ಅಲ್ಪಾಬೆಟ್ ಗೆ ಸುಂದರ್ ಪಿಚಾಯಿ, ಮೈಕ್ರೋಸಾಫ್ಟ್ ಗೆ ಸತ್ಯಾ ನಾದೆಲ್ಲಾ ನಂತರ, ಅಮೆರಿಕಾದ ಮಾಹಿತಿ ತಂತ್ರಜ್ಞಾನ ದೈತ್ಯ ಸಂಸ್ಥೆ ಮುಖ್ಯಸ್ಥರಾಗಿ ಅರವಿಂದ ಕೃಷ್ಣ ನೇಮಕವಾಗುವ ಮೂಲಕ ಭಾರತೀಯ ಮೂಲದ ಮೂರನೇ ವ್ಯಕ್ತಿಯಾಗಿದ್ದಾರೆ.
ಅಮೆರಿಕಾದ ಮಾಹಿತಿ ತಂತ್ರಜ್ಞಾನ ಸಂಸ್ಥೆ ಐಬಿಎಂನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ (ಸಿಇಒ) ಆಗಿ ಭಾರತ ಮೂಲದ ಅರವಿಂದ ಕೃಷ್ಣ ಅವರನ್ನು ಐಬಿಎಂ ನಿರ್ದೇಶಕ ಮಂಡಳಿ ಗುರುವಾರದ ಸಭೆಯಲ್ಲಿ ಆಯ್ಕೆ ಮಾಡಿದೆ. 57 ವರ್ಷದ ಅರವಿಂದ ಕೃಷ್ಣ ಅವರನ್ನು 2020ರ ಏಪ್ರಿಲ್ 6 ರಿಂದ ಜಾರಿಗೆ ಬರುವಂತೆ ಮಂಡಳಿಯ ನಿರ್ದೇಶಕರನ್ನಾಗಿಯೂ ಚುನಾಯಿಸಲಾಗಿದೆ.
'' ಐಬಿಎಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯಾಗಿ ಆಯ್ಕೆಯಾಗಲು ನಾನು ರೋಮಾಂಚನಗೊಂಡಿದ್ದೇನೆ ಮತ್ತು ವಿನಮ್ರನಾಗಿದ್ದೇನೆ. ಗಿನ್ನಿ ಮತ್ತು ಮಂಡಳಿಯು ನನ್ನ ಮೇಲಿಟ್ಟಿರುವ ವಿಶ್ವಾಸ, ನಂಬಿಕೆಗೆ ಕೃತಜ್ಞತೆ ವ್ಯಕ್ತಪಡಿಸುತ್ತೇನೆ'' ಎಂದು ಅರವಿಂದ ಕೃಷ್ಣ ಹೇಳಿದ್ದಾರೆ.
ಯಾರು ಈ ಅರವಿಂದ ಕೃಷ್ಣ ?
ಅರವಿಂದ ಕೃಷ್ಣ ಪ್ರಸ್ತುತ ಕ್ಲೌಡ್ ಮತ್ತು ಕಾಗ್ನಿಟಿವ್ ಸಾಫ್ಟ್‌ವೇರ್‌ನ ವಿಭಾಗದ ಹಿರಿಯ ಉಪಾಧ್ಯಕ್ಷರಾಗಿದ್ದಾರೆ ಮತ್ತು ರೊಮೆಟ್ಟಿ (62) ನಂತರ ಸಿಇಒ ಆಗಿ ಆಯ್ಕೆಯಾಗುವಲ್ಲಿ ಯಶಸ್ವಿಯಾಗಲಿದ್ದಾರೆ. ಇವರು ಸುಮಾರು 40 ವರ್ಷಗಳ ಸೇವೆಗಳ ನಂತರ ನಿವೃತ್ತರಾಗಲಿದ್ದಾರೆ.
ಅರವಿಂದ ಕೃಷ್ಣ ಓದಿದ್ದು ಎಲ್ಲಿ ?
57 ವರ್ಷದ ಕೃಷ್ಣ 1990 ರಲ್ಲಿ ಐಬಿಎಂಗೆ ಸೇರಿಕೊಂಡರು. ಕಾನ್ಪುರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಪದವಿಪೂರ್ವ ಪದವಿ ಮತ್ತು ಉರ್ಬಾನಾ-ಚಾಂಪೇನ್‌ನಲ್ಲಿ ಇಲಿನಾಯ್ಸ್ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದಾರೆ.
ಐಬಿಎಂನಲ್ಲಿ ಮಹತ್ತರ ಜವಾಬ್ದಾರಿ ನಿರ್ವಹಣೆ
ಅರವಿಂದ ಕೃಷ್ಣ ಅದ್ಬುತ ತಂತ್ರಜ್ಞ, ಕೃತಕ ಬುದ್ಧಿಮತ್ತೆ, ಕ್ಲೌಡ್, ಕ್ವಾಂಟಮ್ ಕಂಪ್ಯೂಟಿಂಗ್ ಮತ್ತು ಬ್ಲಾಕ್ ಚೈನ್‌ನಂತಹ ಪ್ರಮುಖ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಹೇಳಿದ್ದಾರೆ. ಅವರು ಅದ್ಭುತ ಕಾರ್ಯಾಚರಣೆಯ ನಾಯಕರಾಗಿದ್ದು, ಭವಿಷ್ಯದ ವ್ಯವಹಾರ ರೂಪಿಸುವುದರೊಂದಿಗೆ ಇಂದು ಯಶಸ್ಸು ಸಾಧ್ಯವಾಗುತ್ತದೆ ಎಂದು ಐಬಿಎಂ ಹೇಳಿಕೆ ನೀಡಿದೆ.


Click it and Unblock the Notifications