ಭಾರತದ GDP ಬೆಳವಣಿಗೆ ದರ ಚೇತರಿಕೆ: 4.7 ಪರ್ಸೆಂಟ್‌ಗೆ ಏರಿಕೆ

ಆರ್ಥಿಕತೆಯ ಮಂದಗತಿಯ ನಡುವೆ ತಗ್ಗಿದ್ದ ಭಾರತದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಬೆಳವಣಿಗೆ ದರ ಅಕ್ಟೋಬರ್-ಡಿಸೆಂಬರ್‌ನ ತ್ರೈಮಾಸಿಕದಲ್ಲಿ 4.7 ಪರ್ಸೆಂಟ್ ಏರಿಕೆಯಾಗಿದೆ.

ಮಾರ್ಚ್ ಅಂತ್ಯದ ಹಣಕಾಸು ವರ್ಷದಲ್ಲಿ ಒಟ್ಟಾರೆ ಜಿಡಿಪಿ ಬೆಳವಣಿಗೆಯನ್ನು ಸರ್ಕಾರವು 5 ಪರ್ಸೆಂಟ್‌ಗೆ ನಿಗದಿಪಡಿಸಿರುವ ಸಮಯದಲ್ಲಿ ದೇಶದ ಆರ್ಥಿಕ ಬೆಳವಣಿಗೆಯ ಕುರಿತು ರಾಷ್ಟ್ರೀಯ ಸಂಖ್ಯಾಶಾಸ್ತ್ರೀಯ ಕಚೇರಿಯು ದರವನ್ನು ಬಿಡುಗಡೆ ಮಾಡಿದೆ. ಈ ಮೂಲಕ ಅರ್ಥಶಾಸ್ತ್ರಜ್ಞರ ಅಂದಾಜಿನಂತೆ ಜಿಡಿಪಿ ದರವು ಚೇತರಿಕೆ ಕಂಡಿದೆ.

ಭಾರತದ GDP ಬೆಳವಣಿಗೆ ದರ ಚೇತರಿಕೆ: 4.7 ಪರ್ಸೆಂಟ್‌ಗೆ ಏರಿಕೆ

ಕಳೆದ ವರ್ಷ ಜುಲೈ ಹಾಗೂ ಸೆಪ್ಟೆಂಬರ್ ಮಧ್ಯದ 2ನೇ ತ್ರೈಮಾಸಿಕ ಜಿಡಿಪಿ ದರವು 4.5 ಪರ್ಸೆಂಟ್‌ಗೆ ಕುಸಿತ ಕಂಡಿತ್ತು. ಇದು ಕಳೆದ ಆರು ವರ್ಷಗಳಲ್ಲಿ ದಾಖಲಾದ ಅತಿ ಕಡಿಮೆ ಬೆಳವಣಿಗೆ ದರವಾಗಿತ್ತು.

ಡಿಸೆಂಬರ್ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆಯ ದರವು ಸುಧಾರಿಸಬಹುದು ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗವಾಗಿತ್ತು. , ಆದರೆ ಹಿಂದಿನ ತ್ರೈಮಾಸಿಕದಲ್ಲಿ ಪರಿಷ್ಕೃತ 5.1 ಪರ್ಸೆಂಟ್ ರಷ್ಟು ಬೆಳವಣಿಗೆಯ ದರಕ್ಕಿಂತ ಕಡಿಮೆಯಾಗಿದೆ. ಅಂಕಿ ಅಂಶಗಳ ಸಚಿವಾಲಯದ ಹೇಳಿಕೆಯ ಪ್ರಕಾರ ಜುಲೈ-ಸೆಪ್ಟೆಂಬರ್ ಅವಧಿಯ ಅಂಕಿ ಅಂಶವನ್ನು 4.5 ಪರ್ಸೆಂಟ್ ರಿಂದ 5.1 ಪರ್ಸೆಂಟ್ಗೆ ಪರಿಷ್ಕರಿಸಲಾಗಿದೆ.

ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ಆರ್ಥಿಕ ಬೆಳವಣಿಗೆ ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಈ ತಿಂಗಳ ಆರಂಭದಲ್ಲಿ ಹಲವಾರು ಕ್ರಮಗಳನ್ನು ಕೈಗೊಂಡಿತು. ಆದರೆ ಚೀನಾದಿಂದ ಹರಡಿರುವ ಕೊರೊನಾವೈರಸ್ ಸಾಂಕ್ರಾಮಿಕದಿಂದ ಜಾಗತಿಕ ಮಟ್ಟದಲ್ಲಿ ಉಂಟಾಗುವ ಪರಿಣಾಮಗಳಿಂದಾಗಿ ಜಿಡಿಪಿ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅನೇಕ ಅರ್ಥಶಾಸ್ತ್ರಜ್ಞರು ನಿರೀಕ್ಷಿಸಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+