ಜಪಾನ್ ಹಿಂದಿಕ್ಕಿದ ಭಾರತ..! ಪ್ರಥಮ ಸ್ಥಾನಕ್ಕೆ ಕೇವಲ ಮೂರೇ ಮೆಟ್ಟಿಲು ಬಾಕಿ. ಹೌದು, ಭಾರತ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಭಾರತ ಹೊರಹೊಮ್ಮಿದೆ.ಜಪಾನ್ ದೇಶವನ್ನು ಹಿಂದಿಕ್ಕಿದೆ ಎಂದು ನೀತಿ ಆಯೋಗದ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ (ಸಿಇಒ) ಬಿ.ವಿ.ಆರ್ ಸುಬ್ರಹ್ಮಣ್ಯಂ ಘೋಷಣೆ ಮಾಡಿದ್ಧಾರೆ. ಹಾಗಿದ್ರೆ, ಆರ್ಥಿಕತೆಯ ಹೆಗ್ಗಳಿಕೆ ಪಡೆದಿರುವ ಟಾಪ್ 10 ದೇಶಗಳು ಯಾವವು..? ಭಾರತ ಎಷ್ಟನೇ ಸ್ಥಾನದಲ್ಲಿ ಮತ್ತು ಎಷ್ಟು ಟ್ರಿಲಿಯನ್ ಡಾಲರ್ ಹೊಂದಿದೆ? ಎಂಬಿತ್ಯಾದಿ ಹೆಚ್ಚಿನ ವಿವರವನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ.
ಅಂತರರಾಷ್ಟ್ರೀಯ ಹಣಕಾಸು ನಿಧಿಯ (IMF) ದತ್ತಾಂಶವನ್ನು ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ನೀತಿ ಆಯೋಗದ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ (ಸಿಇಒ) ಬಿ.ವಿ.ಆರ್ ಸುಬ್ರಹ್ಮಣ್ಯಂ ದೇಶದಲ್ಲಿ ದೊಡ್ಡ ಜಿಡಿಪಿಯಲ್ಲಿ ಅಮೆರಿಕಾ ಮೊದಲ ಸ್ಥಾನವನ್ನು ಗಿಟ್ಟಿಸಿಕೊಂಡಿದೆ. ನಾವು ನಾಲ್ಕನೇ ಅತಿದೊಡ್ಡ ಆರ್ಥಿಕತೆಯಲ್ಲಿ ಇದ್ದವೆ ನಮ್ಮ ಆರ್ಥಿಕತೆ 4 ಟ್ರಿಲಿಯನ್ ಡಾಲರ್ ಇದು ನನ್ನ ದತ್ತಾಂಶವಲ್ಲ. ಇದು ಐಎಂಎಫ್ ದತ್ತಾಂಶ. ಭಾರತ ಇಂದು ಜಪಾನ್‌ಗಿಂತ ದೊಡ್ಡದಾಗಿದೆ ಎಂದು ಬಿವಿಆರ್ ಸುಬ್ರಹ್ಮಣ್ಯಂ ಭಾನುವಾರ ನಡೆದ 10 ನೇ ನೀತಿ ಆಯೋಗ ಆಡಳಿತ ಮಂಡಳಿ ಸಭೆಯಲ್ಲಿ ಮಾಹಿತಿಯನ್ನು ತಿಳಿಸಿದ್ದಾರೆ.

ಭಾರತ ಶೀಘ್ರದಲ್ಲೇ ಜರ್ಮನಿಯನ್ನು ಹಿಂದಕ್ಕೆ ಹಾಕಿ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಬಹುದು ಎಂದು ಸುಬ್ರಹ್ಮಣ್ಯಂ ಭರವಸೆಯನ್ನು ವ್ಯಕ್ತಪಡಿಸಿದ್ಧಾರೆ. ನಾವು ಏನು ಯೋಚಿಸಲಾಗುತ್ತಿದೆ ಎಂಬುದರ ಮೇಲೆ ನಮ್ಮ ಆರ್ಥಿಕತೆ ಅವಲಂಬಿತರಾಗಿದ್ದಾರೆ.ಇನ್ನೂ 2, 2.5 ರಿಂದ 3 ವರ್ಷಗಳ ವಿಷಯವಾಗಿದೆ ನಾವು ಮೂರನೇ ಅತಿದೊಡ್ಡ ಆರ್ಥಿಕತೆಯಾಗುತ್ತೇವೆ ಎಂದು ಹೇಳಿದ್ದಾರೆ.
ಟಾಪ್ 10 ದೇಶಗಳ ಆರ್ಥಿಕತೆಗಳ ಪಟ್ಟಿ (GDP ಪ್ರಕಾರ US$ ನಲ್ಲಿ)
ಮೊದಲನೇ ಸ್ಥಾನದಲ್ಲಿ ಅಮೆರಿಕ
ಜಿಡಿಪಿಯಲ್ಲಿ ಅಮೆರಿಕಾ ಮೊದಲ ಸ್ಥಾನವನ್ನು ಗಿಟ್ಟಿಸಿಕೊಂಡಿದೆ.ಈ ದೇಶದ ಜಿಡಿಪಿಯು 30,507 ಲಕ್ಷ ಕೋಟಿ ಡಾಲರ್ ತಲಾವಾರು ಜಿಡಿಪಿ ಮೌಲ್ಯ 89,105 ಡಾಲರ್ ಗಳನ್ನು ಒಳಗೊಂಡಿದೆ. ಪ್ರಸ್ತುತ ಬೆಲೆಗಳು $30.51 ಟ್ರಿಲಿಯನ್ ಇದೆ.
ಚೀನಾಗೆ ಎರಡನೇ ಸ್ಥಾನ
ಎರಡನೇ ಸ್ಥಾನವನ್ನು ಚೀನಾ ಅಲಂಕರಿಸಿದೆ. ಈ ದೇಶದ ಒಟ್ಟು ಜಿಡಿಪಿ ಮೌಲ್ಯ 19,231 ಲಕ್ಷ ಕೋಟಿ ಡಾಲರ್ ಆಗಿದೆ. ಚೀನಾದ ತಲಾವಾರು ಜಿಡಿಪಿಯು 13,657 ಡಾಲರ್ ಸಹ ಇದೆ. ಪ್ರಸ್ತುತ ಬೆಲೆಗಳು $19.23 ಟ್ರಿಲಿಯನ್ ಇದೆ.
ಮೂರನೇ ಸ್ಥಾನಕ್ಕೆ ಜಿಗಿದ ಜರ್ಮನಿ
ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಲ್ಲಿ ಜರ್ಮನಿ ದೇಶ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.ಜರ್ಮನಿ ದೇಶದ ಒಟ್ಟು ಜಿಡಿಪಿಯು 4,744 ಲಕ್ಷ ಕೋಟಿ ಡಾಲರ್ ಇದೆ. ತಲಾವಾರು ಜಿಡಿಪಿ ಮೌಲ್ಯ. 55,911 ಡಾಲರ್ ಇದೆ.ಪ್ರಸ್ತುತ ಬೆಲೆಗಳು $4.74 ಟ್ರಿಲಿಯನ್‌ನ್ನು ಒಳಗೊಂಡಿದೆ.
ವಿಶ್ವದ 4ನೇ ಅತಿದೊಡ್ಡ ಆರ್ಥಿಕತೆ 'ನಮ್ಮದೇ'
ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯ ಹೆಗ್ಗಳಿಕೆಯನ್ನು ಭಾರತ ತನ್ನ ತಕ್ಕೆಗೆ ತಗೆದುಕೊಂಡಿದೆ. ಐಎಂಎಫ್ ದಾಖಲೆ ಪ್ರಕಾರ ಭಾರತದ ಜಿಡಿಪಿ ಮೌಲ್ಯ 4,187 ಲಕ್ಷ ಕೋಟಿ ಡಾಲರ್ ಒಳಗೊಂಡಿದೆ.ಇನ್ನು ತಲಾವಾರು ಜಿಡಿಪಿಯು 2,934 ಡಾಲರ್ ಇದೆ.ಜಿಡಿಪಿ ಪ್ರಸ್ತುತ ಬೆಲೆಗಳು $4.19 ಟ್ರಿಲಿಯನ್ ಇದೆ.
ಐದನೇ ಅತಿದೊಡ್ಡ ಆರ್ಥಿಕತೆ ಜಪಾನ್
ಜಗತ್ತಿನ ಐದನೇ ಅತಿದೊಡ್ಡ ಆರ್ಥಿಕತೆ ಜಪಾನ್ ದೇಶ ಪಡೆದುಕೊಂಡಿದೆ. ಈ ದೇಶದ ಒಟ್ಟು ಜಿಡಿಪಿ ಮೌಲ್ಯ 4186 ಲಕ್ಷ ಕೋಟಿ ಡಾಲರ್ ಇದೆ.ತಾಲಾವಾರು ಜಿಡಿಪಿ 33,955 ಡಾಲರ್ ಗಳನ್ನು ಒಳಗೊಂಡಿದೆ. ಪ್ರಸ್ತುತ ಬೆಲೆಗಳು $4.19 ಟ್ರಿಲಿಯನ್.
ಆರನೇ ಸ್ಥಾನಕ್ಕೆ ಯುನೈಟೆಡ್ ಕಿಂಗ್ಲೆಂ
ವಿಶ್ವದ ಆರ್ಥಿಕತೆಯ ಪಟ್ಟಿಯಲ್ಲಿ ಆರನೇ ಸ್ಥಾನವನ್ನು ಯುನೈಟೆಡ್ ಕಿಂಗ್ಲೆಂ ಪಡೆದುಕೊಂಡಿದೆ. ಜಿಡಿಪಿ ಮೌಲ್ಯ 3,839 ಲಕ್ಷ ಕೋಟಿ ಡಾಲರ್ ಒಳಗೊಂಡಿದೆ. ತಲಾವಾರು ಜಿಡಿಪಿ ಮೌಲ್ಯ 54,949 ಡಾಲರ್ ಆಗಿದೆ.ಪ್ರಸ್ತುತ ಬೆಲೆಗಳು $3.84 ಟ್ರಿಲಿಯನ್ ಇದೆ.
ಫ್ರಾನ್ಸ್‌ಗೆ ಏಳನೇ ಸ್ಥಾನ
ವಿಶ್ವದ ಆರ್ಥಿಕತೆ ಪಟ್ಟಿಯಲ್ಲಿ ಫ್ರಾನ್ಸ್ ಏಳನೇ ಸ್ಥಾನವನನ್ನು ಪಡೆದುಕೊಂಡಿದೆ. ಜಿಡಿಪಿ 3,211 ಲಕ್ಷ ಕೋಟಿ ಡಾಲರ್ ತಲಾವಾರು ಜಿಡಿಪಿ ಮೌಲ್ಯ 46,792 ಡಾಲರ್ ಆಗಿದೆ ಪ್ರಸ್ತುತ ಬೆಲೆಗಳು $3.21 ಟ್ರಿಲಿಯನ್ ಇದೆ.
8ನೇ ಸ್ಥಾನದಲ್ಲಿ ಇಟಲಿ
ಜಗತ್ತಿನ 8ನೇ ಆರ್ಥಿಕತೆ ಇಟಲಿಯ ಪಾಲಾಗಿದೆ.ಈ ದೇಶದ ಜಿಡಿಪಿಯು 2,422 ಲಕ್ಷ ,ಕೋಟಿ ಡಾಲರ್ ಇದೆ, ತಲಾವಾರು ಜಿಡಿಪಿ ಮೌಲ್ಯ 41,091 ಇದೆ. ಪ್ರಸ್ತುತ ಬೆಲೆಗಳು $2.42 ಟ್ರಿಲಿಯನ್.
ಒಂಬತ್ತೇ ಸ್ಥಾನದಲ್ಲಿ ಕೆನಡಾ
ಅತಿದೊಡ್ಡ ಆರ್ಥಿಕತೆಯ ದತ್ತಾಂಶದಲ್ಲಿ ಕೆನಡಾ ದೇಶ ಜಗತ್ತಿನ ಒಂಬತ್ತೇ ಅತಿದೊಡ್ಡ ಆರ್ಥಿಕತೆಯಾಗಿದೆ. ಒಟ್ಟು ಜಿಡಿಪಿ ಮೌಲ್ಯ 2,225 ಲಕ್ಷ ಕೋಟಿ ಡಾಲರ್. ತಲಾವಾರು ಜಿಡಿಪಿ ಮೌಲ್ಯ 53,558 ಡಾಲರ್ ಇದೆ.ಪ್ರಸ್ತುತ ಬೆಲೆಗಳು $2.23 ಟ್ರಿಲಿಯನ್ ಜಿಡಿಪಿಯನ್ನು ಒಳಗೊಂಡಿದೆ.
ಬ್ರೆಜಿಲ್ ಗೆ ಹತ್ತನೇ ಸ್ಥಾನ
ಆರ್ಥಿಕತೆ ದತ್ತಾಂಶದ ಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿ ಬ್ರೆಜಿಲ್ ದೇಶವಿದೆ. ಈ ದೇಶದ ಜಿಡಿಪಿ ಮೌಲ್ಯ 2,125 ಲಕ್ಷ ಕೋಟಿ ಡಾಲರ್ ಆಗಿದೆ. ತಲಾವಾರು ಜಿಡಿಪಿ ಮೌಲ್ಯ 10,234 ಡಾಲರ್ ಒಳಗೊಂಡಿದೆ. ಪ್ರಸ್ತುತ ಬೆಲೆಗಳು $2.13 ಟ್ರಿಲಿಯನ್.
IMF ವಿಶ್ವ ಆರ್ಥಿಕ ಮುನ್ನೋಟ
ಅಂತರರಾಷ್ಟ್ರೀಯ ಹಣಕಾಸು ನಿಧಿ (IMF), ಏಪ್ರಿಲ್ 22, 2025 ರಂದು ಬಿಡುಗಡೆಯಾದ ತನ್ನ ವಿಶ್ವ ಆರ್ಥಿಕ ದೃಷ್ಟಿಕೋನ (WEO) ವರದಿಯಲ್ಲಿ, 2025 ರಲ್ಲಿ ಭಾರತವು ಜಪಾನ್ ಅನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಹೇಳಿತ್ತು. ಹಾಗೆಯೇ ಭಾತರ ನಾಲ್ಲನೇ ಸ್ಥಾನದಲ್ಲಿ ಇದೆ.
2025-26ರ ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿ $4,287.017 ಶತಕೋಟಿಗೆ ಏರಿಕೆಯಾಗುವ ನಿರೀಕ್ಷೆಯಿದೆ. ಅತಿ ವೇಗವಾಗಿ ಭಾರತ ಆರ್ಥಿಕತೆ ಹೆಚ್ಚಾಗುತ್ತದೆ.
More From GoodReturns

Petrol Price Hike: ಪ್ರೀಮಿಯಂ ಪೆಟ್ರೋಲ್ ದರ ಏರಿಕೆ-ಲೀಟರ್ಗೆ 2 ಹೆಚ್ಚಳ, ಸಾಮಾನ್ಯ ಇಂಧನ ದರ ಸ್ಥಿರ

Gold Rates & Silver Rates Today Live: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಕೆ-ಮಾರುಕಟ್ಟೆಯ ಲೈವ್ ಅಪ್ಡೇಟ್ ತಿಳಿಯಿರಿ

Karnataka Rain: ರಾಜ್ಯದಲ್ಲಿ ಸದ್ಯಕ್ಕೆ ನಿಲ್ಲಲ್ಲ ವರುಣಾರ್ಭಟ; ಎಷ್ಟು ದಿನ ಈ ಮಳೆ ಎಂದು ತಿಳಿಯಿರಿ

Bank Holiday: ನಾಳೆ ಕರ್ನಾಟಕದಲ್ಲಿ ಬ್ಯಾಂಕ್ ತೆರೆದಿರುತ್ತೋ, ಇಲ್ಲವೋ? ಸ್ಪಷ್ಟ ಮಾಹಿತಿ ತಿಳಿಯಿರಿ

Silver Price Today: ಬೆಳ್ಳಿ ದರದಲ್ಲಿ ಇಂದು 5,000 ಕುಸಿತ; ಭಾರತದಲ್ಲಿ ಇಂದಿನ ಬೆಲೆ ತಿಳಿಯಿರಿ

LPG Crisis Bengaluru: ಕೋಳಿ ವ್ಯಾಪಾರಕ್ಕೂ ತಟ್ಟಿದ LPG ಕೊರತೆ ಬಿಸಿ; ಬೆಂಗಳೂರಲ್ಲಿ ಮಾರಾಟ ಭಾರಿ ಕುಸಿತ

Bengaluru: ಬೀದಿ ಬದಿ ವ್ಯಾಪಾರಕ್ಕೆ ಅವಕಾಶವಿಲ್ಲ; ಈ ರಸ್ತೆಯ ವ್ಯಾಪಾರಿಗಳಿಗೆ ದೊಡ್ಡ ಸಂಕಷ್ಟ

Eid-ul-Fitr 2026: ರಂಜಾನ್ ಹಬ್ಬ ಇಂದೋ, ನಾಳೆಯೋ; ಕೇರಳದಲ್ಲಿ ಮಾತ್ರ ಇಂದು ಆಚರಣೆ ಯಾಕೆ?

Oil Price Tension: ಮದ್ಯಪ್ರಾಚ್ಯ ಉದ್ವಿಗ್ನತೆ ನಡುವೆ ತೈಲ ಮಾರುಕಟ್ಟೆ ತಲ್ಲಣ, ಭಾರತಕ್ಕೆ ಸವಾಲು; ಎಚ್ಚರಿಕೆ ಸೂಚನೆ

Petrol Price Hike: ಪ್ರೀಮಿಯಂ ಪೆಟ್ರೋಲ್ ದರ ಏರಿಕೆ-ಲೀಟರ್ಗೆ 2 ಹೆಚ್ಚಳ, ಸಾಮಾನ್ಯ ಇಂಧನ ದರ ಸ್ಥಿರ

Good Friday 2026: ಈ ವರ್ಷ ಗುಡ್ ಫ್ರೈಡೇ ಯಾವಾಗ? ಈಸ್ಟರ್ ದಿನಾಂಕ ಮತ್ತು ಸಂಪೂರ್ಣ ಮಾಹಿತಿ ತಿಳಿಯಿರಿ



Click it and Unblock the Notifications