ನ್ಯೂಯಾರ್ಕ್,ಫೆಬ್ರವರಿ.21: ವಿಶ್ವಸಂಸ್ಥೆಯ ಬಂಡವಾಳ ಅಭಿವೃದ್ಧಿ ನಿಧಿಗೆ ಭಾರತೀಯ ಮೂಲದ ಪ್ರೀತಿ ಸಿನ್ಹಾರನ್ನು ಕಾರ್ಯಕಾರಿ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಮಹಿಳೆಯರು ಮತ್ತು ಯುವಕರಿಗೆ ಸಣ್ಣ, ಮಧ್ಯಮ ವರ್ಗದ ಉದ್ಯಮಕ್ಕೆ ಸೂಕ್ಷ್ಮ ಹಣಕಾಸು ನೆರವು ನೀಡುವ ನಿಟ್ಟಿನಲ್ಲಿ ಗಮನ ಹರಿಸುವುದಕ್ಕೆ ಆದ್ಯತೆ ನೀಡಲಾಗುತ್ತಿದೆ.
ಸೋಮವಾರದಿಂದ ವಿಶ್ವಸಂಸ್ಥೆಯ ಬಂಡವಾಳ ಅಭಿವೃದ್ಧಿ ನಿಧಿಯ ಮುಖ್ಯ ಕಾರ್ಯದರ್ಶಿಯಾಗಿ ಪ್ರೀತಿ ಸಿನ್ಹಾ ಕಾರ್ಯಾರಂಭ ಮಾಡಲಿದ್ದಾರೆ. ಕಳೆದ 1966ರಲ್ಲಿ ಸ್ಥಾಪನೆಯಾದ ಸಂಸ್ಥೆಯ ಪ್ರಧಾನ ಕಚೇರಿ ನ್ಯೂಯಾರ್ಕ್ ನಲ್ಲಿದೆ.
ಜಗತ್ತಿನಲ್ಲಿ ಅತಿ ಕಡಿಮೆ ಆರ್ಥಿಕ ಬೆಳವಣಿಗೆ ಹೊಂದಿರುವ ರಾಷ್ಟ್ರಗಳಲ್ಲಿನ ಸಾರ್ವಜನಿಕ ಮತ್ತು ಖಾಸಗಿ ವಲಯಕ್ಕೆ ಆರ್ಥಿಕ ನೆರವು ನೀಡುವ ಉದ್ದೇಶವನ್ನು ಸಂಸ್ಥೆಯು ಹೊಂದಿದೆ. ಬಂಡವಾಳ ಅಭಿವೃದ್ಧಿ ನಿಧಿಯ ಮುಖ್ಯಕಾರ್ಯದರ್ಶಿಯಾಗಿರುವ ಪ್ರೀತಿ ಸಿನ್ಹಾ ಅವರು, ವಿಶ್ವದ ಗಡಿನಾಡು ಮತ್ತು ಪೂರ್ವ-ಗಡಿನಾಡಿನಲ್ಲಿ ಮಹಿಳೆಯರು, ಯುವಕರು, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳ ಸುಸ್ಥಿರ ಅಭಿವೃದ್ಧಿಗೆ ಅಗತ್ಯವಿರುವ ಹಣಕಾಸು ನೆರವು ನೀಡುವ ನಿಟ್ಟಿನಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ತಮ್ಮ ಗುರಿಯ ಬಗ್ಗೆ ಪ್ರೀತಿ ಸಿನ್ಹಾ ಮಾತು:
ವಿಶ್ವದಲ್ಲಿ ಅತಿ ಕಡಿಮೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪಾಲಿಗೆ ಮುಂಬರುವ 2021ನೇ ವರ್ಷವು ಆರ್ಥಿಕ ವಲಯದ ಬಂಡವಾಳ ಹೂಡಿಕೆಯಲ್ಲಿ ತೊಡಗಿಸಿಕೊಳ್ಳುವ ಹೊಸ ಯುಗವನ್ನು ಆರಂಭಿಸುವಂತಿರಬೇಕು. ಈ ನಿಟ್ಟಿನಲ್ಲಿ ಅಗತ್ಯವಿರುವ ಹಣಕಾಸು ನೆರವು ನೀಡುವ ಮೂಲಕ ದೇಶಗಳಲ್ಲಿರುವ ಸಾರ್ವಜನಿಕ ಮತ್ತು ಖಾಸಗಿ ಉದ್ಯಮಗಳ ಬಲವರ್ಧನೆಗೆ ಶ್ರಮಿಸುವುದಾಗಿದೆ ಎಂದು ಹೇಳಿದ್ದಾರೆ.
ವಿಶ್ವಸಂಸ್ಥೆಯಲ್ಲಿ 30 ವರ್ಷಗಳ ವೃತ್ತಿಜೀವನವನ್ನು ಪೂರ್ಣಗೊಳಿಸಿದ ನಂತರ ಫೆಬ್ರವರಿಯಲ್ಲಿ ನಿವೃತ್ತರಾದ ಜುಡಿತ್ ಕಾರ್ಲ್ ಅವರ ನಂತರ ಪ್ರೀತಿ ಸಿನ್ಹಾ ಆ ಸ್ಥಾನದಲ್ಲಿ ಯಶಸ್ವಿಯಾಗಲಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.


Click it and Unblock the Notifications