ವಂದೇ ಭಾರತ್ ರೈಲುಗಳು..ಭಾರತದ ಐಷಾರಾಮಿ ವ್ಯವಸ್ಥೆಗಳನ್ನು ಒಳಗೊಂಡಿರುವ ದುಬಾರಿ ರೈಲುಗಳು. ಅತೀ ವೇಗವಾಗಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಚಲಿಸಿ, ಪ್ರಯಾಣದ ಸಮಯ ಕಡಿಮೆ ಮಾಡುವ ಉದ್ದೇಶದಿಂದ, ಈ ವಿಶೇಷ ರೈಲುಗಳನ್ನು ಪರಿಚಯಿಸಲಾಗಿತ್ತು. ಆದರೆ ಈ ರೈಲುಗಳ ಟಿಕೆಟ್ ದರ ದುಬಾರಿ ಆಗಿದ್ದರಿಂದ, ಎಲ್ಲಾ ವರ್ಗದವರೂ ವಂದೇ ಭಾರತ್ ರೈಲಿನಲ್ಲಿ ಪ್ರಯಾಣ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ಈಗ ಪ್ರಧಾನಿ ಮೋದಿ ಸರ್ಕಾರ ಜನಸಾಮಾನ್ಯರಿಗೆ ಗುಡ್‌ನ್ಯೂಸ್ ನೀಡಿದೆ. ಅದೇನೆಂದರೆ ಜನರ ಅನುಕೂಲಕ್ಕಾಗಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಟಿಕೆಟ್ ದರವನ್ನು ಪುನರ್ ಪರಿಶೀಲನೆಗೆ ಒಳಪಡಿಸುತ್ತಿದ್ದಾರೆ. ಪರಿಶೀಲನೆ ಬಳಿಕೆ ಟಿಕೆಟ್ ದರಗಳನ್ನು ಕಡಿತಗೊಳಿಸುವ ಚಿಂತನೆಯಲ್ಲಿದ್ದಾರೆ ಎಂಬ ಸುದ್ದಿ ಹೊರ ಬಿದ್ದಿದೆ.

ಹೌದು, ಹತ್ತಾರು ನಗರಗಳು, ರಾಜ್ಯದಿಂದ ರಾಜ್ಯಕ್ಕೆ ವೇಗವಾಗಿ ಸಂಪರ್ಕ ಒದಗಿಸುವ ಈ ರೈಲುಗಳ ಟಿಕೆಟ್ ದರ, ಸದ್ಯದ ಮಟ್ಟಿಗೆ ಸಾಮಾನ್ಯ ಜನರ ಕೈಗೆಟುಕುತ್ತಿಲ್ಲ. ಈ ಬಗ್ಗೆ ಒಂದಷ್ಟು ಆರೋಪಗಳೂ ಕೇಳಿಬಂದವು. ಇದರ ಬೆನ್ನಲ್ಲೇ ಈಗ ಕೇಂದ್ರ ಸರ್ಕಾರದಿಂದ ವಂದೇ ಭಾರತ್ ರೈಲಿನ ಟಿಕೆಟ್ ದರ ಕಡಿತ, ಸಬ್ಸಿಡಿ ಆಧಾರಿತ ಮಾದರಿ ಮತ್ತು ಶ್ರೇಣಿ ಆಧಾರಿತ ಬೆಲೆ ರಚನೆ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ.
ದರ ಕಡಿಮೆ ಮಾಡುವ ಯೋಜನೆ ಏಕೆ..?
ಭಾರತದ ಮೊದಲ ಹೈ-ಸ್ಪೀಡ್ ರೈಲುಗಳಾಗಿ ಕಾರ್ಯ ನಿರ್ವಹಿಸುತ್ತಿರುವ ವಂದೇ ಭಾರತ್ ರೈಲು, ಸದ್ಯ ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣದ ಅನುಭವ ನೀಡುತ್ತಿವೆ. ಈಗಾಗಲೇ ಭಾರತದಲ್ಲಿ 136 ವಂದೇ ಭಾರತ್ ರೈಲುಗಳು ಕಾರ್ಯನಿರ್ವಹಿಸುತ್ತಿವೆ. ಮಾರ್ಚ್ 31, 2025ರ ತನಕ ಈ ರೈಲುಗಳ ಆಕ್ಯುಪೆನ್ಸಿ ಶೇಕಡಾ 100ಕ್ಕಿಂತ ಹೆಚ್ಚು ಎಂಬುದಾಗಿ ಅಧಿಕೃತ ಡೇಟಾ ತಿಳಿಸಿದೆ. ಹೀಗಿದ್ದೂ ಕೂಡ ಈ ಸೇವೆಗಳ ಟಿಕೆಟ್ ದರ ಸಾಮಾನ್ಯ ರೈಲುಗಳಿಗಿಂತ ಹೆಚ್ಚಾಗಿದ್ದು, ಇದು ಬಡವರಿಗೆ, ಮದ್ಯಮ ವರ್ಗದವರಿಗೆ ಕೈಗೆಟುಕದಷ್ಟು ಎತ್ತರಕ್ಕೆ ಹೋಗಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಸಾಕಷ್ಟು ಮಂದಿ ಸೋಷಿಯಲ್ ಮೀಡಿಯಾಗಳಲ್ಲಿ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಗಮನ ಹರಿಸಿರುವ ಕೇಂದ್ರ ರೈಲ್ವೆ ಸಚಿವಾಲಯ ಹೊಸ ಆಯ್ಕೆಗಳನ್ನು ಪರಿಗಣಿಸುತ್ತಿದೆ.
ಶ್ರೇಣೀಕೃತ ದರ ಮಾದರಿಯ ಚಿಂತನೆ:
ಆಗಲೇ ಹೇಳಿದಂತೆ ಕೇಂದ್ರ ರೈಲ್ವೆ ಇಲಾಖೆ ಶ್ರೀಣಿಕೃತ ದರ ಮಾದರಿಯನ್ನು ಪರಿಗಣಿಸುತ್ತದೆ ಎಂದು, ಮೂಲಗಳ ಮಾಹಿತಿಗಳಿಂದ ತಿಳಿಯಬಹುದಾಗಿದೆ. ಈ ಶ್ರೇಣಿಕೃತ ದರ ಮಾದರಿ ಚಿಂತನೆ ಎಂದರೆ, ಪ್ರಯಾಣಿಕರ ಆದಾಯ ಮಟ್ಟ, ವಯಸ್ಸು ಮತ್ತು ಪ್ರಯಾಣದ ಅವಶ್ಯಕತೆಯನ್ನು ಆಧರಿಸಿ ದರವನ್ನು ನಿಗದಿ ಪಡಿಸುವುದು. ಮೊದಲು ಎಲ್ಲಾ ರೀತಿಯ ಪ್ರಯಾಣಿಕರಿಗೂ ಒಂದೇ ರೀತಿಯ ದರ ನಿಗದಿಯಾಗಿತ್ತು. ಆದರೆ ಈ ಶ್ರೇಣೀಕೃತ ದರ ಮಾದರಿಯ ವ್ಯವಸ್ಥೆ ಬಂದರೆ, ಟಿಕೆಟ್ ದರಗಳಲ್ಲಿ ವ್ಯತ್ಯಾಸ ಬರುತ್ತದೆ. ಇದರಲ್ಲಿ ಪ್ರಯಾಣಿಕರ ಆರ್ಥಿಕ ಸ್ಥಿತಿ, ವಯಸ್ಸಿನ ಮೇಲೆ ದರ ನಿಗದಿಯಾಗುತ್ತದೆ.
ಉದಾಹರಣೆಗೆ ವಿದ್ಯಾರ್ಥಿಗಳಿಗೆ ವಂದೇ ಭಾರತ್ ರೈಲಿನ ಟಿಕೆಟ್ ದರ ಕಡಿತವಾಗಬಹುದು. ಹಾಗೆಯೇ ಹಿರಿಯ ನಾಗರಿಕರಿಗೆ ಸಬ್ಸಿಡಿ ಸಿಗಬಹುದು. ಇನ್ನು ಗ್ರಾಮೀಣ ಭಾಗದ ಪ್ರಯಾಣಿಕರಿಗೆ ವಿಶೇಷ ಕೊಡುಗೆ ದೊರೆಯಬಹುದು.
ಸದ್ಯ ಈ ಬಗ್ಗೆ ಇನ್ನೂ ಚಿಂತನೆ ನಡೆಸಲಾಗುತ್ತಿದೆ ಎಂಬ ಮಾಹಿತಿ ತಿಳಿದುಬಂದಿದೆ. ಆದರೆ ಕೇಂದ್ರ ರೈಲ್ವೆ ಸಚಿವಾಲಯದಿಂದಾಗಲಿ, ಪ್ರಧಾನ ಮಂತ್ರಿ ಕಚೇರಿಯಿಂದಾಗಲೀ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ತಿಳಿದುಬಂದಿಲ್ಲ. ಆದರೆ ಆದರೆ, ಶ್ರೇಣೀಕೃತ ಬೆಲೆ ಮಾದರಿಗಳು ಮತ್ತು ಟಿಕೆಟ್ ಸಬ್ಸಿಡಿ ಬಗ್ಗೆ ಆಂತರಿಕ ಚರ್ಚೆಗಳು ನಡೆಯುತ್ತಿವೆ ಎಂದು ಉನ್ನತ ಅಧಿಕಾರಿಗಳು ಮಾಹಿತಿ ನೀಡುತ್ತಿದ್ದಾರೆ.


Click it and Unblock the Notifications