ಮುಂಬರುವ ಹಣಕಾಸು ವರ್ಷ (2021-22)ರಲ್ಲಿ ಭಾರತದ ಜಿಡಿಪಿ ದರವು 11% ಏರಿಕೆಯಾಗಬಹುದು ಎಂದು ರೇಟಿಂಗ್ ಏಜೆನ್ಸಿ ಕ್ರಿಸಿಲ್ ತಿಳಿಸಿದೆ. ಇದು ಮುಂಬರುವ ಹಣಕಾಸು ವರ್ಷದಲ್ಲಿ ಸರ್ಕಾರದ ಯೋಜನೆಗಳಿಗೆ ಅನುಗುಣವಾಗಿದೆ.
ರೇಟಿಂಗ್ ಏಜೆನ್ಸಿ ಕ್ರಿಸಿಲ್ ಪ್ರಕಾರ, 2021-22ರ ಆರ್ಥಿಕ ವರ್ಷದಲ್ಲಿ ಭಾರತೀಯ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) 11% ರಷ್ಟು ಏರಿಕೆಯಾಗುವ ನಿರೀಕ್ಷೆಯಿದೆ.
ಜಿಡಿಪಿ ಬೆಳವಣಿಗೆಯ ಅಂದಾಜುಗಳನ್ನು ಸರ್ಕಾರವು 2020-21ರ ಆರ್ಥಿಕ ಸಮೀಕ್ಷೆಯಲ್ಲಿ ಬಿಡುಗಡೆ ಮಾಡಿದೆ. ಈ ಹಿಂದೆ, 2020-21ರ ಆರ್ಥಿಕ ವರ್ಷಕ್ಕೆ ಭಾರತದ ಜಿಡಿಪಿ ಶೇಕಡಾ 8 ರಷ್ಟು ಕುಸಿಯಬಹುದು ಎಂದು ಕ್ರಿಸಿಲ್ ಹೇಳಿತ್ತು. ಈಗ ಸಂಸ್ಥೆ 2021-22ರಲ್ಲಿ ಶೇಕಡಾ 11 ರಷ್ಟು ಹೆಚ್ಚಳವನ್ನು ಮುನ್ಸೂಚನೆ ನೀಡಿದೆ.

'' ಮುಂದಿನ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದ ವೇಳೆಗೆ ಆರ್ಥಿಕತೆಯು ಕೊರೊನಾ ಸಾಂಕ್ರಾಮಿಕದ ಮುಂಚಿನ ಮಟ್ಟವನ್ನು ಮುಟ್ಟುವ ಸಾಧ್ಯತೆಯಿದೆ. 2021-22ರ ಅಂತ್ಯದ ವೇಳೆಗೆ, ಜಿಡಿಪಿ 2020 ರ ಹಣಕಾಸು ವರ್ಷ ಮಟ್ಟಕ್ಕಿಂತ ಕೇವಲ 2 ಪ್ರತಿಶತದಷ್ಟು ಹೆಚ್ಚಾಗಲಿದ್ದು, ಇದು ಕೊರೊನಾಗೆ ಮುಂಚಿನ ಮಟ್ಟಕ್ಕಿಂತ 10 ಪ್ರತಿಶತ ಕಡಿಮೆ ಇರುತ್ತದೆ. 2022-23 ಮತ್ತು ಎಫ್‌ವೈ 2024-25ರ ನಡುವೆ ಜಿಡಿಪಿ ಬೆಳವಣಿಗೆಯು ಸರಾಸರಿ 6.3 ಶೇಕಡಾ ಎಂದು ಕ್ರಿಸಿಲ್ ನಿರೀಕ್ಷಿಸುತ್ತದೆ, ಇದು ಸಾಂಕ್ರಾಮಿಕ ರೋಗದ ಹಿಂದಿನ ದಶಕದಲ್ಲಿ ದಾಖಲಾದ ಶೇಕಡಾ 6.7 ಸರಾಸರಿ ಬೆಳವಣಿಗೆಗಿಂತ ಕಡಿಮೆಯಾಗಿದೆ'' ಎಂದು ಕ್ರಿಸಿಲ್ ಮುಖ್ಯ ಅರ್ಥಶಾಸ್ತ್ರಜ್ಞ ಡಿ.ಕೆ. ಜೋಶಿ ಹೇಳಿದ್ದಾರೆ.
ಬೆಳವಣಿಗೆಯ ಹೊರತಾಗಿಯೂ, ಭಾರತೀಯ ಆರ್ಥಿಕತೆಯು ತನ್ನ ಜಿಡಿಪಿಯ ಶೇಕಡಾ 11 ರಷ್ಟು ಶಾಶ್ವತ ನಷ್ಟವನ್ನು ಅನುಭವಿಸುತ್ತದೆ. ಸಣ್ಣ ಉದ್ಯಮಗಳಿಗೆ ದೇಶೀಯ ಬೇಡಿಕೆ ಮತ್ತು ವ್ಯವಹಾರ ಪ್ರತಿಕೂಲವಾಗಿದೆ ಎಂದಿದ್ದಾರೆ.


Click it and Unblock the Notifications