ಭಾರತದಲ್ಲಿ ಚಿನ್ನದ ಆಮದು ಪ್ರಮಾಣವು ಶೇಕಡ 30ರಷ್ಟು ಇಳಿಕೆಯಾಗಿದೆ. ವಾಣಿಜ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಏಪ್ರಿಲ್-ಫೆಬ್ರವರಿ 2023 ರ ಅವಧಿಯಲ್ಲಿ ಸುಮಾರು ಶೇಕಡ 30ರಷ್ಟು ಕುಸಿತ ಕಂಡು 31.8 ಬಿಲಿಯನ್ ಯುಎಸ್ ಡಾಲರ್‌ಗೆ ಇಳಿಕೆಯಾಗಿದೆ. ಪ್ರಮುಖವಾಗಿ ಭಾರತದ ಚಿನ್ನದ ಆಮದುಗಳು, ಹೆಚ್ಚಿನ ಕಸ್ಟಮ್ಸ್ ಸುಂಕ ಮತ್ತು ಜಾಗತಿಕ ಆರ್ಥಿಕ ಅನಿಶ್ಚಿತತೆಯಿಂದಾಗಿ ಭಾರತದಲ್ಲಿ ಚಿನ್ನದ ಆಮದು ಪ್ರಮಾಣ ಕುಸಿತವಾಗಿದೆ. 2021-22ರ ಅವಧಿಯಲ್ಲಿ ಹಳದಿ ಲೋಹದ ಆಮದು ಪ್ರಮಾಣವು 45.2 ಬಿಲಿಯನ್ ಯುಎಸ್ ಡಾಲರ್ ಆಗಿತ್ತು.
ಆಗಸ್ಟ್ 2022ರಿಂದ ಭಾರತದಲ್ಲಿ ಆಮದು ಪ್ರಮಾಣವು ಇಳಿಕೆಯಾಗುತ್ತಿದೆ. ಬೆಳ್ಳಿಯ ಆಮದು ಪ್ರಮಾಣವು 2023ರ ಏಪ್ರಿಲ್-ಫೆಬ್ರವರಿ ಅವಧಿಯಲ್ಲಿ 5.3 ಬಿಲಿಯನ್ ಯುಎಸ್ ಡಾಲರ್ ಆಗಿದ್ದು, ಶೇಕಡ 66ರಷ್ಟು ಏರಿಕೆಯಾಗಿದೆ. ಚಿನ್ನದ ಆಮದು ಪ್ರಮಾಣದಲ್ಲಿ ಗಮನಾರ್ಹ ಇಳಿಕೆಯಿಂದಾಗಿ ಭಾರತದಲ್ಲಿ ಟ್ರೇಡ್ ಡೆಫಿಸಿಟ್ (ಆಮದು ಹಾಗೂ ರಫ್ತು ನಡುವಿನ ವ್ಯತ್ಯಾಸ) ಕಡಿಮೆಯಾಗಿಲ್ಲ. ಏಪ್ರಿಲ್-ಫೆಬ್ರವರಿ 2022-23ರಲ್ಲಿ ಸರಕುಗಳ ವ್ಯಾಪಾರ ಕೊರತೆಯು 247.52 ಬಿಲಿಯನ್ ಡಾಲರ್ ಎಂದು ಅಂದಾಜು ಮಾಡಲಾಗಿದೆ. ವರ್ಷದ ಹಿಂದಿನ ಅವಧಿಯಲ್ಲಿ 172.53 ಬಿಲಿಯನ್ ಡಾಲರ್ ಆಗಿತ್ತು.

ಉದ್ಯಮದ ತಜ್ಞರ ಪ್ರಕಾರ, ಚಿನ್ನದ ಮೇಲಿನ ಹೆಚ್ಚಿನ ಆಮದು ಸುಂಕ ಮತ್ತು ಜಾಗತಿಕ ಆರ್ಥಿಕ ಅನಿಶ್ಚಿತತೆಗಳು ಅಮೂಲ್ಯವಾದ ಲೋಹದ ಆಮದುಗಳ ಕುಸಿತಕ್ಕೆ ಕಾರಣವಾಗಿದೆ. "ಭಾರತವು ಏಪ್ರಿಲ್-ಜನವರಿ 2023 ರ ಅವಧಿಯಲ್ಲಿ ಸುಮಾರು 600 ಟನ್‌ಗಳಷ್ಟು ಚಿನ್ನವನ್ನು ಆಮದು ಮಾಡಿಕೊಂಡಿದೆ. ಹೆಚ್ಚಿನ ಆಮದು ಸುಂಕದ ಕಾರಣ ಚಿನ್ನದ ಆಮದು ಪ್ರಮಾಣ ಕಡಿಮೆಯಾಗಿದೆ. ದೇಶೀಯ ಉದ್ಯಮಕ್ಕೆ ಸಹಾಯ ಮಾಡಲು ಮತ್ತು ರಫ್ತುಗಳನ್ನು ಹೆಚ್ಚಿಸಲು ಸರ್ಕಾರವು ಕ್ರಮವನ್ನು ಕೈಗೊಳ್ಳಬೇಕಾಗಿದೆ," ಎಂದು ಮಾಜಿ ಜಿಜೆಇಪಿಸಿ ಅಧ್ಯಕ್ಷ ಮತ್ತು ಕಾಮ ಆಭರಣದ ವ್ಯವಸ್ಥಾಪಕ ನಿರ್ದೇಶಕ ಕಾಲಿನ್ ಷಾ ಹೇಳಿದ್ದಾರೆ.
ಸಾಮಾನ್ಯವಾಗಿ ಚಿನ್ನದ ಬೆಲೆಯಲ್ಲಿ ಏರಿಕೆಯಾದರೆ ಚಿನ್ನದ ಬೇಡಿಕೆಯು ಕೂಡಾ ಕುಸಿತವಾಗುತ್ತದೆ. ಇನ್ನು ಚಿನ್ನದ ಬೆಲೆಯು ಏರಿಕೆಯಾಗುವಂತೆ ಮಾಡುವ ಮತ್ತೊಂದು ಅಂಶ ಹೆಚ್ಚಿನ ಸುಂಕವಾಗಿದೆ ಎಂದು ಕೂಡಾ ಕಾಲಿನ್ ಷಾ ತಿಳಿಸಿದ್ದಾರೆ. ಭಾರತವು ಚಿನ್ನವನ್ನು ಹೆಚ್ಚಾಗಿ ಆಮದು ಮಾಡಿಕೊಳ್ಳುವ ದೇಶವಾಗಿದೆ. ಮುಖ್ಯವಾಗಿ ಆಭರಣ ಉದ್ಯಮವು ಚಿನ್ನದ ಬೇಡಿಕೆಯ ಮೇಲೆ ಅವಲಂಭಿತವಾಗಿದೆ. ಮಾಹಿತಿ ಪ್ರಕಾರ ದೇಶವು ವಾರ್ಷಿಕವಾಗಿ 800-900 ಟನ್ ಚಿನ್ನವನ್ನು ಆಮದು ಮಾಡಿಕೊಳ್ಳುತ್ತದೆ. ಕಳೆದ ಹಣಕಾಸು ವರ್ಷದ 11 ತಿಂಗಳ ಅವಧಿಯಲ್ಲಿ ರತ್ನಗಳು ಮತ್ತು ಆಭರಣಗಳ ರಫ್ತು ಶೇಕಡ 0.3ರಷ್ಟು ಅಥವಾ 35.2 ಬಿಲಿಯನ್ ಯುಎಸ್ ಡಾಲರ್‌ಗೆ ಕುಸಿತ ಕಂಡಿದೆ. ಇನ್ನು ಈಗಾಗಲೇ ಕೇಂದ್ರ ಸರ್ಕಾರವು ಚಿನ್ನದ ಆಮದು ಸುಂಕವನ್ನು ಶೇಕಡ 10.75 ರಿಂದ ಶೇಕಡ 15 ಕ್ಕೆ ಹೆಚ್ಚಿಸಿದೆ.
ಭಾರತದಲ್ಲಿ ಚಿನ್ನದ ದರ ಎಷ್ಟಿದೆ ನೋಡಿ?
10 ದಿನದಲ್ಲಿ 2 ದಿನ ಚಿನ್ನದ ಬೆಲೆಯು ಏರಿಕೆಯಾಗಿದ್ದು, 5 ಬಾರಿ ಇಳಿದಿದೆ. ಏಪ್ರಿಲ್ ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ 390 ರೂಪಾಯಿ ಇಳಿಕೆಯಾಗಿದ್ದು ಪ್ರಸ್ತುತ 55,400 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 430 ರೂಪಾಯಿ ಕುಗ್ಗಿದ್ದು ಪ್ರಸ್ತುತ 60,430 ರೂಪಾಯಿ ಆಗಿದೆ. ಇಂದು ಬೆಳ್ಳಿ ದರ ಇಳಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರ 300 ರೂಪಾಯಿ ಇಳಿಕೆಯಾಗ್ಗಿದ್ದು ಪ್ರಸ್ತುತ 76,300ba ರೂಪಾಯಿ ಆಗಿದೆ.
10 ಗ್ರಾಂ ಲೆಕ್ಕಾಚಾರದಲ್ಲಿ
ಬೆಂಗಳೂರು
22 ಕ್ಯಾರೆಟ್ ಚಿನ್ನ: 55,450 ರೂಪಾಯಿ (-390 ರೂಪಾಯಿ)
24 ಕ್ಯಾರೆಟ್ ಚಿನ್ನ: 60,480 ರೂಪಾಯಿ (-430 ರೂಪಾಯಿ)
ಮುಂಬೈ
22 ಕ್ಯಾರೆಟ್ ಚಿನ್ನ: 55,400 ರೂಪಾಯಿ (-390 ರೂಪಾಯಿ)
24 ಕ್ಯಾರೆಟ್ ಚಿನ್ನ: 60,430 ರೂಪಾಯಿ (-430 ರೂಪಾಯಿ)
ದೆಹಲಿ
22 ಕ್ಯಾರೆಟ್ ಚಿನ್ನ: 55,550 ರೂಪಾಯಿ (-390 ರೂಪಾಯಿ)
24 ಕ್ಯಾರೆಟ್ ಚಿನ್ನ: 60,580 ರೂಪಾಯಿ (-430 ರೂಪಾಯಿ)
ಕೇರಳ
22 ಕ್ಯಾರೆಟ್ ಚಿನ್ನ: 55,400 ರೂಪಾಯಿ (-390 ರೂಪಾಯಿ)
24 ಕ್ಯಾರೆಟ್ ಚಿನ್ನ: 60,430 ರೂಪಾಯಿ (-430 ರೂಪಾಯಿ)
ಮಂಗಳೂರು
22 ಕ್ಯಾರೆಟ್ ಚಿನ್ನ: 55,450 ರೂಪಾಯಿ (-390 ರೂಪಾಯಿ)
24 ಕ್ಯಾರೆಟ್ ಚಿನ್ನ: 60,480 ರೂಪಾಯಿ (-430 ರೂಪಾಯಿ)
ಮೈಸೂರು
22 ಕ್ಯಾರೆಟ್ ಚಿನ್ನ: 55,450 ರೂಪಾಯಿ (-390 ರೂಪಾಯಿ)
24 ಕ್ಯಾರೆಟ್ ಚಿನ್ನ: 60,480 ರೂಪಾಯಿ (-430 ರೂಪಾಯಿ)


Click it and Unblock the Notifications