ದೇಶದ ಎಂಟು ಪ್ರಮುಖ ಕೈಗಾರಿಕಾ ವಲಯಗಳ ಬೆಳವಣಿಗೆ ದರ ಹಿಂದಿನ ವರ್ಷ ಡಿಸೆಂಬರ್ನ 2.1 ಪರ್ಸೆಂಟ್ಗೆ ಹೋಲಿಸಿದರೆ ಜನವರಿ ತಿಂಗಳಿನಲ್ಲಿ 2.2 ಪರ್ಸೆಂಟ್ ಏರಿಕೆ ದಾಖಲಿಸಿದೆ. ಕಲ್ಲಿದ್ದಲು, ಸಂಸ್ಕರಣಾ ಘಟಕಗಳು ಮತ್ತು ವಿದ್ಯುತ್ ಉತ್ಪಾದನೆಯಲ್ಲಿ ವಿಸ್ತರಣೆಯಾಗಿದೆ.
ಸರ್ಕಾರ ಶುಕ್ರವಾರ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ 2019ರ ಏಪ್ರಿಲ್ ನಿಂದ 2020ರ ಜನವರಿವರೆಗೆ ಸೂಚ್ಯಂಕದ ಸಂಚಿತ ಬೆಳವಣಿಗೆ 0.6 ಪರ್ಸೆಂಟ್ರಷ್ಟಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ತಿಳಿಸಿದೆ.

ಕಳೆದ ವರ್ಷದ ಜನವರಿಗೆ ಹೋಲಿಸಿದರೆ ಕಲ್ಲಿದ್ದಲು ಉತ್ಪಾದನೆ ಜನವರಿಯಲ್ಲಿ 8.0 ಪರ್ಸೆಂಟ್ರಷ್ಟು ವೃದ್ಧಿಸಿದೆ. ಇದರ ಸಂಚಿತ ಸೂಚ್ಯಂಕ 2019-20ರ ಏಪ್ರಿಲ್ ನಿಂದ ಜನವರಿ ಅವಧಿಯಲ್ಲಿ ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ 2.4 ಪರ್ಸೆಂಟ್ರಷ್ಟು ಕುಸಿದಿದೆ.
ಕಚ್ಚಾ ತೈಲ ಉತ್ಪಾದನೆ ಕಳೆದ ವರ್ಷದ ಜನವರಿಗೆ ಹೋಲಿಸಿದರೆ ಈ ವರ್ಷದ ಜನವರಿಯಲ್ಲಿ 5.3 ಪರ್ಸೆಂಟ್ರಷ್ಟು ಕುಸಿದಿದೆ. ಅದರ ಸಂಚಿತ ಸೂಚ್ಯಂಕ 2019-20ರ ಏಪ್ರಿಲ್ ನಿಂದ ಜನವರಿ ಅವಧಿಯಲ್ಲಿ ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ 6.0 ಪರ್ಸೆಂಟ್ರಷ್ಟು ಕುಸಿದಿದೆ.
ನೈಸರ್ಗಿಕ ಅನಿಲ ಉತ್ಪಾದನೆ ಕಳೆದ ಜನವರಿಯಲ್ಲಿ 9.1 ಪರ್ಸೆಂಟ್ರಷ್ಟು ಕುಸಿದಿದೆ. ಪೆಟ್ರೋಲಿಯಂ ಶುದ್ಧೀಕರಣ ಉತ್ಪಾದನೆ ಕಳೆದ ಜನವರಿಯಲ್ಲಿ 1.9 ಪರ್ಸೆಂಟ್ರಷ್ಟು ವೃದ್ಧಿಸಿದ್ದರೆ, ರಸಗೊಬ್ಬರ ಉತ್ಪಾದನೆ 0.1 ಪರ್ಸೆಂಟ್ರಷ್ಟು ಕುಸಿದಿದೆ.
More From GoodReturns

LPG ಪೂರೈಕೆಯಲ್ಲಿ ಕೊರತೆ; ದೇಶದಲ್ಲಿ ಎಲ್ಪಿಜಿ ಉತ್ಪಾದನೆ 10% ಹೆಚ್ಚಳ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

Bank Holidays: ಮಾರ್ಚ್ನಲ್ಲಿ ಬ್ಯಾಂಕ್ಗಳಿಗೆ 18 ದಿನ ರಜೆ! ಗ್ರಾಹಕರೇ ಇಲ್ಲಿ ಗಮನಿಸಿ

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

Silver Rate: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Silver Rate Today: ಒಂದೇ ದಿನ 10,000 ಇಳಿಕೆ ಕಂಡ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

India Oil: ಇಸ್ರೇಲ್, ಯುಎಸ್ ಮತ್ತು ಇರಾನ್ ನಡುವೆ ವಾರ್! ಭಾರತದ ಕಚ್ಚಾ ತೈಲದ ಮೇಲೆ ಪರಿಣಾಮ ಬೀರಿದ್ದು ಹೇಗೆ?

iPhone EMI: ಐಫೋನ್ EMIನಲ್ಲಿ ತಗೊಳೋದು ಎಷ್ಟು ಸೇಫ್? ಮಾಸಿಕ ಪಾವತಿ ಸುಲಭ, ಆದರೆ ನಿಮ್ಮ ಹಣಕಾಸು ಸುರಕ್ಷಿತವೇ?



Click it and Unblock the Notifications