ನವದೆಹಲಿ, ನ. 24: ಜಾಗತಿಕ ಆರ್ಥಿಕ ಹಿಂಜರಿತದ ನಡುವೆ ಭಾರತದ ಜಿಡಿಪಿ ಬೆಳವಣಿಗೆ ಮಂದಗತಿಯಲ್ಲಿ ಸಾಗಲಿದೆ ಎಂದು ಹಲವು ವಿಶ್ಲೇಷಣಾ ಸಂಸ್ಥೆಗಳು ಅಂದಾಜು ಮಾಡಿವೆ. ಈಗ ಮೂಡೀಸ್ ಸಂಸ್ಥೆಯೂ ಈ ಅಭಿಪ್ರಾಯವನ್ನು ಅನುಮೋದಿಸಿದೆ. ಭಾರತದ ಆರ್ಥಿಕತೆ ಮುಂದಿನ ದಿನಗಳಲ್ಲಿ ಮಂದಗತಿಯಲ್ಲಿ ಸಾಗಲಿದೆ ಎಂದು ಮೂಡೀಸ್ ಅನಾಲಿಟಿಕ್ಸ್ ಸಂಸ್ಥೆ ಹೇಳಿದೆ.
'ಎಪಿಎಸಿ ಔಟ್‌ಲುಕ್: ಎ ಕಮಿಂಗ್ ಡೌನ್‌ಶಿಫ್ಟ್' ಎಂಬ ವರದಿ ಬಿಡುಗಡೆ ಮಾಡಿರುವ ಮೂಡೀಸ್, 2021ರಲ್ಲಿ ಶೇ. 8.1ರಷ್ಟು ಬೆಳವಣಿಗೆ ಕಂಡಿದ್ದ ಭಾರತದ ಆರ್ಥಿಕತೆ, 2022ರ ಕ್ಯಾಲೆಂಡರ್ ವರ್ಷದಲ್ಲಿ ಶೇ. 8ರಷ್ಟು ವೃದ್ಧಿ ಕಾಣಬಹುದು. 2023ರಲ್ಲಿ ಇದು ಶೇ. 5ಕ್ಕೆ ಇಳಿಯಬಹುದು ಎಂದು ಅಭಿಪ್ರಾಯಪಟ್ಟಿದೆ.
ಹಿನ್ನಡೆಗೆ ಕಾರಣಗಳು
ಅಮೆರಿಕ, ಯೂರೋಪ್‌ನಲ್ಲಿರುವಂತೆ ಏಷ್ಯಾ ಪೆಸಿಫಿಕ್ ಪ್ರದೇಶದಲ್ಲಿ ಆರ್ಥಿಕ ಹಿಂಜರಿತದ ಸಾಧ್ಯತೆ ಇಲ್ಲವಾದರೂ ಇಲ್ಲಿ ಹೆಚ್ಚಿನ ಬಡ್ಡಿ ದರ, ಜಾಗತಿಕ ವ್ಯಾಪಾರ ಕುಂಠಿತ ಮೊದಲಾದ ಸಮಸ್ಯೆಗಳು ಆರ್ಥಿಕ ಪ್ರಗತಿಗೆ ತೊಡಕಾಗಲಿವೆ. ಆದರೆ, ಭಾರತದಲ್ಲಿ ಅಂತರ್ಮುಖ ಹೂಡಿಕೆ, ಮತ್ತು ತಂತ್ರಜ್ಞಾನ, ಕೃಷಿ ಇತ್ಯಾದಿ ಕ್ಷೇತ್ರದಲ್ಲಿ ತಂತ್ರಜ್ಞಾನ ಬಳಕೆಯಿಂದ ಉತ್ಪಾದನೆ ಹೆಚ್ಚಳ, ಈ ಅಂಶಗಳು ಆರ್ಥಿಕತೆಗೆ ಪುಷ್ಟಿಕೊಡಬಹುದು. ಅದೇ ವೇಳೆ, ಹಣದುಬ್ಬರವು ಎತ್ತರದ ಸ್ಥಿತಿಯಲ್ಲಿ ಮುಂದುವರಿಯುತ್ತಿದ್ದರೆ ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರವನ್ನು ಶೇ. 6ಕ್ಕಿಂತ ಹೆಚ್ಚಿನ ಮಟ್ಟಕ್ಕೆ ಇರಿಸಬಹುದು. ಇದರಿಂದ ಜಿಡಿಪಿ ಪ್ರಗತಿ ಕುಂಠಿತಗೊಳ್ಳುವ ಸಾಧ್ಯತೆ ಇರುತ್ತದೆ ಎಂದು ಮೂಡೀಸ್ ವಿಶ್ಲೇಷಿಸಿದೆ.
ಚೀನಾಗಿಂತ ಭಾರತದ್ದು ಉತ್ತಮ ಸ್ಥಿತಿ
ಏಷ್ಯಾ ಪೆಸಿಫಿಕ್ ಪ್ರದೇಶದ ಆರ್ಥಿಕತೆಯು ಹೆಚ್ಚಾಗಿ ವ್ಯಾಪಾರ ಅವಲಂಬಿತವಾಗಿದೆ. ಜಾಗತಿಕ ವ್ಯಾಪಾರ ನಿಧಾನಗೊಳ್ಳುತ್ತಿರುವುದು ಪರಿಣಾಮ ಬೀರುತ್ತಿದೆ. ಜಾಗತಿಕ ಕೈಗಾರಿಕಾ ಉತ್ಪಾದನೆ ಉತ್ತಮವಾಗಿದೆ ಎಂದು ಹೇಳಿದ ಮೂಡೀಸ್, ಚೀನಾ ದುರ್ಬಲ ಸ್ಥಿತಿಯಲ್ಲಿದೆ ಎಂದಿದೆ.
"ಜಾಗತಿಕ ಆರ್ಥಿಕತೆಯಲ್ಲಿ ದುರ್ಬಲ ಕೊಂಡಿಯಾಗಿರುವುದು ಚೀನಾ ಮಾತ್ರವಲ್ಲ, ಭಾರತದ ಪ್ರಮುಖ ರಫ್ತುಗಳು ಕಡಿಮೆಯಾಗಿದೆ. ಆದರೆ, ಕೊನೆಯ ಪಕ್ಷ ಚೀನಾ ರೀತಿಯಲ್ಲಿ ಭಾರತದ ಆರ್ಥಿಕತೆ ಸಂಪೂರ್ಣವಾಗಿ ರಫ್ತನ್ನು ನೆಚ್ಚಿಕೊಂಡಿಲ್ಲ ಎನ್ನುವುದು ಗಮನಿಸಬೇಕಾದ ವಿಷಯ" ಎಂದು ಮೂಡೀಸ್ ಅನಾಲಿಟಿಕ್ಸ್‌ನ ಆರ್ಥಿಕ ತಜ್ಞ ಸ್ಟೀವ್ ಕೋಚ್ರೇನ್ ಹೇಳಿದ್ದಾರೆ.
ಏಷ್ಯಾ ಪೆಸಿಫಿಕ್ ಪ್ರದೇಶದಲ್ಲಿ ಭಾರತ ಮೊದಲಾದ ಪ್ರಮುಖ ಆರ್ಥಿಕತೆಯ ದೇಶಗಳು ಕೋವಿಡ್ ಸಾಂಕ್ರಾಮಿಕ ಸ್ಥಿತಿಯಿಂದ ಚೇತರಿಸಿಕೊಂಡು ಬೆಳವಣಿಗೆ ಸಾಧಿಸುತ್ತಿದ್ದರೂ ಯೂರೋಪ್, ಉತ್ತರ ಅಮೆರಿಕ ಮತ್ತು ಚೀನಾದ ಆರ್ಥಿಕ ಸಂಕಷ್ಟದ ಕಾರಣಕ್ಕೆ 2023ರ ವರ್ಷದಲ್ಲಿ ಆರ್ಥಿಕ ಪ್ರಗತಿ ಮಂದಗೊಳ್ಳಬಹುದು ಎಂಬುದು ಸ್ಟೀವ್ ಕೋಚ್ರೇನ್ ಅನಿಸಿಕೆ.
ಜಾಗತಿಕ ಆರ್ಥಿಕತೆ ಪ್ರಗತಿ ಶೇ. 2.7 ಮಾತ್ರ
ಜಾಗತಿಕ ಆರ್ಥಿಕತೆಯ ವಿಚಾರಕ್ಕೆ ಬಂದರೆ 2021ರಲ್ಲಿ ಶೇ. 6ರಷ್ಟು ಬೆಳವಣಿಗೆಯಾಗಿತ್ತು. ಇದು ಈ ವರ್ಷ, ಅಂದರೆ 2022ರಲ್ಲಿ ಶೇ. 3.2ಕ್ಕೆ ಬಂದು ನಿಲ್ಲಬಹುದು ಎಂದು ಐಎಂಎಫ್ ಕಳೆದ ತಿಂಗಳು ತನ್ನ ವರದಿಯೊಂದರಲ್ಲಿ ತಿಳಿಸಿದೆ. ಆದರೆ, 2023ರಲ್ಲಿ ಜಾಗತಿಕ ಆರ್ಥಿಕತೆ ಕೇವಲ 2.7ರಷ್ಟು ಮಾತ್ರ ಬೆಳವಣಿಗೆ ಸಾಧಿಸಬಹುದು ಎಂದು ಅದು ನಿರೀಕ್ಷಿಸಿದೆ. ಈ ಹಿನ್ನೆಲೆಯಲ್ಲಿ ಭಾರತದ ಜಿಡಿಪಿ ದರ ಇತರ ಹಲವು ದೇಶಗಳಿಗೆ ಹೋಲಿಸಿದರೆ ಉತ್ತಮ ಸ್ಥಿತಿಯಲ್ಲಿದೆ ಎಂಬುದೇ ಸಮಾಧಾನದ ಸಂಗತಿ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಚಿನ್ನದ ಬೆಲೆ ಇಂದು ಏರಿಕೆ? ಖರೀದಿಸುವ ಮುನ್ನ ಇದನ್ನು ನೋಡಿ



Click it and Unblock the Notifications