For Quick Alerts
ALLOW NOTIFICATIONS  
For Daily Alerts

ಬೆಂಗಳೂರಿನ ವಿಮಾ ಜಾಗೃತಿ ಸೂಚ್ಯಂಕ ಏರಿಕೆ: ಆದ್ರೂ ಕಡಿಮೆ ವಿಮೆ ಹೊಂದಿರುವ ಮೆಟ್ರೋ ನಗರ!

|

ದೇಶದ ಆರ್ಥಿಕ ಭದ್ರತೆಯನ್ನು ಮರುಖಾತರಿಪಡಿಸುವ ನಿಟ್ಟಿನಲ್ಲಿ, ಮ್ಯಾಕ್ಸ್‌ ಲೈಫ್‌ ಇನ್ಶೂರೆನ್ಸ್‌ ಕಂಪನಿ ಲಿ. ಕಾಂತರ್‌ ನೊಂದಿಗಿನ ಪಾಲುದಾರಿಕೆಯೊಂದಿಗೆ ನಡೆಸಿದ "ಮ್ಯಾಕ್ಸ್‌ ಲೈಫ್‌ ಇಂಡಿಯಾ ಪ್ರೊಟೆಕ್ಷನ್‌ 3.0 ("ಐಪಿಕ್ಯೂ 3.0")" ಮೂರನೇ ಆವೃತ್ತಿಯ ಸರ್ವೆಯ ಫಲಿತಾಂಶವನ್ನು ಬಹಿರಂಗಪಡಿಸಿದೆ.

 

ಸರ್ವೆ ಪ್ರಕಾರ, ಬೆಂಗಳೂರು ನಗರದ ಜನರು ರಕ್ಷಣಾ ಸೂಚ್ಯಂಕದಲ್ಲಿ 6 ಅಂಕ ಹೆಚ್ಚು ಗಳಿಸಿದ್ದು, ಒಟ್ಟು ಸಂಖ್ಯೆ 34 (ಐಪಿಕ್ಯೂ 2.0 ಸರ್ವೆ) ಇಂದ 40 ಅಂಕಗಳಿಗೆ ಏರಿಕೆ ಕಂಡಿದೆ. ಆದರೂ ಕೋವಿಡ್‌-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಜನರು ಈಗಲೂ ಆರ್ಥಿಕವಾಗಿ ಅಭದ್ರತೆಯ ಭಾವನೆ ಎದುರಿಸುತ್ತಿದ್ದಾರೆ ಎಂದು ಸರ್ವೆ ತಿಳಿಸಿದೆ.

 

ಅತ್ಯಂತ ಅನಿರೀಕ್ಷಿತ ಮತ್ತು ಸವಾಲಿನ ಸಮಯದಲ್ಲಿ, ಮ್ಯಾಕ್ಸ್‌ ಲೈಪ್‌ ಐಪಿಕ್ಯೂ 3.0 ನಡೆಸಿದ ಸರ್ವೆಯಲ್ಲಿ ಬೆಂಗಳೂರು ನಿವಾಸಿಗಳ ಮನೋಭಾವದಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬಂದಿವೆ. 2020ರ ಮಾರ್ಚ್‌ನ ಲಾಕ್‌ಡೌನ್‌ ನಂತರ, 2020ರ ಡಿಸೆಂಬರ್‌ನಲ್ಲಿ ಕೋವಿಡ್‌-19 ಲಸಿಕೆ ಘೋಷಣೆಯವರೆಗಿನ ವಿಭಿನ್ನ ಹಂತಗಳ ಸಾಂಕ್ರಾಮಿಕದ ಹಾವಳಿಯಿಂದ ಜನರು ತಮ್ಮ ಜೀವನಶೈಲಿಯನ್ನು ಗಮನಾರ್ಹವಾಗಿ ಬದಲಿಸಿಕೊಂಡಿದ್ದಾರೆ.

ಬೆಂಗಳೂರು ಅತಿ ಕಡಿಮೆ ವಿಮೆ ಹೊಂದಿರುವ ಮೆಟ್ರೋ ನಗರವಾಗಿದೆ!

6 ಮೆಟ್ರೋ ನಗರಗಳು, 9 ಎರಡನೇ ಹಾಗೂ 10 ಮೂರನೇ ಹಂತದ ನಗರಗಳಲ್ಲಿನ 25 ನಗರಗಳಲ್ಲಿ ಸಾಕಷ್ಟು ಸುರಕ್ಷತಾ ಕ್ರಮಗಳೊಂದಿಗೆ ಒಟ್ಟು 4,357 ಜನರ ನೇರ ಸಂದರ್ಶನ ನಡೆಸಲಾಗಿದ್ದು, ಇದು ಕೋವಿಡ್‌-19 ಪರಿಸ್ಥಿತಿಯಲ್ಲಿ ನಡೆಸಿದ ಬಹುದೊಡ್ಡ ಸಮಗ್ರ ಹಣಕಾಸಿನ ಅಧ್ಯಯನವಾಗಿದೆ.

ಈ ಅಧ್ಯಯನದ ಪ್ರಕಾರ, ಸಾಂಕ್ರಾಮಿಕದ ಅವಧಿಯಲ್ಲಿ ಜೀವ ವಿಮಾ ಯೋಜನೆಗಳ ಬಗೆಗಿನ ಅರಿವಿನ ಜ್ಞಾನ ಸೂಚ್ಯಂಕದ 19 ಅಂಕಗಳಷ್ಟು ಹೆಚ್ಚಾಗಿದ್ದು, ಒಟ್ಟು ಅಂಕ 53ಕ್ಕೆ ತಲುಪಿದೆ. ಆದರೆ ಜೀವ ವಿಮಾ ಹೊಂದುವರರ ಪ್ರಮಾಣ ಮಾತ್ರ ಕಳೆದ ವರ್ಷದಲ್ಲಿ ಶೇ.72ರಲ್ಲಿಯೇ ಸ್ಥಿರವಾಗಿ ಉಳಿದಿದೆ. ಇದು ಬೆಂಗಳೂರು ನಗರವನ್ನು ಕನಿಷ್ಠ ವಿಮೆ ಹೊಂದಿರುವ ಮೆಟ್ರೋ ನಗರವನ್ನಾಗಿಸಿದೆ. 80% ಜೀವ ವಿಮಾ ಹೊಂದಿರುವ ಹೈದರಾಬಾದ್ ಮುಂದಿನ ಸ್ಥಾನದಲ್ಲಿದೆ, ರಾಜಧಾನಿ ದೆಹಲಿ, 81% ನಷ್ಟು ವಿಮೆ ಹೊಂದಿದೆ.

ಕೋವಿಡ್ -19 ರ ಹಿನ್ನೆಲೆಯಲ್ಲಿ, ಬೆಂಗಳೂರು ಕಳೆದ ಒಂದು ವರ್ಷದಲ್ಲಿ ಆರ್ಥಿಕ ಭದ್ರತೆ ಮತ್ತು ಸಿದ್ಧತೆ ಬಗ್ಗೆ ಹೆಚ್ಚು ಆಸಕ್ತಿ ಹೊಂದಿತ್ತು. ಕೋವಿಡ್ -19 ಸೋಂಕಿಗೆ ಸಂಬಂಧಿಸಿದ ಹಣಕಾಸಿನ ಆತಂಕಗಳು, ಚಿಕಿತ್ಸೆಯ ವೆಚ್ಚ ಮತ್ತು ದುಡಿಯುವ ಜನರ ಅನುಪಸ್ಥಿತಿಯಲ್ಲಿ ಕುಟುಂಬದ ಆರ್ಥಿಕ ಸ್ವಾಸ್ಥ್ಯವನ್ನು ಭದ್ರಪಡಿಸುವ ಸಾಮರ್ಥ್ಯ ಬೆಂಗಳೂರಿನ ನಾಗರಿಕರಿಗೆ ಬಹುದೊಡ್ಡ ಸವಾಲಾಗಿತ್ತು.

ಇದಲ್ಲದೆ, ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ನಗರ ಬೆಂಗಳೂರಿನ ಜರನಲ್ಲಿ ವಿಮಾ ಜಾಗೃತಿಯ ಮಟ್ಟ ಸಾಕಷ್ಟು ಹೆಚ್ಚಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.23ರಷ್ಟು ಜಾಗೃತಿ ಹೆಚ್ಚಾಗಿದೆ. ಆದರೆ, ಮುಂಬೈ ಮತ್ತು ಕೋಲ್ಕತ್ತಾಗೆ ಮಾತ್ರ ಶೇ.32ರಷ್ಟು ವಿಮಾದಾರರ ಪ್ರಮಾಣ ಹೆಚ್ಚಾಗಿದೆ. ಈ ಎರಡೂ ನಗರಗಳಲ್ಲಿ ಟರ್ಮ್ ವಿಮೆಯಲ್ಲಿ ಶೇ.22ರಷ್ಟು ಪಾಲುದಾರಿಕೆ ಪ್ರದರ್ಶಿಸಿವೆ.

English summary

India Protection Quotient Moves Up During Pre-Covid Times: Max Life Insurance Survey

Max Life Insurance in partnership with KANTAR unveiled findings of the third edition of its flagship survey in the form of 'India Protection Quotient (IPQ) 3.0'.
Story first published: Thursday, March 11, 2021, 17:46 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X