ಸರಕು ಮತ್ತು ಸೇವಾ ತೆರಿಗೆ (GST) ಈ ವರ್ಷದ ಜೂನ್ ತಿಂಗಳ ಜಿಎಸ್‌ಟಿ ಸಂಗ್ರಹ ನಿಜಕ್ಕೂ ಅಚ್ಚರಿಯಾಗಿದೆ. ಅದೇನೆಂದರೆ ಜೂನ್ ತಿಂಗಳಲ್ಲಿ ಭಾರತದ ಜಿಎಸ್‌ಟಿಯು 1.85 ಲಕ್ಷ ಕೋಟಿಯಷ್ಟು ಸಂಗ್ರಹವಾಗಿದೆ. ಕಳೆದ ತಿಂಗಳುಗಳಿಗೆ ಹೋಲಿಕೆಯನ್ನು ಮಾಡಿದ್ದರೆ ಕಡಿಮೆಯಾಗಿದ್ದರೂ, ವರ್ಷದಿಂದ ವರ್ಷಕ್ಕೆ ಶೇ. 6.2 ರಷ್ಟು ಬೆಳವಣಿಗೆಯ ದಾಖಲೆಯನ್ನು ತಲುಪುತ್ತಿದೆ. 2017 ರಲ್ಲಿ ಜಿಎಸ್‌ಟಿ ವ್ಯವಸ್ಥೆ ಜಾರಿಗೆ ಬಂದ ನಂತರ, ಹಣಕಾಸು ವರ್ಷ 2025 ರ ಒಟ್ಟು ಜಿಎಸ್‌ಟಿ ಸಂಗ್ರಹವು 22.08 ಲಕ್ಷ ಕೋಟಿ ರೂಪಾಯಿಗಳಿಗೆ ತಲುಪಿದೆ. ವರ್ಷದಿಂದ ವರ್ಷಕ್ಕೆ ಹೆಚ್ಚಿನ ಪ್ರಗತಿಯನ್ನು ಕಾಣುತ್ತಿದೆ.

ಜಿಎಸ್‌ಟಿ ಸಂಗ್ರಹದಲ್ಲಿ ಏರಿಳಿತ
ಭಾರತ ಸರ್ಕಾರ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ ಜೂನ್ ತಿಂಗಳಲ್ಲಿ ಜಿಎಸ್‌ಟಿ ಸಂಗ್ರಹವು 1.85 ಲಕ್ಷ ಕೋಟಿ ರೂಪಾಯಿಗಳನ್ನು ತಲುಪಿದೆ. ಹಿಂದಿನ ವರ್ಷಕ್ಕಿಂತ ಶೇ. 6.2ರಷ್ಟು ಹೆಚ್ಚಳವಾಗಿದೆ.ಕಳೆದ ಏಪ್ರಿಲ್ ಮತ್ತು ಮೇ ರ ಹಿಂದಿನ ತಿಂಗಳುಗಳಿಗೆ ಹೋಲಿಸಿದರೆ ಈ ಅಂಕಿ ಅಂಶ ಕಡಿಮೆಯಾಗಿದೆ. ಏಪ್ರಿಲ್ 2025 ರಲ್ಲಿ, ಜಿಎಸ್‌ಟಿ ಸಂಗ್ರಹವು ದಾಖಲೆಯ 2.37 ಲಕ್ಷ ಕೋಟಿ ರೂಪಾಯಿಗಳಿಗೆ ತಲುಪಿತ್ತು, ನಂತರ ಮೇ ತಿಂಗಳಲ್ಲಿ 2.01 ಲಕ್ಷ ಕೋಟಿ ರೂಪಾಯಿಗಳಷ್ಟು ಸಂಗ್ರಹವಾಗಿತ್ತು. ತಿಂಗಳಿನಿಂದ ತಿಂಗಳ ಜಿಎಸ್‌ಟಿ ಬೆಳವಣಿಗೆಯಲ್ಲಿ ಭಾರತ ಇಳಿಕೆ ಕಂಡುಬಂದರೂ, ಹಣಕಾಸು ವರ್ಷ 25 ರ ಒಟ್ಟಾರೆ ವಾರ್ಷಿಕ ಸಂಗ್ರಹವು ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ.
GST ಸಂಗ್ರಹದಲ್ಲಿ ಭಾರತ ಜನವರಿ ತಿಂಗಳಲ್ಲಿ ದಾಖಲೆಯನ್ನು ಬರೆದಿತ್ತು. ಆದರೆ ಫೆಬ್ರವರಿಯಲ್ಲಿ ಇಳಿಕೆ ಕಂಡಿದೆ. 2025ರ ಮೊದಲ ತಿಂಗಳಲ್ಲಿ ಸರಕು ಮತ್ತು ಸೇವಾ ತೆರಿಗೆ (GST) ಸಂಗ್ರಹ ಒಟ್ಟು 1.96 ಲಕ್ಷ ಕೋಟಿ GST ಸಂಗ್ರಹವಾಗಿತ್ತು
2017 ಜುಲೈ ತಿಂಗಳಲ್ಲಿ ಜಾರಿಗೆ ಬಂದ ಜಿಎಸ್‌ಟಿ ವ್ಯವಸ್ಥೆಯು ಹಣಕಾಸು ವರ್ಷ 25 ರಲ್ಲಿ ಸಾರ್ವಕಾಲಿಕ ಗರಿಷ್ಠ ವಾರ್ಷಿಕ ಸಂಗ್ರಹವನ್ನು ಕಂಡಿದೆ. ಒಟ್ಟು ಸಂಗ್ರಹವು 22.08 ಲಕ್ಷ ಕೋಟಿ ರೂಪಾಯಿಗಳವರೆಗೂ ತಲುಪಿದೆ.2021ನೇ ಹಣಕಾಸು ವರ್ಷಕ್ಕೆ ಹೋಲಿಕೆಯನ್ನು ಮಾಡಿದ್ದರೆ 11.37 ಲಕ್ಷ ಕೋಟಿ ರೂಪಾಯಿಗಳ ಸಂಗ್ರಹಕ್ಕೆ ಗಣನೀಯ ಹೆಚ್ಚಳವನ್ನು ಕಂಡಿದೆ.
ಕಳೆದ 2024ರ ಹಣಕಾಸು ವರ್ಷದಲ್ಲಿ20.18 ಲಕ್ಷ ಕೋಟಿಯಷ್ಟು ಹಣವನ್ನು ಸಂಗ್ರಹಿಸಲಾದ 20.18 ಲಕ್ಷ ಕೋಟಿ ರೂಪಾಯಿಗಳಿಗೆ ಹೋಲಿಸಿದರೆ ಇದು ವರ್ಷದಿಂದ ವರ್ಷಕ್ಕೆ ಶೇ. 9.4 ರಷ್ಟು ಹೆಚ್ಚಳವನ್ನು ಕಾಣುತ್ತದೆ. ಕಳೆದ ಐದು ವರ್ಷಗಳಲ್ಲಿ ಜಿಎಸ್‌ಟಿ ಸಂಗ್ರಹವು ದುಪ್ಪಟ್ಟು ಆಗಿದೆ ಎಂದು ಸರ್ಕಾರ ಹೇಳಿದೆ.
ಜಿಎಸ್‌ಟಿ ಜಾರಿಗೆ ಬಂದು ಇಂದಿಗೆ ಎಂಟು ವರ್ಷಗಳು
ಜಿಎಸ್‌ಟಿ ಜಾರಿಗೆ ಬಂದು ಎಂಟು ವರ್ಷಗಳು ಆಗಿದೆ.ಇದು ಸರ್ಕಾರದ ಆದಾಯದ ಮೂಲವಾಗಿದೆ. ಜಿಎಸ್‌ಟಿ ಸಂಗ್ರಹಣೆಯಲ್ಲಿ ಭಾರತ ಸ್ಥಿರ ಬೆಳವಣಿಗೆಯನ್ನು ಕಂಡಿದೆ.ಈ ಪರೋಕ್ಷ ತೆರಿಗೆ ವ್ಯವಸ್ಥೆಯು ತೆರಿಗೆ ಪ್ರಕ್ರಿಯೆಗಳನ್ನು ಸುಗಮಗೊಳಿಸುವ ಮೂಲಕ ಮತ್ತು ಅನುಸರಣೆಯನ್ನು ಹೆಚ್ಚಿಸುವ ಮೂಲಕ ದೇಶದ ಆರ್ಥಿಕತೆಗೆ ಹೆಚ್ಚಿನ ಅನುಕೂಲವಾಗುತ್ತದೆ.
GST ಕಾಯ್ದೆ 2017ರ ನಿಯಮಗಳ ಪ್ರಕಾರ GST ಜಾರಿಯಿಂದಾಗಿ ನಷ್ಟ ಅನುಭವಿಸುವ ರಾಜ್ಯಗಳಿಗೆ ಐದು ವರ್ಷಗಳವರೆಗೆ ಪರಿಹಾರ ನೀಡಲಾಯಿತು. ಇದರ ನಂತರ ಕೇಂದ್ರ ಹಣಕಾಸು ಸಚಿವರ ನೇತೃತ್ವದಲ್ಲಿ GST ಮಂಡಳಿ ರಚನೆಯಾಯಿತು. ಎಲ್ಲಾ ರಾಜ್ಯಗಳ ಹಣಕಾಸು ಸಚಿವರು GST ಮಂಡಳಿಯ ಸದಸ್ಯರಾಗಿದ್ದಾರೆ.
ಒಟ್ಟಾರೆಯಾಗಿ, ಭಾರತದ ಜಿಎಸ್‌ಟಿ ವ್ಯವಸ್ಥೆಯು ಅದರ ವಿತ್ತೀಯ ನೀತಿಯ ಪ್ರಮುಖ ಅಂಶವಾಗಿ ಉಳಿದಿದೆ. ಜಾರಿಗೆ ಬಂದಾಗಿನಿಂದಲೂ ಪ್ರತಿ ವರ್ಷ ಹೊಸ ಏರಿಕೆಯನ್ನು ಕಾಣುತ್ತಲೇ ಇದೆ. ಭಾರತದ ಜಿಎಸ್‌ಟಿ ವ್ಯವಸ್ಥೆಯು ದೇಶದ ಆರ್ಥಿಕತೆಗೆ ಒಂದು ಪ್ರಮುಖ ಆಧಾಯವಾಗಿದೆ. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಆದಾಯವನ್ನು ಒದಗಿಸುತ್ತದೆ. ಆರ್ಥಿಕ ಅಭಿವೃದ್ಧಿಗೆ ಸಹಾಯ ಮಾಡುತ್ತದೆ. ಜಿಎಸ್‌ಟಿ ತೆರಿಗೆ ವ್ಯವಸ್ಥೆಯು ಭಾರತದ ಆರ್ಥಿಕತೆಗೆ ಪುಷ್ಟಿ ನೀಡುತ್ತಿದೆ.


Click it and Unblock the Notifications