ಭಾರತೀಯ ರಿಸರ್ವ್ ಬ್ಯಾಂಕ್ (RBI) ರಜಾ ದಿನಗಳ ಪಟ್ಟಿಯ ಪ್ರಕಾರ, ದೇಶದ ಬ್ಯಾಂಕ್‌ಗಳು ಇದೇ ಮಾರ್ಚ್ 07 ಮಂಗಳವಾರ ಹಾಗೂ ಮಾರ್ಚ್ 08 ರಂದು ಬುಧವಾರ ಬ್ಯಾಂಕ್‌ಗಳು ಬಂದ್ ಆಗಲಿವೆ. ಮಾರ್ಚ್ ತಿಂಗಳ ರಜೆ ಪಟ್ಟಿ ಇಲ್ಲಿದೆ.
ನವದೆಹಲಿ, ಮಾರ್ಚ್ 05: ಭಾರತೀಯ ರಿಸರ್ವ್ ಬ್ಯಾಂಕ್ (RBI) ರಜಾ ದಿನಗಳ ಪಟ್ಟಿಯ ಪ್ರಕಾರ, ದೇಶದ ಬ್ಯಾಂಕ್‌ಗಳು ಇದೇ ಮಾರ್ಚ್ 07 ಮಂಗಳವಾರ ಹಾಗೂ ಮಾರ್ಚ್ 08 ರಂದು ಬುಧವಾರ ಬ್ಯಾಂಕ್‌ಗಳು ಬಂದ್ ಆಗಲಿವೆ.
ಹೌದು, ಮಾರ್ಚ್ ಹೋಳಿ ಹಬ್ಬ ಇರುವ ಹಿನ್ನೆಲೆಯಲ್ಲಿ ಬುಧವಾರ ಎಲ್ಲೆಡೆ ಹಾಗೂ ಕೆಲವು ರಾಜ್ಯಗಳಲ್ಲಿ ಮಾರ್ಚ್ 7ರಂದು ಹೋಲಿಕಾ ದಹನ್ ಪ್ರಯುಕ್ತ ಬ್ಯಾಂಕ್ ಸೇವೆ ಇರುವುದಿಲ್ಲ. ಇದರ ಜೊತೆಗೆ ಮಾರ್ಚ್‌ತಿಂಗಳಲ್ಲಿ ಎಷ್ಟು ದಿನ ಬ್ಯಾಂಕ್‌ಗಳು ರಜೆ ಇರಲಿವೆ ಎಂಬ ಮಾಹಿತಿ ಇಲ್ಲಿ ತಿಳಿಯಿರಿ.

ಇದಲ್ಲದೇ ಮಾರ್ಚ್ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರಗಳು ಅಲ್ಲದೇ ಭಾನುವಾರಗಳು ಸೇರಿದಂತೆ 12 ದಿನಗಳವರೆಗೆ ಬ್ಯಾಂಕ್ ಮುಚ್ಚಿರುತ್ತದೆ. ಕೆಲವು ರಜಾದಿನಗಳು ರಾಜ್ಯ-ನಿರ್ದಿಷ್ಟವಾಗಿರುತ್ತವೆ ಮತ್ತು ರಾಷ್ಟ್ರೀಯ ರಜಾದಿನಗಳಲ್ಲಿ, ದೇಶದಾದ್ಯಂತ ಬ್ಯಾಂಕುಗಳು ಬಂದ್ ಆಗಲಿವೆ ಎಂದು ಆರ್‌ಬಿಐ ತನ್ನ ರಜಾದಿನಗಳ ಪಟ್ಟಿಯಲ್ಲಿ ತಿಳಿಸಿದೆ.
ಮಾರ್ಚ್-2023 ಬ್ಯಾಂಕ್ ರಜಾದಿನಗಳ ಪಟ್ಟಿ ವಿವರ
* 2023 ಮಾರ್ಚ್ 03 - ಐಜ್ವಾಲ್‌ನಲ್ಲಿ ಚಾಪ್ಚಾರ್ ಕೂಟ್
* 2023 ಮಾರ್ಚ್ 05 - ಭಾನುವಾರದ ರಜೆ
* 2023 ಮಾರ್ಚ್ 07 - ವಿವಿಧ ನಗರಗಳಲ್ಲಿ ಹೋಳಿ/ಹೋಲಿಕಾ ದಹನ್/ಧುಲೆಂಡಿ/ಡೋಲ್ ಜಾತ್ರೆ/ಯೋಸಾಂಗ್
* 2023 ಮಾರ್ಚ್ 08 - ಬಹು ನಗರಗಳಲ್ಲಿ ಧುಲೇಟಿ/ಡೋಲ್ ಜಾತ್ರೆ/ಹೋಳಿ
* 2023 ಮಾರ್ಚ್ 09 - ಪಾಟ್ನಾದಲ್ಲಿ ಹೋಳಿ
* 2023 ಮಾರ್ಚ್ 11 - ಎರಡನೇ ಶನಿವಾರದ ರಜೆ
* 2023 ಮಾರ್ಚ್ 12 - ಭಾನುವಾರದ ರಜೆ
* 2023 ಮಾರ್ಚ್ 19 - ಭಾನುವಾರದ ರಜೆ
* 2023 ಮಾರ್ಚ್ 22 - ಗುಡಿ ಪಾಡ್ವಾ/ಯುಗಾದಿ/ಬಿಹಾರ ದಿನ/ಮೊದಲ ನವರಾತ್ರಿ/ತೆಲುಗು ಹೊಸ ವರ್ಷ ಪ್ರಯುಕ್ತ ಬಂದ್
* 2023 ಮಾರ್ಚ್ 25 - ನಾಲ್ಕನೇ ಶನಿವಾರ
* 2023 ಮಾರ್ಚ್ 26 - ಭಾನುವಾರದ ರಜೆ
* 2023 ಮಾರ್ಚ್ 30 - ಬಹು ನಗರಗಳಲ್ಲಿ ರಾಮ ನವಮಿ

ಮಾರ್ಚ್ 2023: ಸಾಪ್ತಾಹಿಕ ರಜೆ ಪಟ್ಟಿ
* 2023 ಮಾರ್ಚ್ 5 - ಭಾನುವಾರ
* 2023 ಮಾರ್ಚ್ 11- ಶನಿವಾರ
* 2023 ಮಾರ್ಚ್ 12 - ಭಾನುವಾರ
* 2023 ಮಾರ್ಚ್ 19 - ಭಾನುವಾರ
* 2023 ಮಾರ್ಚ್ 25 - ಶನಿವಾರ
* 2023 ಮಾರ್ಚ್ 26 - ಭಾನುವಾರ


Click it and Unblock the Notifications