ಕೊರೊನಾವೈರಸ್‌ನಿಂದಾಗಿ ವಿಶ್ವವೇ ತತ್ತರಿಸುತ್ತಿರುವಾಗ ಭಾರತ ವಿಶ್ವಕ್ಕೆ ಔಷಧಿಯನ್ನು ಪೂರೈಸುತ್ತಿದೆ. ವೈರಸ್ ಹುಟ್ಟಿದ ಚೀನಾದಲ್ಲಿ ಈಗಲೂ ಔಷಧಿ ತಯಾರಿಕಾ ಕೈಗಾರಿಕೆಗಳು ಮುಚ್ಚಿದ್ದು, ಜಾಗತಿಕ ಮಟ್ಟದಲ್ಲಿ ಭಾರತ ದೊಡ್ಡ ಮಟ್ಟದಲ್ಲಿ ಪರ್ಯಾಯ ಔಷಧಿ ಪೂರೈಕೆದಾರನಾಗಲು ಯೋಜನೆ ನಡೆಸಿದೆ.
ಭಾರತದ ರಾಷ್ಟ್ರೀಯ ಅಗತ್ಯ ಔಷಧಿಗಳ ಪಟ್ಟಿಯಲ್ಲಿ ಮಾಡಲಾದ 373 ಔಷಧಿಗಳಲ್ಲಿ ಸುಮಾರು 200 ಔಷಧಿಗಳನ್ನು ಎಪಿಐಗಳಾಗಿ ಆಮದು ಮಾಡಿಕೊಳ್ಳುತ್ತದೆ. ಅದರಲ್ಲಿ ಹೆಚ್ಚಿನ ಪಾಲು ಚೀನಾದಿಂದಲೇ ತರಿಸಿಕೊಳ್ಳಲಾಗುತ್ತದೆ. ಹೀಗೆ ಚೀನಾ ಭಾರತಕ್ಕೆ ಅಷ್ಟೇ ಅಲ್ಲದೆ ವಿಶ್ವದಲ್ಲಿ ಅತಿ ದೊಡ್ಡ ಔಷಧಿ ಪೂರೈಕೆದಾರ ದೇಶದಲ್ಲಿ ಒಂದಾಗಿದೆ.

ಸದ್ಯ ಚೀನಾದಲ್ಲೂ ಕೊರೊನಾ ಕಾರಣ ಬಹುತೇಕ ಔಷಧಿ ತಯಾರಿಕಾ ಕಂಪನಿಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ. ಹೀಗಾಗಿ ಭಾರತವು ಯೋಜನೆ ನಡೆಸುತ್ತಿದ್ದು ಸ್ಥಳೀಯ ಉತ್ಪಾದನೆಯನ್ನು ಹೆಚ್ಚಿಸಿ ಆ ಮೂಲಕ ಜಾಗತಿಕವಾಗಿ ಪರ್ಯಾಯ ಪೂರೈಕೆದಾರನಾಗುವ ಮೂಲಕ ಆಕ್ರಮಣಾಕಾರಿ ಯೋಜನೆ ಜಾರಿಗೆ ತರಲು ಮುಂದಾಗಿದೆ.
'ಚೀನಾ-ಪ್ಲಸ್ ಒನ್' ಎಂಬ ಯೋಜನೆಯ ಮೂಲಕ ಅಗತ್ಯವಾದ ಔಷಧಿಗಳನ್ನು ಗುರುತಿಸುವುದು, ದೇಶೀಯ ತಯಾರಕರಿಗೆ ಪ್ರೋತ್ಸಾಹವನ್ನು ನೀಡುವ ಮೂಲಕ ಅದರ ಉತ್ಪಾದನೆ ಹೆಚ್ಚಿಸುವುದು. ಆ ಮೂಲಕ ಔಷಧಿ ತಯಾರಕನ್ನು ಪುನರುಜ್ಜೀವನಗೊಳಿಸುವುದರ ಜೊತೆಗೆ ಜಾಗತಿಕ ಮಟ್ಟದಲ್ಲಿ ಬೇಡಿಕೆಯನ್ನು ಪೂರೈಸುವ ಯೋಜನೆಯನ್ನು ಒಳಗೊಂಡಿದೆ.
ಭಾರತವು ಏಷ್ಯಾದಲ್ಲಿಯೇ ಅತಿದೊಡ್ಡ ಜೆನಿರಿಕ್ ಔಷಧಿಗಳ ರಫ್ತುದಾರನಾಗಿದೆ. ಆದರೆ ಕಚ್ಚಾ ವಸ್ತುಗಳ ಕೊರತೆಯಿಂದಾಗಿ ಅದು ಚೀನಾ ಆಮದಿನ ಮೇಲಿನ ಅವಲಂಭನೆಯನ್ನು ಬಹಿರಂಗಪಡಿಸಿತು. ಚೀನಾ ಮೂಲಕ ಕಚ್ಚಾ ವಸ್ತುಗಳನ್ನು ತರಿಸಿಕೊಂಡು ಉತ್ಪಾದನೆ ನಡೆಸುವ ಭಾರತವು ಸ್ವಾವಲಂಬಿಯಾಗುವ ಮೂಲಕ ಜಾಗತಿಕ ಮಾರುಕಟ್ಟೆಯನ್ನು ಆಕ್ರಮಿಸುವ ಯೋಜನೆಯನ್ನು ಒಳಗೊಂಡಿದೆ.
ಭಾರತವು ತನ್ನ ಬೃಹತ್ ಔಷಧಿಗಳಲ್ಲಿ 70 ಪರ್ಸೆಂಟ್‌ನಷ್ಟು ಸಿದ್ಧಪಡಿಸಿದ ಔಷಧಿ ಕೆಲಸ ಮಾಡುವ ರಾಸಾಯನಿಕಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳುತ್ತದೆ. ಇವುಗಳಲ್ಲಿ ಹಲವು ಹುಬೈ ಪ್ರಾಂತ್ಯದಿಂದ ಹುಟ್ಟಿಕೊಂಡಿವೆ. 2018-19ರಲ್ಲಿ ಅಂತಹ ಉತ್ಪನ್ನಗಳ ಒಟ್ಟು 3.56 ಬಿಲಿಯನ್ ಡಾಲರ್ ಆಮದುಗಳಲ್ಲಿ, ಚೀನಾದ ಪಾಲು 2.4 ಬಿಲಿಯನ್ ಆಗಿತ್ತು ಎಂದು ಭಾರತೀಯ ಸಂಸತ್‌ನಿಂದ ಮಾಹಿತಿ ಬಹಿರಂಗಗೊಂಡಿದೆ. ಹೀಗಾಗಿ ಭಾರತವು ತಾನೇ ಸ್ವಾವಲಂಬಿಯಾಗಿ ಕಚ್ಛಾ ವಸ್ತುಗಳನ್ನು ಹೆಚ್ಚಾಗಿ ಉತ್ಪಾದನೆ ಮಾಡುವ ಮೂಲಕ ಚೀನಾದ ಅವಲಂಭನೆ ತಗ್ಗಿಸಿ ಜಾಗತಿಕ ಮಾರುಕಟ್ಟೆಯನ್ನ ಆಕ್ರಮಿಸಿಕೊಳ್ಳಲು ಯೋಜನೆಯನ್ನು ಕಲ್ಪಿಸಿದೆ.


Click it and Unblock the Notifications