವರ್ಷದ ಹಿಂದಿನ ತ್ರೈಮಾಸಿಕದಲ್ಲಿ, ಜಿಡಿಪಿ ಶೇಕಡಾ 3 ರಷ್ಟು ಏರಿಕೆಯಾದರೆ, ಹಿಂದಿನ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ 0.5 ಪ್ರತಿಶತದಷ್ಟಿತ್ತು.
ಅಂತೆಯೇ, 2020-21ರ ಹಣಕಾಸು ವರ್ಷದಲ್ಲಿ ಒಟ್ಟು ಮೌಲ್ಯವರ್ಧಿತ (ಜಿವಿಎ) ಸಿಎನ್‌ಬಿಸಿ-ಟಿವಿ 18 ಸಮೀಕ್ಷೆಯ ಶೇ. 3ರ ವಿರುದ್ಧ, ಶೇಕಡಾ 3.7 ರಷ್ಟು ಬಂದಿದೆ. ಇನ್ನು ಜಿವಿಎ ಶೇಕಡಾ (-) 6.35ರ ವಿರುದ್ಧವಾಗಿ (-)6.2 ರಷ್ಟಿದೆ.


Click it and Unblock the Notifications