For Quick Alerts
ALLOW NOTIFICATIONS  
For Daily Alerts

ಅತ್ಯಂತ ಮೌಲ್ಯಯುತ 9 ಕಂಪೆನಿಗಳ ಮಾರುಕಟ್ಟೆ ಮೌಲ್ಯ 3.96 ಲಕ್ಷ ಕೋಟಿ ರು. ಖಲಾಸ್

|

ಭಾರತದ ಅತ್ಯಂತ ಮೌಲ್ಯಯುತ ಟಾಪ್ 10 ಕಂಪೆನಿಗಳ ಪೈಕಿ 9ರ ಮಾರುಕಟ್ಟೆ ಮೌಲ್ಯದಲ್ಲಿ ಒಟ್ಟಾರೆ 3,96,629.40 ಕೋಟಿ ರುಪಾಯಿ ಕಳೆದ ವಾರ ನಾಲ್ಕು ದಿನದ ಷೇರು ಮಾರುಕಟ್ಟೆ ಟ್ರೇಡಿಂಗ್ ನಲ್ಲಿ ಕೊಚ್ಚಿ ಹೋಗಿದೆ. ಇದರಲ್ಲಿ ಅತಿ ದೊಡ್ಡ ಇಳಿಕೆ ಕಂಡುಬಂದಿದ್ದು ರಿಲಯನ್ಸ್ ಇಂಡಸ್ಟ್ರೀಸ್ ಮಾರುಕಟ್ಟೆ ಮೌಲ್ಯದಲ್ಲಿ.

ಟಾಟಾ ಮೋಟಾರ್ಸ್ ತ್ರೈಮಾಸಿಕ ಲಾಭ ಶೇಕಡಾ 67ರಷ್ಟು ಏರಿಕೆಟಾಟಾ ಮೋಟಾರ್ಸ್ ತ್ರೈಮಾಸಿಕ ಲಾಭ ಶೇಕಡಾ 67ರಷ್ಟು ಏರಿಕೆ

ಕೇಂದ್ರ ಬಜೆಟ್ ಗೆ ಮುಂಚೆಯೇ ಲಾಭದ ನಗದೀಕರಣಕ್ಕೆ ಹೂಡಿಕೆದಾರರು ಮುಂದಾಗಿದ್ದರಿಂದ ಕಳೆದ ವಾರ 30 ಷೇರುಗಳ ಗುಚ್ಛವಾದ ಬಿಎಸ್ ಇ 2592.77 ಪಾಯಿಂಟ್ ಕುಸಿತ ಕಂಡಿತು. ಐಸಿಐಸಿಐ ಬ್ಯಾಂಕ್ ವೊಂದನ್ನು ಹೊರತುಪಡಿಸಿ ಉಳಿದ ಕಂಪೆನಿಗಳ ಮಾರುಕಟ್ಟೆ ಮೌಲ್ಯ ಇಳಿಕೆ ಕಂಡಿತು. ಐಸಿಐಸಿಐ ಬ್ಯಾಂಕ್ ಮಾರುಕಟ್ಟೆ ಮೌಲ್ಯ ಮಾತ್ರ 2,397.43 ಕೋಟಿ ರುಪಾಯಿ ಹೆಚ್ಚಳವಾಯಿತು.

ಈ 9 ಕಂಪೆನಿಗಳ ಮಾರುಕಟ್ಟೆ ಮೌಲ್ಯ 3.96 ಲಕ್ಷ ಕೋಟಿ ರು. ಖಲಾಸ್

ಯಾವ ಕಂಪೆನಿಗೆ ಎಷ್ಟು ಮಾರುಕಟ್ಟೆ ಮೌಲ್ಯ ಕರಗಿತು ಎಂಬ ವಿವರ ಹೀಗಿದೆ:
ರಿಲಯನ್ಸ್ ಇಂಡಸ್ಟ್ರೀಸ್ 1,30,909.45 ಕೋಟಿ ರುಪಾಯಿ

ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ 71,482.92 ಕೋಟಿ ರುಪಾಯಿ

ಇನ್ಫೋಸಿಸ್ 42,936.43 ಕೋಟಿ ರುಪಾಯಿ

ಎಚ್ ಡಿಎಫ್ ಸಿ 38,083 ಕೋಟಿ ರುಪಾಯಿ

ಹಿಂದೂಸ್ತಾನ್ ಯುನಿಲಿವರ್ ಲಿಮಿಟೆಡ್ 34,150.8 ಕೋಟಿ ರುಪಾಯಿ

ಎಚ್ ಡಿಎಫ್ ಸಿ ಬ್ಯಾಂಕ್ 28,894.3 ಕೋಟಿ ರುಪಾಯಿ

ಕೊಟಕ್ ಮಹೀಂದ್ರಾ ಬ್ಯಾಂಕ್ 23,320.13 ಕೋಟಿ ರುಪಾಯಿ

ಬಜಾಜ್ ಫೈನಾನ್ಸ್ 13,949.9 ಕೋಟಿ ರುಪಾಯಿ

ಭಾರ್ತಿ ಏರ್ ಟೆಲ್ 12,902.4 ಕೋಟಿ ರುಪಾಯಿ

English summary

India's Most Valued 9 Out Of 10 Companies Market Value Down By Rs 3.96 Lakh Crore

Last week 9 out 10 India's most valued companies market value down by Rs 3.96 lakh crore.
Story first published: Sunday, January 31, 2021, 11:07 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X