ಆರ್ಥಿಕತೆಗೆ ಶಾಕಿಂಗ್ ನ್ಯೂಸ್; ಜಿಡಿಪಿ 5% ಗೂ ಕೆಳಗಿಳಿಯುವ ಅಂದಾಜು

ಭಾರತದ ಆರ್ಥಿಕ ಪ್ರಗತಿಯು ಕೊನೆ ತ್ರೈಮಾಸಿಕದಲ್ಲಿ ಹೊಸ ಕನಿಷ್ಠ ಮಟ್ಟಕ್ಕೆ ಮುಟ್ಟಬಹುದು, ಮುಂಚಿತವಾಗಿಯೇ ಅಂದಾಜು ಮಾಡುತ್ತಿರುವಂತೆ 5% ಗೂ ಕಡಿಮೆ ಮಟ್ಟ ತಲುಪಬಹುದು ಎನ್ನಲಾಗುತ್ತಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ನೂಮುರಾ ಇಂಕ್ ಮತ್ತು ಕ್ಯಾಪಿಟಲ್ ಎಕನಾಮಿಕ್ಸ್ ಲಿಮಿಟೆಡ್ ನ ಆರ್ಥಿಕ ತಜ್ಞರು ಪ್ರಗತಿಯ ಅಂದಾಜು ಪ್ರಮಾಣವನ್ನು ಇಳಿಕೆ ಮಾಡಿದ್ದಾರೆ.

ಜೂನ್- ಸೆಪ್ಟೆಂಬರ್ ತ್ರೈ ಮಾಸಿಕದಲ್ಲಿ ಪ್ರಗತಿ ದರವು 4.2% ನಿಂದ 4.7% ಮಧ್ಯೆ ಇರಬಹುದು ಎನ್ನಲಾಗುತ್ತಿದೆ. ಅಂದ ಹಾಗೆ ನವೆಂಬರ್ 29ನೇ ತಾರೀಕಿನಂದು ಸರ್ಕಾರವು ದತ್ತಾಂಶ ಬಿಡುಗಡೆ ಮಾಡಲಿದೆ. ಜಿಡಿಪಿ (ಗ್ರಾಸ್ ಡೊಮೆಸ್ಟಿಕ್ ಪ್ರಾಡಕ್ಟ್)ಗೆ 2012 ಅನ್ನು ಮೂಲ ವರ್ಷವಾಗಿ ಪರಿಗಣಿಸಿದ ಮೇಲೆ 4.2% ಪ್ರಗತಿ ದರವು ದಾಖಲಾದರೆ ಅದು ಅತ್ಯಂತ ಕಡಿಮೆ ಪ್ರಮಾಣದ್ದಾಗುತ್ತದೆ.

ಆರ್ಥಿಕತೆಗೆ ಶಾಕಿಂಗ್ ನ್ಯೂಸ್; ಜಿಡಿಪಿ 5% ಗೂ ಕೆಳಗಿಳಿಯುವ ಅಂದಾಜು

ಜೂನ್ ಅಂತ್ಯಕ್ಕೆ ಕೊನೆಯಾದ ತ್ರೈ ಮಾಸಿಕದಲ್ಲಿ 5% ಜಿಡಿಪಿ ದಾಖಲಾಗಿತ್ತು. ಈ ವರ್ಷದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಐದು ಬಾರಿ ಬಡ್ಡಿ ದರವನ್ನು ಕಡಿತ ಮಾಡಿದೆ. ಅಭಿವೃದ್ಧಿಗೆ ಪೂರಕವಾಗಲು ಈ ರೀತಿ ಮಾಡಲಾಗಿದೆ. ಜತೆಗೆ ಆರ್ಥಿಕ ಕ್ರಮವಾಗಿ ಸರ್ಕಾರವು ಕಂಪೆನಿಗಳಿಗೆ ಇಪ್ಪತ್ತು ಬಿಲಿಯನ್ ಅಮೆರಿಕನ್ ಡಾಲರ್ ತೆರಿಗೆ ಕಡಿತ ಮಾಡಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+