ಯುಎಸ್ ಉಪಗ್ರಹ ಬ್ರಾಡ್‌ಬ್ಯಾಂಡ್ ಪೂರೈಕೆದಾರ ಹ್ಯೂಸ್ ನೆಟ್‌ವರ್ಕ್ ಸಿಸ್ಟಮ್ಸ್ ತನ್ನ ಭಾರತೀಯ ಕಾರ್ಯಾಚರಣೆಯನ್ನು ಸ್ಥಗಿಸಗೊಳಿಸಬಹುದಾದ ಸಾಧ್ಯತೆ ಇದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.
ಭಾರತಕ್ಕೆ ಬ್ರಾಡ್‌ಬ್ಯಾಂಡ್ ಪೂರೈಕೆದಾರ ಆದ ಹ್ಯೂಸ್ ನೆಟ್‌ವರ್ಕ್ ಕೇಂದ್ರ ಸರ್ಕಾರಕ್ಕೆ ಪಾವತಿಸಬೇಕಾದ ಮೊತ್ತವನ್ನು ಬಾಕಿ ಉಳಿಸಿಕೊಂಡಿರುವುದರಿಂದ ದೇಶದ ಸಾವಿರಾರು ಬ್ಯಾಂಕಿಂಗ್ ಸೇವೆಗಳು ಅಪಾಯಕ್ಕೆ ತುತ್ತಾಗಬಹುದು ಎಂದು ಕಂಪನಿಯ ಪತ್ರವೊಂದರಲ್ಲಿ ಉಲ್ಲೇಖಿತವಾಗಿದೆ ಎಂದು ರಾಯಿಟರ್ಸ್ ಹೇಳಿದೆ.

ಕಳೆದ ವರ್ಷ ತಡವಾಗಿ ಸುಪ್ರೀಂ ಕೋರ್ಟ್ ವೊಡಾಫೋನ್ ಸೇರಿದಂತೆ ಹ್ಯೂಸ್ ನಂತಹ ದೊಡ್ಡ ಸಂಸ್ಥೆಗಳನ್ನು ಒಳಗೊಂಡಂತೆ ಹಲವಾರು ಟೆಲಿಕಾಂ ಕಂಪನಿಗಳಿಗೆ ಸರ್ಕಾರಕ್ಕೆ ನೀಡಬೇಕಿದ್ದ ಶತಕೋಟಿ ಡಾಲರ್‌ಗಳನ್ನು ಪಾವತಿಸಲು ಆದೇಶಿಸಿತ್ತು.
ಹ್ಯೂಸ್ ನೆಟ್‌ವರ್ಕ್ನ ಇಂಡಿಯಾ ಘಟಕವು ದೇಶದ ರಕ್ಷಣಾ, ಶಿಕ್ಷಣ ಮತ್ತು ಬ್ಯಾಂಕಿಂಗ್ ಕ್ಷೇತ್ರಗಳಿಗೆ ಸೇವೆಗಳನ್ನು ಒದಗಿಸುತ್ತದೆ ಮತ್ತು ಫೆಬ್ರವರಿ 20 ರ ಪತ್ರದಲ್ಲಿ ಟೆಲಿಕಾಂ ಸಚಿವಾಲಯಕ್ಕೆ ತಿಳಿಸಿದ್ದು, ಅದು ನೀಡಬೇಕಾಗಿರುವ 600 ಕೋಟಿ ರುಪಾಯಿ ( 84 ಮಿಲಿಯನ್ ಡಾಲರ್) ಪಾವತಿಸಲು ಸಾಧ್ಯವಿಲ್ಲದ ಕಾರಣ ಅದು ದಿವಾಳಿತನವನ್ನು ಎದುರಿಸುತ್ತಿದೆ.
ಒಂದು ವೇಳೆ ಕಂಪನಿ ಮುಚ್ಚಿದರೆ 70,000 ಕ್ಕೂ ಹೆಚ್ಚು ಬ್ಯಾಂಕಿಂಗ್ ಸ್ಥಳಗಳಲ್ಲಿ ಮತ್ತು ಭಾರತೀಯ ನೌಕಾಪಡೆ, ಸೇನೆ ಮತ್ತು ರೈಲ್ವೆಯಲ್ಲಿನ ಅನೇಕ ನಿರ್ಣಾಯಕ ಉಪಗ್ರಹ ಜಾಲಗಳಲ್ಲಿನ ಸಂಪರ್ಕವನ್ನು ಅಡ್ಡಿಪಡಿಸುತ್ತದೆ ಎಂದು ಹ್ಯೂಸ್ ಭಾರತದ ಅಧ್ಯಕ್ಷ ಪಾರ್ಥೊ ಬ್ಯಾನರ್ಜಿ ಪತ್ರದಲ್ಲಿ ತಿಳಿಸಿದ್ದಾರೆ ಎಂದು ರಾಯಿಟರ್ಸ್ ಹೇಳಿದೆ


Click it and Unblock the Notifications