ಭಾರತದಲ್ಲಿ ಚಿನ್ನದ ಬೇಡಿಕೆ 36 ಪರ್ಸೆಂಟ್ ಇಳಿಕೆ

ಭಾರತದಲ್ಲಿ ಚಿನ್ನದ ಬೇಡಿಕೆಯು ಜನವರಿ-ಮಾರ್ಚ್‌ ತ್ರೈಮಾಸಿಕ ಅವಧಿಯಲ್ಲಿ 36 ಪರ್ಸೆಂಟ್‌ರಷ್ಟು ಇಳಿಕೆಯಾಗಿದೆ ಎಂದು ವಿಶ್ವ ಚಿನ್ನ ಮಂಡಳಿಯು (ಡಬ್ಲ್ಯೂಜಿಸಿ) ತಿಳಿಸಿದೆ.

ಚಿನ್ನಾಭರಣ ಮಳಿಗೆಗಳು ಬಂದ್ ಆಗಿರುವುದರ ಜೊತೆಗೆ ಜನರು ಸಂಕಷ್ಟದ ದಿನಗಳನ್ನು ಎದುರಿಸುತ್ತಿರುವುದರಿಂದ ಚಿನ್ನಾಭರಣ ಮತ್ತು ಚಿನ್ನದ ಮೇಲಿನ ಹೂಡಿಕೆಯ ಬೇಡಿಕೆಯು ಇಳಿಕೆ ಕಂಡಿದೆ.

ಭಾರತದಲ್ಲಿ ಚಿನ್ನದ ಬೇಡಿಕೆ 36 ಪರ್ಸೆಂಟ್ ಇಳಿಕೆ

''ಚಿನ್ನದ ಬೆಲೆಯು 25 ಪರ್ಸೆಂಟ್‌ರಷ್ಟು ಹೆಚ್ಚಾಗಿದ್ದು, ಮೊದಲ ತ್ರೈಮಾಸಿಕದಲ್ಲಿ 10 ಗ್ರಾಂ ದರ ಸರಾಸರಿ 36,875 ರುಪಾಯಿಯಷ್ಟಿತ್ತು. ಕಸ್ಟಮ್ಸ್ ಸುಂಕ ಮತ್ತು ತೆರಿಗೆಯನ್ನು ಇದು ಒಳಗೊಂಡಿಲ್ಲ. 2019ರ ಇದೇ ಅವಧಿಯಲ್ಲಿ 29,555 ರುಪಾಯಿ ಇತ್ತು'' ಎಂದು ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಸೋಮಸುಂದರಂ ಅವರು ತಿಳಿಸಿದ್ದಾರೆ.

ಮದುವೆ ಸಮಾರಂಭ, ಹಬ್ಬದಲ್ಲಿನ ಬೇಡಿಕೆಯನ್ನು ಗಮನಿಸಿದರೆ ಉತ್ತಮ ಮಾರಾಟವಾಗುವ ನಿರೀಕ್ಷೆಯಿತ್ತು. ಆದರೆ ಕೊರೊನಾ ಲಾಕ್‌ಡೌನ್‌ನಿಂದಾಗಿ ಮಾರ್ಚ್‌ನಿಂದ ಬೇಡಿಕೆಯು 41 ಪರ್ಸೆಂಟ್‌ರಷ್ಟು ಕುಸಿದಿದೆ ಎಂದಿದ್ದಾರೆ. ಅಲ್ಲದೆ ಚಿನ್ನದ ಮೇಲಿನ ಹೂಡಿಕೆಯ ಬೇಡಿಕೆಯು 17 ಪರ್ಸೆಂಟ್ ಕಡಿಮೆಯಾಗಿದ್ದು 28.1 ಟನ್‌ಗಳಷ್ಟಾಗಿದೆ. ಆದಾಗ್ಯೂ, ಮೌಲ್ಯದ ಪ್ರಕಾರ, ಚಿನ್ನದ ಹೂಡಿಕೆಯ ಬೇಡಿಕೆಯು ವರ್ಷದಿಂದ ವರ್ಷಕ್ಕೆ 4 ಪರ್ಸೆಂಟ್‌ರಷ್ಟು ಏರಿಕೆಯಾಗಿ, 10,350 ಕೋಟಿಗಳಿಗೆ ತಲುಪಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+