ಹೊಸ ದಾಖಲೆ! LPG ಸಂಪರ್ಕಗಳ ಸಂಖ್ಯೆ ಡಬಲ್ ಹೌದು, 2014 ರಲ್ಲಿ 14.52 ಕೋಟಿ ಇದ್ದ ಗೃಹಬಳಕೆ ಅಡುಗೆ ಅನಿಲ (ಎಲ್‌ಪಿಜಿ) ಸಂಪರ್ಕಗಳ ಸಂಖ್ಯೆ 2024ರ ನವೆಂಬರ್ 1ರ ವೇಳೆಗೆ ಡಬಲ್ ಆಗಿದ್ದು,32.83 ಕೋಟಿಗೆ ತಲುಪಿದೆ ಈ ಮೂಲಕ ಹೊಸ ದಾಖಲೆಯನ್ನು ಸೃಷ್ಟಿ ಮಾಡಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಇಂದು ಬಿಡುಗಡೆ ಮಾಡಿದ ವರದಿಯಲ್ಲಿ ಮಾಹಿತಿ ತಿಳಿಸಿದೆ.
ಪ್ರಧಾನ ಮಂತ್ರಿ ಉಜ್ವಲ ಯೋಜನೆ ಮೂಲಕ ಬಡ ಕುಟುಂಬಗಳಿಗೆ ಸಬ್ಸಿಡಿ ದರದಲ್ಲಿ 10.33 ಕೋಟಿ ಎಲ್‌ಪಿಜಿ ಗ್ಯಾಸ್‌ನ್ನು ನೀಡಲಾಗಿದೆ. ಈ ಯೋಜನೆಯ ಆರಂಭವಾದ ದಿನದಿಂದ ಸುಮಾರು 222 ಕೋಟಿ ಎಲ್‌ಪಿಜಿ ರೀಫಿಲ್ಗಳನ್ನು ಪಿಎಂಯುವೈ ಮನೆಗಳಿಗೆ ಗ್ಯಾಸ್ ಸಂಪರ್ಕವನ್ನು ಕೇಂದ್ರ ಸರ್ಕಾರ ಮನೆ ಬಾಗಿಲಿಗೆ ತಲುಪಿಸಿದೆ.

ಪ್ರತಿದಿನ ಸುಮಾರು 13 ಲಕ್ಷ ರೀಫಿಲ್ಗಳನ್ನು ಪೂರೈಸಲಾಗುತ್ತಿದೆ. ಅಲ್ಲದೆ ಎಲ್ಲಾ ಉಜ್ವಲ ಫಲಾನುಭವಿಗಳಿಗೆ ಪ್ರತಿ ಸಿಲಿಂಡರ್ಗೆ 300 ರೂ.ಗಳ ಸಬ್ಸಿಡಿ ನೀಡಲಾಗುತ್ತಿದೆ ಎಂದು ವರ್ಷಾಂತ್ಯದ ಪರಾಮರ್ಶೆ ವರದಿಯಲ್ಲಿ ಮಾಹಿತಿ ನೀಡಿದ್ದಾರೆ.
ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್ಗಳ ಬಳಕೆಯು 14.2 ಕೆಜಿಗೆ 2019 ರಿಂದ 20ರಲ್ಲಿ ಇದ್ದ 3.01 ರಿಂದ 2023-24ರಲ್ಲಿ 3.95 ಕ್ಕೆ ಏರಿದೆ. ಇನ್ನೂ ಪ್ರಸಕ್ತ ವರ್ಷದಲ್ಲಿ ಗ್ಯಾಸ್ ಬಳಕೆಯು 4.34 ಕ್ಕೆ ತಲುಪಿದೆ. ಸರ್ಕಾರದ ಪ್ರಯತ್ನಗಳಿಂದ ಉಜ್ವಲ ಫಲಾನುಭವಿ ಕುಟುಂಬಗಳಲ್ಲಿ ಎಲ್‌ಪಿಜಿ ಬಳಕೆಯಲ್ಲಿ ಹೆಚ್ಚಳವಾಗಿದೆ ಎಂದು ಮಾಹಿತಿಯನ್ನು ತಿಳಿಸಲಾಗಿದೆ.
ಪಹಲ್ ಯೋಜನೆಯಡಿಯಲ್ಲಿ ಗ್ಯಾಸ್ ಸಿಲಿಂಡರ್ ಸಂಪರ್ಕ ನವೆಂಬರ್ 2024ರ ಹೊತ್ತಿಗೆ, ಸುಮಾರು 30.43 ಕೋಟಿ ಎಲ್‌ಪಿಜಿ ಗ್ರಾಹಕರು ಸರ್ಕಾರದ ಈಗಲೇ ನೋಂದಾಯಿಸಿಕೊಂಡಿದ್ದಾರೆ.ಈ ಯೋಜನೆಯಡಿ ವರ್ಷಕ್ಕೆ 10 ಲಕ್ಷ ರೂ.ಗಿಂತ ಕಡಿಮೆ ಆದಾಯದ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಎಲ್‌ಪಿಜಿ ಸಬ್ಸಿಡಿಗಳನ್ನು ನೇರವಾಗಿ ವರ್ಗಾವಣೆ ಮಾಡಲಾಗಿದೆ.ಇಂದುವರೆಗೂ 1.14 ಕೋಟಿಗೂ ಹೆಚ್ಚು ಗ್ರಾಹಕರು 'ಗಿವ್ ಇಟ್ ಅಪ್' ಅಭಿಯಾನದ ಅಡಿಯಲ್ಲಿ ತಮ್ಮ ಎಲ್‌ಪಿಜಿ ಸಬ್ಸಿಡಿಯನ್ನು ತೆದುಕೊಂಡಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
2014 ಕ್ಕೆ ಹೋಲಿಸಿದರೆ ಎಲ್‌ಪಿಜಿ ವಿತರಕರ ಸಂಖ್ಯೆ ಏರಿಕೆ
2014 ಕ್ಕೆ ಹೋಲಿಸಿದರೆ ಎಲ್‌ಪಿಜಿ ವಿತರಕರ ಸಂಖ್ಯೆ ನವೆಂಬರ್ 1, 2024 ರ ವೇಳೆಗೆ 13,896 ರಿಂದ 25,532 ಕ್ಕೆ ಏರಿಕೆಯಾಗಿದೆ. ಇದು ಗ್ರಾಹಕರಿಗೆ ಅಡುಗೆ ಅನಿಲದ ಲಭ್ಯತೆಯನ್ನು ಹೆಚ್ಚಿಸಿದೆ. ಗ್ರಾಮೀಣ ಪ್ರದೇಶಗಳಿಗೆ ಶೇ.90 ಕ್ಕೂ ಹೆಚ್ಚು ಹೊಸ ವಿತರಕರು ಸೇವೆ ಸಲ್ಲಿಸುತ್ತಿದ್ದಾರೆ. ನೈಸರ್ಗಿಕ ಅನಿಲ ಪೈಪ್ ಲೈನ್ ಉದ್ದವು 2014 ರಲ್ಲಿ ಇದ್ದ 15,340 ಕಿ.ಮೀ.ನಿಂದ 2024 ರಲ್ಲಿ 24,945 ಕಿ.ಮೀ.ಗೆ ಏರಿಕೆಯಾಗಿದೆ ಎಂದು ವರದಿಯಲ್ಲಿ ಮಾಹಿತಿ ತಿಳಿಸಲಾಗಿದೆ.
ಭಾರತದ ಎಲ್ಲಾ ಪ್ರಮುಖ ಬೇಡಿಕೆ ಮತ್ತು ಪೂರೈಕೆ ಕೇಂದ್ರಗಳನ್ನು ಸಂಪರ್ಕಿಸಲಿದೆ.ಕೊಳವೆ ಮಾರ್ಗದ ಅಭಿವೃದ್ಧಿ ಕಾರ್ಯವು ಸುಮಾರು 10,805 ಕಿ.ಮೀ ನೈಸರ್ಗಿಕ ಅನಿಲ ಪ್ರಗತಿಯಲ್ಲಿದೆ.ಈ ಪೈಪ್ ಲೈನ್ ಗಳು ಪೂರ್ಣಗೊಂಡ ನಂತರ, ರಾಷ್ಟ್ರೀಯ ಅನಿಲ ಗ್ರಿಡ್ ಪೂರ್ಣಗೊಳ್ಳಲಿದೆ.ಇದು ಎಲ್ಲಾ ಪ್ರದೇಶಗಳಲ್ಲಿ ನೈಸರ್ಗಿಕ ಅನಿಲದ ಸುಲಭವಾಗಿ ಲಭ್ಯವಾಗುತ್ತಿದೆ ಎಂಬ ಮಾಹಿತಿಯನ್ನು ತಿಳಿಸಲಾಗಿದೆ.
ಹೊಸ ವರ್ಷದ ಮೊದಲ ದಿನದ ಮುಂಜಾನೆಯೇ ಎಲ್ ಪಿಜಿ ಗ್ರಾಹಕರಿಗೆ ಸಿಹಿಸುದ್ದಿ ಸಿಕ್ಕಿದೆ.ತೈಲಕಂಪನಿಗಳು ಎಲ್‌ಪಿಜಿ ಸಿಲಿಂಡರ್ ಬೆಲೆ ಇಳಿಕೆ ಮಾಡಿದೆ. ಈ ಹೊಸ ಪರಿಷ್ಕೃತ ದರಗಳು ಇಂದಿನಿಂದ ಅಂದರೆ ಜನವರಿ 1 ರಿಂದಲೇ ಜಾರಿಗೆ ಬರಲಿದೆ. ಪ್ರತಿ ತಿಂಗಳ ಮೊದಲ ದಿನ ಸಾಮಾನ್ಯವಾಗಿ ತೈಲಕಂಪನಿಗಳು ಅಡುಗೆ ಅನಿಲ ದರ ಪರಿಷ್ಕರಿಸುತ್ತವೆ. ಕೆಲವೊಮ್ಮೆ ಬೆಲೆಗಳು ಏರಿಕೆಯಾದರೆ, ಕೆಲವೊಮ್ಮೆ ಇಳಿಕೆಯಾಗುತ್ತವೆ. ಆದರೆ ಈ ಬಾರಿ ತೈಲ ಕಂಪನಿಗಳು ಬೆಲೆ ಇಳಿಕೆ ಮಾಡಿದೆ. ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ 14.50 ರೂಪಾಯಿ ಇಳಿಕೆಯಾಗಿದೆ. ಆದರೆ ಈ ಬೆಲೆ ಕಡಿತ ವಾಣಿಜ್ಯ ಸಿಲಿಂಡರ್‌ಗಳಿಗೆ ಅಂದರೆ 19Kg LPG ಸಿಲಿಂಡರ್‌ಗಳಿಗೆ ಮಾತ್ರ ಆಗಿದೆ. ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಅಂದರೆ 14 ಕೆಜಿ ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಈ ಪರಿಷ್ಕೃತ ದರ ದೇಶದ ಎಲ್ಲ ಪ್ರದೇಶಕ್ಕೂ ಅನ್ವಯವಾಗಲಿದೆ.


Click it and Unblock the Notifications