ಎರಡನೇ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ 5 ಪರ್ಸೆಂಟ್ ಗೂ ಕೆಳಗಿಳಿಯುವ ಅಂದಾಜು

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಜಿಡಿಪಿಯ ಎರಡನೇ ತ್ರೈಮಾಸಿಕ ಫಲಿತಾಂಶ ಇನ್ನೇನು ಬರಲಿದೆ. ವಿವಿಧ ರೇಟಿಂಗ್ ಏಜೆನ್ಸಿಗಳು ಹೇಳುವ ಪ್ರಕಾರ ಆರ್ಥಿಕತೆ ಇನ್ನಷ್ಟು ಕುಸಿಯಬಹುದು. ಆರ್ಥಿಕತೆ ಚೇತರಿಕೆಗಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಲವು ಆರ್ಥಿಕ ಕ್ರಮಗಳನ್ನು ಘೋಷಣೆ ಮಾಡಿದರೂ ಬೇಡಿಕೆ ಮತ್ತು ಅನುಭೋಗದಲ್ಲಿ ಕಳೆದುಕೊಂಡ ವೇಗ ವಾಪಸ್ ಪಡೆಯಲು ಆಗಿಲ್ಲ.

ಎಲ್ಲ ತ್ರೈಮಾಸಿಕಗಳಲ್ಲೂ ಆರ್ಥಿಕತೆಯಲ್ಲಿ ಹಿಂಜರಿತವಾಗಿರುವುದರಿಂದ ಭಾರತದ ಪ್ರಗತಿ ಅಂದಾಜಿನಲ್ಲೇ ಭಾರೀ ಇಳಿಕೆಯಾಗಿದೆ. ಸತತವಾಗಿ ಐದನೇ ತ್ರೈ ಮಾಸಿಕದಲ್ಲೂ ಭಾರತದ ಆರ್ಥಿಕತೆಯಲ್ಲಿ ಇಳಿಕೆ ಕಾಣಿಸಬಹುದು. ಏಪ್ರಿಲ್- ಜೂನ್ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಐದು ಪರ್ಸೆಂಟ್ ಗಿಂತ ಸ್ವಲ್ಪ ಹೆಚ್ಚಿತ್ತು. ಅದು ಆರು ವರ್ಷದಲ್ಲೇ ಕನಿಷ್ಠ ಮಟ್ಟವಾಗಿತ್ತು.

ರೇಟಿಂಗ್ ಏಜೆನ್ಸಿ ಐಸಿಆರ್ ಎ ಪ್ರಕಾರ ಭಾರತದ ಅಭಿವೃದ್ಧಿ ದರ ಇನ್ನಷ್ಟು ಕುಸಿದು, ಎರಡನೇ ತ್ರೈಮಾಸಿಕಕ್ಕೆ 4.7 ಪರ್ಸೆಂಟ್ ತಲುಪಬಹುದು ಎಂದಿದೆ. ದೇಶೀಯ ಬೇಡಿಕೆಯಲ್ಲಿ ಇಳಿಕೆ, ದುರ್ಬಲ ಹೂಡಿಕೆ ಚಟುವಟಿಕೆ ಮತ್ತಿತರ ಕಾರಣಗಳನ್ನು ನೀಡಿದೆ. ಹೀಗೆ ನಾಲ್ಕನೇ ಬಾರಿಗೆ ಅಂದಾಜು ಪರಿಷ್ಕರಣೆ ಮಾಡಿದೆ ಐಸಿಆರ್ ಎ.

 ಭಾರತದ ಜಿಡಿಪಿ 5 ಪರ್ಸೆಂಟ್ ಗೂ ಕೆಳಗಿಳಿಯುವ ಅಂದಾಜು

ಇನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದಲೂ ಅಂದಾಜು ಇಳಿಕೆ ಮಾಡಿದ್ದು, 4.2 ಪರ್ಸೆಂಟ್ ಬೆಳವಣಿಗೆ ದರ ದಾಖಲಿಸಬಹುದು ಎನ್ನಲಾಗಿದೆ. ವಾಹನಗಳ ಮಾರಾಟದಲ್ಲಿ ಇಳಿಕೆ, ಪ್ರಮುಖ ವಲಯಗಳ ಬೆಳವಣಿಗೆ ಮಂದಗತಿ ಮತ್ತು ನಿರ್ಮಾಣ ಹಾಗೂ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಹೂಡಿಕೆ ಇಳಿಕೆ ಕಾರಣಕ್ಕೆ ಹೀಗಾಗಿದೆ ಎಂದಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+