ವಿದೇಶಿ ನೇರ ಹೂಡಿಕೆ ಆಕರ್ಷಣೆಯಲ್ಲಿ ಭಾರತಕ್ಕೆ 9 ನೇ ಸ್ಥಾನ

ನವದೆಹಲಿ: ಕೊರೊನಾವೈರಸ್ ಸಾಂಕ್ರಾಮಿಕ ಭೀತಿಯ ನಡುವೆಯೂ ವಿದೇಶಿ ನೇರ ಹೂಡಿಕೆ ಆಕರ್ಷಿಸುವುದನ್ನು ಭಾರತ ಮುಂದುವರೆಸಲಿದೆ ಎಂದು ವಿಶ್ವಸಂಸ್ಥೆಯ ಟ್ರೇಡ್ ಅಂಡ್ ಡೆವಲಪ್‌ಮೆಂಟ್ ಕಾನ್ಫರೆನ್ಸ್ (UN Conference on Trade and Development) ಹೇಳಿದೆ.

2018-19 ನೇ ಆರ್ಥಿಕ ವರ್ಷದಲ್ಲಿ ಅತಿ ಹೆಚ್ಚು ವಿದೇಶಿ ನೇರ ಹೂಡಿಕೆಯನ್ನು ಪಡೆದ 9 ನೇ ದೇಶವಾಗಿ ಭಾರತ ಹೊರಹೊಮ್ಮಿದ್ದು, ಈ ವೇಳೆಯಲ್ಲಿ ಭಾರತ 51 ಬಿಲಿಯನ್ ಡಾಲರ್ ವಿದೇಶಿ ನೇರ ಹೂಡಿಕೆಯನ್ನು ಪಡೆದಿದೆ ಎಂದು ಟ್ರೇಡ್ ಅಂಡ್ ಡೆವಲಪ್‌ಮೆಂಟ್ ಕಾನ್ಫರೆನ್ಸ್ ವರದಿ ಹೇಳಿದೆ.

2008 ರಲ್ಲಿ ವಿದೇಶಿ ನೇರ ಬಂಡವಾಳ ಆಕರ್ಷಣೆಯಲ್ಲಿ 12 ನೇ ಸ್ಥಾನದಲ್ಲಿತ್ತು. ಈಗ ಏಷ್ಯಾದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಭಾರತ ಬೆಳೆಯುತ್ತಿದೆ. ಒಟ್ಟಾರೆಯಾಗಿ 2005 ರ ನಂತರ ಮೊದಲ ಬಾರಿಗೆ ಜಾಗತಿಕ ವಿದೇಶಿ ನೇರ ಹೂಡಿಕೆ 1 ಟ್ರಿಲಿಯನ್ ಡಾಲರ್‌ಗಿಂತ ಕಡಿಮೆಯಾಗಿದೆ ವಿದೇಶಿ ನೇರ ಹೂಡಿಕೆ 2020 ರಲ್ಲಿ ಶೇಕಡಾ 45 ರಷ್ಟು ಕುಸಿಯುವ ನಿರೀಕ್ಷೆಯಿದೆ ಎಂದು ವರದಿ ಹೇಳುತ್ತದೆ.

ವಿದೇಶಿ ನೇರ ಹೂಡಿಕೆ ಆಕರ್ಷಣೆಯಲ್ಲಿ ಭಾರತಕ್ಕೆ 9 ನೇ ಸ್ಥಾನ

ಭಾರತಕ್ಕೆ ವಿದೇಶಿ ನೇರ ಹೂಡಿಕೆ ದೀರ್ಘಕಾಲದ ಬೆಳವಣಿಗೆಯ ಪ್ರವೃತ್ತಿಯಲ್ಲಿದೆ. ಕೋವಿಡ್ ನಂತರದ ಅವಧಿಯಲ್ಲಿ ಧನಾತ್ಮಕ ಆರ್ಥಿಕ ಬೆಳವಣಿಗೆ ಹೂಡಿಕೆಗಳನ್ನು ಆಕರ್ಷಿಸುವುದನ್ನು ಮುಂದುವರಿಸುತ್ತದೆ ಎಂದು ವರದಿ ತಿಳಿಸಿದೆ. (ಕೃಪೆ-ಮನಿ ಕಂಟ್ರೋಲ್ )

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+