ಭಾರತವು ಕೆಲವೇ ವರ್ಷಗಳಲ್ಲಿ ವಿಶ್ವದ ಶ್ರೀಮಂತ ರಾಷ್ಟ್ರಗಳ ಪಟ್ಟಿಗೆ ಸೇರ್ಪಡೆ ಗೊಳ್ಳುವ ಸಾಧ್ಯತೆ ಇದೆ. ಗ್ಲೋಬಲ್ ಬ್ರೋಕರೇಜ್ ಸಂಸ್ಥೆ ಜೆಫರೀಸ್ ಈ ಸಂಸ್ಥೆ ಈ ಮಾಹಿತಿಯನ್ನು ನೀಡಿದೆ. 2027 ರ ವೇಳೆಗೆ, ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಬಹುದು ಎಂದು ಭವಿಷ್ಯ ನುಡಿದಿದೆ.
ಮುಂದಿನ ನಾಲ್ಕು ವರ್ಷಗಳಲ್ಲಿ ಭಾರತದ ಆರ್ಥಿಕತೆಯು 5 ಟ್ರಿಲಿಯನ್ ಡಾಲರ್ ಮೌಲ್ಯದ ಆಗಲಿದೆ. ಮತ್ತು ಭಾರತವು ಜರ್ಮನಿ ಮತ್ತು ಜಪಾನ್ ಹಿಂದೆ ಬಿಟ್ಟು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಗ್ಲೋಬಲ್ ಬ್ರೋಕರೇಜ್ ಸಂಸ್ಥೆ ಜೆಫರೀಸ್ ತಿಳಿಸಿದೆ.

ಭಾರತದ ಆರ್ಥಿಕ ಬೆಳವಣಿಗೆ ದರದಲ್ಲಿ ನಿರಂತರ ಹೆಚ್ಚಳ, ಮಾರುಕಟ್ಟೆ ಬಂಡವಾಳ ಉಲ್ಬಣ, ಸುಧಾರಣೆಗಳು ಮತ್ತು ಬಲವಾದ ಕಾರ್ಪೊರೇಟ್ ಸಂಸ್ಕೃತಿಯತ್ತ ತೆಗೆದುಕೊಳ್ಳುತ್ತಿರುವ ಹೆಜ್ಜೆಗಳಿಂದಾಗಿ 2027 ರ ವೇಳೆಗೆ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಜೆಫರೀಸ್ ತನ್ನ ವರದಿಯಲ್ಲಿ ತಿಳಿಸಿದೆ.
ಭಾರತ ಶೀಘ್ರದಲ್ಲೇ ಜರ್ಮನಿ ಮತ್ತು ಜಪಾನ್‌ನಿಂದ ಮುಂದೆ ಹೋಗಲಿದೆ ಎಂದು ಜೆಫರೀಸ್‌ನ ಇಂಡಿಯಾ ಇಕ್ವಿಟಿ ವಿಶ್ಲೇಷಕ ಮಹೇಶ್ ನಂದೂರ್ಕರ್ ಅವರು ತಿಳಿಸಿದ್ದಾರೆ. ಭಾರತವು ಕಳೆದ 10 ವರ್ಷಗಳಿಂದ 7 ಪ್ರತಿಶತದಷ್ಟು ವಾರ್ಷಿಕ ಬೆಳವಣಿಗೆಯ ದರದಲ್ಲಿ ಬೆಳೆಯುತ್ತಿದೆ. ಭಾರತದ ಆರ್ಥಿಕತೆಯು 3.6 ಟ್ರಿಲಿಯನ್ ಡಾಲರ್ ಆರ್ಥಿಕತೆಯೊಂದಿಗೆ ಎಂಟನೇಯಿಂದ ಐದನೇ ಸ್ಥಾನಕ್ಕೆ ಏರ ಬಹುದು ಎಂದು ತಿಳಿಸಿದೆ.

ಡಾಲರ್ ಲೆಕ್ಕದಲ್ಲಿ, ಕಳೆದ 10 ರಿಂದ 20 ವರ್ಷಗಳಿಂದ ಭಾರತದ ಈಕ್ವಿಟಿ ಮಾರುಕಟ್ಟೆ ನಿರಂತರವಾಗಿ 10-12 ಶೇಕಡಾ ದರದಲ್ಲಿ ಬೆಳೆಯುತ್ತಿದೆ. ಭಾರತವು ಈಗ ವಿಶ್ವದ ಐದನೇ ಅತಿದೊಡ್ಡ ಇಕ್ವಿಟಿ ಮಾರುಕಟ್ಟೆಯಾಗಿದೆ ಮತ್ತು 2030 ರ ವೇಳೆಗೆ ಭಾರತದ ಷೇರು ಮಾರುಕಟ್ಟೆಯ ಮಾರ್ಕೆಟ್ ಕ್ಯಾಪ್ 10 ಟ್ರಿಲಿಯನ್ ಡಾಲರ್ ತಲುಪಬಹುದು ಎಂದು ಜೆಫರೀಸ್ ಊಹಿಸಿದೆ.
ದೇಶದಲ್ಲಿ ಆರ್ಥಿಕ ಅಭಿವೃದ್ಧಿಗೆ ತೆಗೆದುಕೊಂಡ ಹೆಜ್ಜೆಗಳೊಂದಿಗೆ, ಭಾರತವು ವೇಗವಾಗಿ ಬೆಳೆಯುತ್ತಿದೆ ಎಂದು ಜೆಫರೀಸ್‌ನ ಮಹೇಶ್ ನಂದೂರಕರ್ ಅವರು ಹೇಳಿದ್ದಾರೆ. ದೇಶೀಯ ಹೂಡಿಕೆಯ ಹೆಚ್ಚಳದಿಂದಾಗಿ, ಭಾರತೀಯ ಮಾರುಕಟ್ಟೆಯಲ್ಲಿ ಅಸ್ಥಿರತೆ ಕಡಿಮೆಯಾಗಿದೆ ಮತ್ತು ವಿದೇಶಿ ಹೂಡಿಕೆದಾರರಿಂದ ಹೂಡಿಕೆಯು ತುಂಬಾ ಕಡಿಮೆಯಾಗಿದೆ. 167 ಕಂಪನಿಗಳ ಮಾರ್ಕೆಟ್ ಕ್ಯಾಪ್ 5 ಶತಕೋಟಿ ಡಾಲರ್‌ಗಿಂತ ಹೆಚ್ಚಿದೆ, ಇದು ಹೂಡಿಕೆದಾರರಮನ್ನು ಸೆಳಯುವಂತಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸರ್ಕಾರದ ಮೂರನೇ ಅವಧಿಯಲ್ಲಿ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಲಿದೆ ಎಂದು ಹೇಳಿದ್ದರು. ಪ್ರಪಂಚದ ಅನೇಕ ರೇಟಿಂಗ್ ಏಜೆನ್ಸಿಗಳು ಮತ್ತು ಹೂಡಿಕೆ ಬ್ಯಾಂಕರ್‌ಗಳು ಸಹ ಈ ಭವಿಷ್ಯ ನುಡಿದಿವೆ.


Click it and Unblock the Notifications