ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇಕಡಾ 5.59ಕ್ಕೆ ಕುಸಿತ: ಆಹಾರ ಬೆಲೆ ಇಳಿಕೆ

ಜೂನ್‌ನಲ್ಲಿ ಶೇಕಡಾ 6.26ರಷ್ಟಿದ್ದ ಭಾರತದ ಚಿಲ್ಲರೆ ಹಣದುಬ್ಬರವು ಜುಲೈನಲ್ಲಿ ಕುಸಿತಗೊಂಡಿದ್ದು, ಶೇಕಡಾ 5.59ಕ್ಕೆ ಇಳಿಕೆಯಾಗಿದೆ. ಆಹಾರ ಬೆಲೆಗಳು ಕಡಿಮೆಯಾಗುತ್ತಾದ ಹೋದಂತೆ ಜುಲೈನಲ್ಲಿ ಹಣದುಬ್ಬರ ಪ್ರಮಾಣವು ಇಳಿಕೆಯಾಗಿದೆ.

ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ(ಎಂಒಎಸ್‌ಪಿಐ) ಗುರುವಾರ ಬಿಡುಗಡೆ ಮಾಡಿರುವ ಡೇಟಾ ಪ್ರಕಾರ ಕೋವಿಡ್-19 ಎರಡನೇ ತರಂಗದಿಂದಾಗಿರುವ ಅಡಚಣೆಯಿಂದಾಗಿ ಗ್ರಾಹಕ ಬೆಲೆ ಸೂಚ್ಯಂಕದ (ಸಿಪಿಐ) ಹಣದುಬ್ಬರವು ಮೇ(2021) ತಿಂಗಳಿಗೆ ತದ್ದಿರುದ್ಧವಾಗಿ ಇಳಿಕೆಯಾಗಿದೆ.

ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇಕಡಾ 5.59ಕ್ಕೆ ಕುಸಿತ

ಜುಲೈ 2021 ರ ಆಹಾರ ಹಣದುಬ್ಬರವು ಜೂನ್ 2021 ರಲ್ಲಿ ಶೇಕಡಾ 5.15 ರಿಂದ 3.96 ಕ್ಕೆ ಇಳಿದಿದ್ದರಿಂದ ಚಿಲ್ಲರೆ ಹಣದುಬ್ಬರವು ಮುಖ್ಯವಾಗಿ ಆಹಾರ ಬೆಲೆಗಳ ಕುಸಿತದಿಂದಾಗಿ ಕಡಿಮೆಯಾಗಿದೆ. ಇನ್ನು ಮೇ 2021 ಮಟ್ಟಗಳಿಗೆ ಹೋಲಿಸಿದರೆ, ಚಿಲ್ಲರೆ ಹಣದುಬ್ಬರವು ಮೂರು ತಿಂಗಳಲ್ಲಿ ಅತ್ಯಂತ ಕಡಿಮೆ ಮಟ್ಟವನ್ನು ತಲುಪಿದೆ.

ಚಿಲ್ಲರೆ ಹಣದುಬ್ಬರವು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮೇಲಿನ ಅಂಚುಗಿಂತಲೂ ಕೆಳಮಟ್ಟಕ್ಕೆ ತಲುಪಿದೆ. ಏಕೆಂದರೆ ಮಾರ್ಚ್ 2026 ಕ್ಕೆ ಕೊನೆಗೊಳ್ಳುವ ಐದು ವರ್ಷಗಳ ಅವಧಿಗೆ ಎರಡೂ ಕಡೆ ಕೇಂದ್ರ ಬ್ಯಾಂಕ್ ಈ ಹಿಂದೆ ಹೇಳಿದಂತೆ ಇದು ಶೇ. 4 ರಷ್ಟಿರಬೇಕು ಮತ್ತು ಶೇಕಡಾ 2ರ ಅಂಚಿನಲ್ಲಿರಬೇಕು ಎಂದು ಹೇಳಿತ್ತು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+