ಹಣಕಾಸು ಪಾವತಿ ವ್ಯವಸ್ಥೆಯಲ್ಲೇ ದೊಡ್ಡ ಕ್ರಾಂತಿಯನ್ನು ಸೃಷ್ಟಿ ಮಾಡುತ್ತಿರುವ ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ (ಯುಪಿಐ) ಜಾಗತಿಕವಾಗಿ ವೀಸಾವನ್ನು ಮೀರಿ ದಾಖಲೆಯನ್ನು ಸೃಷ್ಟಿಯನ್ನು ಮಾಡಿದೆ.
ಹೌದು, ಭಾರತದ ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ ಯುಪಿಐ (ಏಕೀಕೃತ ಪಾವತಿ ಇಂಟರ್ಫೇಸ್), ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಇತ್ತೀಚಿನ ವರದಿಯ ಪ್ರಕಾರ, ಜಾಗತಿಕವಾಗಿ ವೀಸಾವನ್ನು ಮೀರಿಸಿದೆ. ಚಿಲ್ಲರೆ ಡಿಜಿಟಲ್ ಪಾವತಿಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಯುಪಿಐ ಜಾಗತಿಕವಾಗಿ ವೀಸಾ, ಮಾಸ್ಟರ್ ಕಾರ್ಡ್ ಕಂಪನಿಗಳ ಪಾರುಪತ್ಯ ಅಂತ್ಯವಾಗುವಷ್ಟರ ಮಟ್ಟಿಗೆ ಯುಪಿಐ ಪಾವತಿಗಳು ಹೆಚ್ಚಾಗಿವೆ.

ಐಎಂಎಫ್ ವರದಿಯ ಪ್ರಕಾರ, ಭಾರತದಲ್ಲಿನ ಡಿಜಿಟಲ್ ಪಾವತಿಗಳಲ್ಲಿ ಯುಪಿಐ ಪಾಲು ಶೇ. 85ರಷ್ಟಿದೆ. ಜಾಗತಿಕವಾಗಿ ಇದು ಶೇ. 60ರಷ್ಟಿದೆ. ಯುಪಿಐ ಜಾಗತಿಕ ಮಟ್ಟದಲ್ಲಿ ತನ್ನ ಪ್ರಾಬಲ್ಯವನ್ನು ತೋರಿಸಿದೆ.
ಜೂನ್ ತಿಂಗಳ ವಾಹಿವಾಟುವಿನಲ್ಲಿ ಯುಪಿಐ ಮೂಲಕ 18.39 ಬಿಲಿಯನ್ ವಹಿವಾಟುಗಳು ನಡೆದು, 24 ಲಕ್ಷ ಕೋಟಿ ರೂಪಾಯಿಗಳ ವ್ಯವಹಾರ ನಡೆದಿದೆ ಎಂದು ವರಿಯಾಗಿದೆ. ಪ್ರತಿದಿನ ಸರಾಸರಿ 640 ಮಿಲಿಯನ್‌ಗಿಂತಲೂ ಹೆಚ್ಚು ವಹಿವಾಟುಗಳು ಯುಪಿಐನಲ್ಲಿ ನಡೆಯುತ್ತಿವೆ ಎಂದು ವೀಸಾ ಮುಖ್ಯಸ್ಥರು ಹೇಳಿದ್ದಾರೆ.
ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ವಹಿವಾಟಿನ ಪ್ರಮಾಣವು ಶೇ. 32ರಷ್ಟು ಹೆಚ್ಚಾಗಿದೆ. ಕಳೆದ ವರ್ಷ ಜೂನ್‌ನಲ್ಲಿ 13.88 ಬಿಲಿಯನ್ ವಹಿವಾಟುಗಳನ್ನು ನಡೆಸಿದ್ದೇವೆ. ಐಎಂಎಫ್ ವರದಿಯ ಪ್ರಕಾರ, ಭಾರತದ ಏಕೀಕೃತ ಪಾವತಿ ಇಂಟರ್ಫೇಸ್ (ಯುಪಿಐ) ಪ್ರಸ್ತುತ ವಿಶ್ವದ ನಂಬರ್ ಒನ್ ಪಾವತಿ ವ್ಯವಸ್ಥೆಯಾಗಿದೆ. ಇದು ದೈನಂದಿನ ವಹಿವಾಟುಗಳ ಸಂಖ್ಯೆಯಲ್ಲಿ ವೀಸಾವನ್ನು ಹಿಂದಿಕ್ಕಿದೆ.
ಯುಪಿಐ ಜಾರಿಗೆ ಬಂದು ಒಂಬತ್ತು ವರ್ಷಗಳು ಆಗಿವೆ. ವೀಸಾ ಪ್ರತಿದಿನ 639 ಮಿಲಿಯನ್ ವಹಿವಾಟುಗಳನ್ನು ನಿರ್ವಹಿಸುತ್ತಿದ್ದರೆ ಯುಪಿಐ 640 ಮಿಲಿಯನ್‌ಗಿಂತಲೂ ಹೆಚ್ಚು ವಹಿವಾಟುಗಳನ್ನು ನಿರ್ವಹಿಸುತ್ತದೆ. ಇದು ದೊಡ್ಡ ಸಾಧನೆಯನ್ನು ಎಂದೇ ಹೇಳಬಹುದು.
ಯುಪಿಐ ಎನ್ನುವುದು ಮೊಬೈಲ್ ಅಪ್ಲಿಕೇಶನ್ ಮೂಲಕ ಬ್ಯಾಂಕ್ ಖಾತೆಗಳ ನಡುವೆ ತ್ವರಿತ ಹಣ ವರ್ಗಾವಣೆಯನ್ನು ಸಕ್ರಿಯಗೊಳಿಸುವ ಪಾವತಿ ವ್ಯವಸ್ಥೆಯಾಗಿದೆ. ಇದು ತಕ್ಷಣದ ಪಾವತಿ ಸೇವೆ (IMPS) ಮೂಲಸೌಕರ್ಯವನ್ನು ಆಧರಿಸಿದೆ. ಯುಪಿಐ ಬಹು ಬ್ಯಾಂಕ್ ಖಾತೆಗಳನ್ನು ಒಂದೇ ಅಪ್ಲಿಕೇಶನ್‌ಗೆ ತರುತ್ತದೆ. ಹಣ ವರ್ಗಾವಣೆ, ವ್ಯಾಪಾರಿ ಪಾವತಿಗಳು ಮತ್ತು ಪೀರ್-ಟು-ಪೀರ್ ಪಾವತಿ ವಿನಂತಿಗಳಂತಹ ವೈಶಿಷ್ಟ್ಯಗಳನ್ನುಅಳವಡಿಸಿಕೊಂಡಿದೆ. ಇದು ಡಿಜಿಟಲ್ ವಹಿವಾಟುಗಳನ್ನು ತ್ವರಿತ ಅನುಕೂಲಕರವಾಗಿದೆ.
ಯುಪಿಐ ತಂತ್ರಜ್ಞಾನವು ಭಾರತಕ್ಕೆ ಸೀಮಿತವಾಗಿಲ್ಲ. ಇತ್ತೀಚಿನ ದಿನಗಳಲ್ಲಿ ಹಲವು ರಾಷ್ಟ್ರಗಳು ಯುಪಿಐ ಅನ್ನು ಅಳವಡಿಸಿಕೊಂಡಿವೆ ಎಂದು ಐಎಂಎಫ್ ವರದಿ ಹೇಳಿದೆ.
ಯುಪಿಐ ಕೇವಲ ಭಾರತದಲ್ಲಿ ಮಾತ್ರವಲ್ಲದೆ, ಗಡಿಯಾಚೆಗೂ ತನ್ನ ಅಸ್ತಿತ್ವವನ್ನು ವಿಸ್ತರಿಸುತ್ತಿದೆ. "ಯುಎಇ, ಸಿಂಗಾಪುರ, ಭೂತಾನ್, ನೇಪಾಳ, ಶ್ರೀಲಂಕಾ, ಫ್ರಾನ್ಸ್ ಮತ್ತು ಮಾರಿಷಸ್ ಸೇರಿದಂತೆ ಏಳು ದೇಶಗಳಲ್ಲಿ ಇದು ಈಗಾಗಲೇ ಕಾರ್ಯನಿರ್ವಹಿಸುತ್ತಿದೆ" ಎಂದು ಐಎಂಎಫ್ ವರದಿ ತಿಳಿಸಿದೆ.
ಯುಪಿಐ ಫ್ರಾನ್ಸ್‌ಗೆ ಪ್ರವೇಶಿಸಿರುವುದು ಒಂದು ಮಹತ್ವದ ಮೈಲಿಗಲ್ಲು. ಯುಪಿಐ ಯುರೋಪ್‌ಗೆ ಇಟ್ಟ ಮೊದಲ ಹೆಜ್ಜೆ ಇದಾಗಿದೆ. ಇದರಿಂದಾಗಿ ಫ್ರಾನ್ಸ್‌ನಲ್ಲಿ ವಾಸಿಸುವ ಅಥವಾ ಪ್ರವಾಸ ಮಾಡುವ ಭಾರತೀಯರು ಯಾವುದೇ ತೊಂದರೆಯಿಲ್ಲದೆ ಸುಲಭವಾಗಿ ಪಾವತಿಗಳನ್ನು ಮಾಡಲು ಸಾಧ್ಯವಾಗುತ್ತದೆ ಎಂದು ವರದಿ ಹೇಳಿದೆ.
ಬ್ರಿಕ್ಸ್ ಗುಂಪಿನಲ್ಲಿ ಯುಪಿಐ ಅನ್ನು ಮಾನದಂಡವಾಗಿ ಸೇರಿಸಲು ಭಾರತವು ಪ್ರಯತ್ನಿಸುತ್ತಿದೆ. ಬ್ರಿಕ್ಸ್ ಗುಂಪಿಗೆ ಆರು ಹೊಸ ಸದಸ್ಯ ರಾಷ್ಟ್ರಗಳು ಸೇರ್ಪಡೆಯಾಗಿವೆ. ಯುಪಿಐ ಅನ್ನು ಬ್ರಿಕ್ಸ್‌ನಲ್ಲಿ ಸೇರಿಸಿದರೆ ಹಣ ರವಾನೆ ಸುಧಾರಿಸುತ್ತದೆ, ಆರ್ಥಿಕ ಸೇರ್ಪಡೆಯನ್ನು ಹೆಚ್ಚಿಸುತ್ತದೆ ಮತ್ತು ಜಾಗತಿಕ ಡಿಜಿಟಲ್ ಪಾವತಿ ತಂತ್ರಜ್ಞಾನದಲ್ಲಿ ಭಾರತದ ಸ್ಥಾನವನ್ನು ಬಲಪಡಿಸುತ್ತದೆ ಎಂದು ಐಎಂಎಫ್ ವರದಿ ಹೇಳಿದೆ.
ಎನ್‌ಪಿಸಿಐ ನಿರ್ವಹಿಸುವ ಸಾಮಾನ್ಯ ವೇದಿಕೆಯ ಮೂಲಕ ಯುಪಿಐ ಬ್ಯಾಂಕ್‌ಗಳು ಮತ್ತು ಫಿನ್‌ಟೆಕ್ ಅಪ್ಲಿಕೇಶನ್‌ಗಳನ್ನು ಸಂಪರ್ಕಿಸಿದೆ ಎಂದು ಐಎಂಎಫ್ ವರದಿ ವಿವರಿಸಿದೆ. ಇದರಿಂದಾಗಿ ಬಳಕೆದಾರರಿಗೆ ಹಲವು ಅನುಕೂಲಗಳಿವೆ.


Click it and Unblock the Notifications