ಭಾರತ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆ ಮಾತ್ರವಲ್ಲ. ಭಾರತದ ಜಿಡಿಪಿ (GDP) ಸಹ ಅತ್ಯಂತ ಬಲಿಷ್ಠ! ಕೃಷಿ ಕ್ಷೇತ್ರವೂ ಅಭಿವೃದ್ಧಿಗೆ ಮರಳಿರುವುದು ರೈತರ ಮೊಗದಲ್ಲಿ ಮಂದಹಾಸ ತಂದಿದೆ. ಹೌದು, ಭಾರತ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಭಾರತ ಹೊರಹೊಮ್ಮಿದೆ ಜಪಾನ್ ದೇಶವನ್ನು ಹಿಂದಿಕ್ಕಿತ್ತು. ಆದರೆ ಇದೀಗ ಜಿಡಿಪಿಯಲ್ಲೂ ಸಹ ಅತ್ಯಂತ ಬಲಿಷ್ಠವಾಗಿದೆ.
ಇಂದು (ಮೇ 30 ) ಬಿಡುಗಡೆ ಮಾಡಿದ ಸರ್ಕಾರ ಅಂಕಿಅಂಶಗಳ ಪ್ರಕಾರ, ದೇಶದ ಆರ್ಥಿಕ ಬೆಳವಣಿಗೆಯಲ್ಲಿ ದೇಶದ ಜಿಡಿಪಿ ದರ ಹೆಚ್ಚಾಗಿದೆ. ಹಣಕಾಸು ವರ್ಷದ ಕೊನೆಯ ತ್ರೈಮಾಸಿಕದಲ್ಲಿ (FY25) GDP ಬೆಳವಣಿಗೆಯು ನಾಲ್ಕು ತ್ರೈಮಾಸಿಕದಲ್ಲಿ ಶೇ 7.4 ರಷ್ಟು ಏರಿಕೆಯಾಗಿದೆ. ಅಲ್ಲದೆ, ವಾರ್ಷಿಕ ಬೆಳವಣಿಗೆ ಶೇ. 6.5 ರಷ್ಟಿದೆ.

ಜನವರಿ-ಮಾರ್ಚ್ ತ್ರೈಮಾಸಿಕ ಶೇ. 7.4ರಷ್ಟು
ಭಾರತದ ಆರ್ಥಿಕತೆಯು 2024-25ರ ಹಣಕಾಸು ವರ್ಷದಲ್ಲಿ ಶೇಕಡಾ 6.5 ರಷ್ಟು ದಾಖಲಿಸಿದೆ ಎಂದು ಅಂಕಿಅಂಶಗಳು ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ (MoSPI) ತಾತ್ಕಾಲಿಕ ಅಂದಾಜು ತಿಳಿಸಿದೆ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಶೇ. 7.4 ರಷ್ಟು ಆರ್ಥಿಕ ಬೆಳವಣಿಗೆಯ ದೊಡ್ಡ ಮಟ್ಟದಲ್ಲಿ ಏರಿಕೆ ಕಂಡಿದೆ.
ಭಾರತದ ಆರ್ಥಿಕತೆ ವೇಗವಾಗಿ ಬೆಳೆಯುತ್ತಿದೆ
ಭಾರತೀಯ ರಿಸರ್ವ್ ಬ್ಯಾಂಕ್ 2024-25ರ ಹಣಕಾಸು ವರ್ಷಕ್ಕೆ ಜಿಡಿಪಿ ಬೆಳವಣಿಗೆಯನ್ನು ಶೇಕಡಾ 6.5 ರಷ್ಟು ಅಂದಾಜಿಸಿತ್ತು. ಆದರೆ 2023-24ರಲ್ಲಿ ಭಾರತದ GDP ಬೆಳವಣಿಗೆ ಶೇಕಡಾ 9.2 ರಷ್ಟು ದಾಖಲಾಗಿದ್ದು,ಈಗ ಬಂದಿರುವಂತಹ ಅಂಕಿ ಅಂಶಗಳನ್ನು ಗಮನಿಸಿದ್ದಾರೆ ಭಾರತ ಆರ್ಥಿಕತೆ ವೇಗವಾಗಿ ಬೆಳೆಯುತ್ತಿದೆ.
ಅಧಿಕೃತ ಅಂಕಿಅಂಶಗಳ ಪ್ರಕಾರ, 2021-22 ಮತ್ತು 2022-23ರ ನಡುವೆ ಆರ್ಥಿಕತೆಯು ಶೇಕಡಾ 8.7 ಮತ್ತು ಶೇಕಡಾ 7.2 ರಷ್ಟು ಬೆಳೆದಿದೆ.
ಚೀನಾವನ್ನು ಹಿಂದಿಕ್ಕಿದ ಭಾರತ
ಸರ್ಕಾರಿ ಅಂಕಿಅಂಶಗಳ ಪ್ರಕಾರ, ಮಾರ್ಚ್ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಚೀನಾಕ್ಕಿಂತ ಹೆಚ್ಚಳವಾಗಿದೆ. ಏಷ್ಯಾದ ಅತಿದೊಡ್ಡ ಆರ್ಥಿಕತೆಯಾಗಿರುವ ಚೀನಾ, 2025 ರ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಶೇಕಡಾ 5.4 ರಷ್ಟು ಬೆಳವಣಿಗೆ ದರವನ್ನು ಮಾತ್ರ ದಾಖಲೆಯನ್ನು ಮಾಡಿದೆ. ಆದರೆ ಭಾರತ ಆರ್ಥಿಕತೆಯಲ್ಲಿ ಶೇಕಡಾ 7.4 ರಷ್ಟು ಹೆಚ್ಚಳವಾಗಿ ಚೀನವನ್ನು ಹಿಂದಕ್ಕೆ ಹಾಕಿದೆ.
ಕೃಷಿ ಕ್ಷೇತ್ರವೂ ಅಭಿವೃದ್ಧಿಗೆ ಮತ್ತೆ ಮರಳಿದೆ
ಕೃಷಿ ಕ್ಷೇತ್ರವೂ ಈ ಬಾರಿಯ Q4 ರಲ್ಲಿ ಶೇ. 5.0 ಬೆಳವಣಿಗೆಗೆ ಮತ್ತೆ ಬಂದು ತಲುಪಿದೆ. ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ 0.8% ರಷ್ಟಿತ್ತು. ಇದೀಗ ಸ್ವಲ್ಲ ಮಟ್ಟದಲ್ಲಿ ಬೆಳವಣಿಗೆಯನ್ನು ಕಂಡಿದೆ.
2025ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ನಿರ್ಮಾಣ ವಲಯವು ಅತ್ಯುನ್ನತ ಬೆಳವಣಿಗೆ ಸಾಧಿಸಿದೆ. ನಿರ್ಮಾಣ ವಲಯದ ವಲಯವು ಶೇ. 10.8ಬೆಳವಣಿಗೆಯ ದರದೊಂದಿಗೆ ಅತ್ಯಂತ ಬಲಿಷ್ಠವಾಗಿ ಉಳಿದಿದೆ. ಸಾರ್ವಜನಿಕ ಆಡಳಿತ, ರಕ್ಷಣೆ ಮತ್ತು ಇತರ ಸೇವೆಗಳು'ವಲಯವು ಶೇ. 8.7 ಬೆಳವಣಿಗೆಯ ದರವನ್ನು ಮತ್ತು ಹಣಕಾಸು, ರಿಯಲ್ ಎಸ್ಟೇಟ್ ಮತ್ತು ವೃತ್ತಿಪರ ಸೇವೆಗಳು'ವಲಯವು ಶೇ. 7.8 ಬೆಳವಣಿಗೆಯನ್ನು ಕಂಡಿವೆ.
ಕಳೆದ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಶೇ. 0.8 ರಷ್ಟು ಬೆಳವಣಿಗೆ ಕಂಡಿದ್ದ ಗಣಿಗಾರಿಕೆ ವಲಯವು ಪ್ರಸಕ್ತ ಹಣಕಾಸು ವರ್ಷದ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಶೇ. 2.5 ರಷ್ಟು ಬೆಳವಣಿಗೆ ಕಂಡಿದೆ. Q4 ಕಾರ್ಯಕ್ಷಮತೆಯು ಭಾರತವನ್ನು ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಗಳಲ್ಲಿ ಒಂದಾಗಿದೆ.
FY25 ರಲ್ಲಿ ಭಾರತದ ಜಿಡಿಪಿಯ ಬೆಳವಣಿಗೆ ದರವು ಶೇ. 6.5 ರಷ್ಟಿತ್ತು, ಇದು FY24 ರಲ್ಲಿ ಬಂದ ಶೇ. 9.2 ಕ್ಕಿಂತ ಕಡಿಮೆಯಾಗಿದೆ. FY24, FY23, FY22 ಮತ್ತು FY21 ರಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರವು ಶೇ.9.2, ಶೇ.7.6, ಶೇ.9.7 ಮತ್ತು ಶೇ. 5.8ರಷ್ಟು ಇತ್ತು.


Click it and Unblock the Notifications