For Quick Alerts
ALLOW NOTIFICATIONS  
For Daily Alerts

ಭಾರತದ ಸಾವಯವ ಆಹಾರ ಉತ್ಪನ್ನಗಳ ರಫ್ತು ಶೇ. 51ರಷ್ಟು ಹೆಚ್ಚಳ: 7,078 ಕೋಟಿ ರೂಪಾಯಿ ಮೌಲ್ಯ

|

ದೇಶದಲ್ಲಿ ಸಾವಯವ ಆಹಾರ ಉತ್ಪನ್ನಗಳ ರಫ್ತು 2020-21ರಲ್ಲಿ ವರ್ಷಕ್ಕೆ ಶೇಕಡಾ 51ರಷ್ಟು ಏರಿಕೆಯಾಗಿ 1 ಬಿಲಿಯನ್ ಅಮೆರಿಕಾ ಡಾಲರ್ ಅಥವಾ 7,078 ಕೋಟಿ ರೂಪಾಯಿ ತಲುಪಿದೆ ಎಂದು ವಾಣಿಜ್ಯ ಸಚಿವಾಲಯ ಮಂಗಳವಾರ ಪ್ರಕಟಣೆಯ್ಲಿ ತಿಳಿಸಿದೆ.

ವಿದೇಶಗಳಿಗೆ ರಫ್ತು ಆದ ಆಹಾರ ಉತ್ಪನ್ನಗಳಲ್ಲಿ ಮುಖ್ಯವಾಗಿ ಆಯಿಲ್ ಕೇಕ್ ಮೀಲ್, ಎಣ್ಣೆಕಾಳುಗಳು, ಹಣ್ಣಿನ ತಿರುಳುಗಳು, ಹಣ್ಣಿನ ರಸ, ಸಿರಿಧಾನ್ಯಗಳು ಮತ್ತು ರಾಗಿ, ಮಸಾಲೆಗಳು, ಕಾಂಡಿಮೆಂಟ್ಸ್, ಚಹಾ, ಒಣ ಹಣ್ಣುಗಳು, ಸಕ್ಕರೆ, ದ್ವಿದಳ ಧಾನ್ಯಗಳು, ಕಾಫಿ ಮತ್ತು ಇತರೆ ಆಹಾರ ಉತ್ಪನ್ನ ಸಂಬಂಧಿತ ತೈಲಗಳು ಸೇರಿವೆ.

ಭಾರತದ ಸಾವಯವ ಆಹಾರ ಉತ್ಪನ್ನಗಳ ರಫ್ತು ಶೇ. 51ರಷ್ಟು ಹೆಚ್ಚಳ

ಭಾರತದ ಸಾವಯವ ಉತ್ಪನ್ನಗಳನ್ನು ಅಮೆರಿಕಾ, ಯುರೋಪಿಯನ್ ಯೂನಿಯನ್, ಕೆನಡಾ, ಗ್ರೇಟ್ ಬ್ರಿಟನ್, ಆಸ್ಟ್ರೇಲಿಯಾ, ಸ್ವಿಟ್ಜರ್ಲೆಂಡ್, ಇಸ್ರೇಲ್ ಮತ್ತು ದಕ್ಷಿಣ ಕೊರಿಯಾ ಸೇರಿದಂತೆ 58 ದೇಶಗಳಿಗೆ ರಫ್ತು ಮಾಡಲಾಗಿದೆ.

ಭಾರತದಲ್ಲಿ ಬೆಳೆಯುವ ಎಲ್ಲಾ ಸಾವಯವ ಆಹಾರ ಉತ್ಪನ್ನಗಳು ಈ ರೀತಿಯಾಗಿ ರಫ್ತು ಮಾಡಲು ಸಾಧ್ಯವಿಲ್ಲ. ಅವು ಸಾವಯವ ಉತ್ಪಾದನೆಗಾಗಿ ರಾಷ್ಟ್ರೀಯ ಕಾರ್ಯಕ್ರಮ (ಎನ್‌ಪಿಒಪಿ) ಯ ಅವಶ್ಯಕತೆಗಳಿಗೆ ಅನುಗುಣವಾಗಿ ಉತ್ಪಾದನೆ, ಸಂಸ್ಕರಣೆ, ಪ್ಯಾಕ್ ಮತ್ತು ಲೇಬಲ್ ಮಾಡಿದರೆ ಮಾತ್ರ ಭಾರತದಿಂದ ರಫ್ತು ಮಾಡಲಾಗುತ್ತದೆ.

ಚಿನ್ನದ ಬೆಲೆ ಮತ್ತಷ್ಟು ಇಳಿಕೆ: 10 ಗ್ರಾಂ ಎಷ್ಟು ರೂಪಾಯಿ ಕಡಿಮೆ?ಚಿನ್ನದ ಬೆಲೆ ಮತ್ತಷ್ಟು ಇಳಿಕೆ: 10 ಗ್ರಾಂ ಎಷ್ಟು ರೂಪಾಯಿ ಕಡಿಮೆ?

ಎನ್‌ಪಿಒಪಿ ಪ್ರಮಾಣೀಕರಿಸಿದ ಉತ್ಪನ್ನಗಳನ್ನು ಯೂರೋಪಿಯನ್ ಯೂನಿಯನ್ ಮತ್ತು ಸ್ವಿಟ್ಜರ್ಲೆಂಡ್ ಪರಿಗಣಿಸುತ್ತವೆ. ಈ ಮೂಲಕ ಸಂಸ್ಕರಣೆಯಿಲ್ಲದ ಉತ್ಪನ್ನಗಳನ್ನು ಹೆಚ್ಚುವರಿ ಪ್ರಮಾಣೀಕರಣದ ಅಗತ್ಯವಿಲ್ಲದೆ ರಫ್ತು ಮಾಡಲು ಅನುವು ಮಾಡುಕೊಡುತ್ತದೆ.

ಇನ್ನು ಭಾರತದ ಸಾವಯವ ಉತ್ಪನ್ನಗಳ ರಫ್ತಿಗೆ ಪರಸ್ಪರ ಮುಕ್ತ ವ್ಯಾಪಾರಕ್ಕಾಗಿ ಮಾನ್ಯತೆ ನೀಡಲು ತೈವಾನ್, ಕೊರಿಯಾ, ಜಪಾನ್, ಆಸ್ಟ್ರೇಲಿಯಾ, ಯುಎಇ, ನ್ಯೂಜಿಲೆಂಡ್‌ಗಳೊಂದಿಗೆ ಒಪ್ಪಂದಕ್ಕಾಗಿ ಮಾತುಕತೆ ನಡೆಯುತ್ತಿದೆ.

English summary

India's Organic Food Products Exports Up 51 Percent In 2020-21

The country's exports of organic food products rose by 51 per cent year-on-year to USD 1 billion (Rs 7,078 crore) in 2020-21, the commerce ministry said on Tuesday.
Story first published: Wednesday, April 28, 2021, 8:27 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X