ಭಾರತೀಯ ರೈಲ್ವೇ ಫೈನಾನ್ಸ್ ಕಾರ್ಪೊರೇಷನ್ ಲಿಮಿಟೆಡ್ (ಐಆರ್‌ಎಫ್‌ಸಿ) ಷೇರುಗಳು ಗುರುವಾರದ ವಹಿವಾಟಿನಲ್ಲಿ ಶೇಕಡ 6 ರಷ್ಟು ಕುಸಿತ ಕಂಡಿದೆ. ಈ ಹಣಕಾಸು ವರ್ಷದಲ್ಲಿ ಭಾರತೀಯ ರೈಲ್ವೆಯ ಹಣಕಾಸು ವಿಭಾಗದಲ್ಲಿ ತನ್ನ ಷೇರಿನಲ್ಲಿ ಒಂದು ಭಾಗವನ್ನು ಮಾರಾಟ ಮಾಡಲು ಸರ್ಕಾರ ಯೋಜಿಸುತ್ತಿದೆ.
ಜೂನ್ 30 ರವರೆಗೆ ಸರ್ಕಾರಿ ಸ್ವಾಮ್ಯದ ಕಂಪನಿಯಲ್ಲಿ ಸರ್ಕಾರವು ಶೇಕಡ 86.36 ರಷ್ಟು ಪಾಲನ್ನು ಹೊಂದಿತ್ತು. ಭಾರತೀಯ ರೈಲ್ವೇಯ ಪಿಎಸ್‌ಯು ಸ್ಟಾಕ್ ಇತ್ತೀಚಿನ ವರ್ಷಗಳಲ್ಲಿ ದಲಾಲ್ ಸ್ಟ್ರೀಟ್‌ನ ಮಲ್ಟಿಬ್ಯಾಗರ್ ಸ್ಟಾಕ್‌ಗಳಲ್ಲಿ ಒಂದಾಗಿದೆ. ಕಳೆದ ವರ್ಷದಲ್ಲಿ, ಐಆರ್‌ಎಫ್‌ಸಿ ಷೇರು ತನ್ನ ಷೇರುದಾರರಿಗೆ ಶೇಕಡ 130 ಕ್ಕಿಂತ ಹೆಚ್ಚು ಲಾಭವನ್ನು ನೀಡಿದೆ.

ಐಆರ್‌ಎಫ್‌ಸಿ 2023ರ ಮೊದಲ ತ್ರೈಮಾಸಿಕದ ವರದಿಯನ್ನು ಘೋಷಣೆ ಮಾಡಿದೆ. ನಂತರ ಕಳೆದ ವಾರ ಐಆರ್‌ಎಫ್‌ಸಿ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಆದರೂ ಇಂದು ಮುಂಜಾನೆ ಈ ರೈಲ್ವೆ ಪಿಎಸ್‌ಯು ಷೇರುಗಳು ಒತ್ತಡದಲ್ಲಿದೆ. ಐಆರ್‌ಎಫ್‌ಸಿ ಷೇರು ಇಂದು ನಷ್ಟದೊಂದಿಗೆ ವಹಿವಾಟು ಆರಂಭಿಸಿದೆ. ಪ್ರತಿ ಷೇರು 48.25 ರೂಪಾಯಿಯ ಇಂಟ್ರಾಡೇ ಕನಿಷ್ಠ ಮಟ್ಟವನ್ನು ತಲುಪಿದೆ.
ಸರ್ಕಾರವು ಸರ್ಕಾರಿ ಸ್ವಾಮ್ಯದ ಐಆರ್‌ಎಫ್‌ಸಿಯಲ್ಲಿ ತನ್ನ ಕೆಲವು ಷೇರುಗಳನ್ನು ಮಾರಾಟ ಮಾಡುವ ಬಗ್ಗೆ ಚಿಂತನೆ ನಡೆಸುತ್ತಿದೆ ಎಂದು ಬುಧವಾರ ಮಾಧ್ಯಮಗಳು ವರದಿ ಮಾಡಿದೆ. ಭಾರತೀಯ ರೈಲ್ವೇಯ ಧನಸಹಾಯ ವಿಭಾಗದಲ್ಲಿ ಶೇಕಡ 86 ಕ್ಕಿಂತ ಸ್ವಲ್ಪ ಹೆಚ್ಚು ಪಾಲನ್ನು ಸರ್ಕಾರವು ಹೊಂದಿದೆ.
"ಪಾಲು ಮಾರಾಟವು ಶೀಘ್ರದಲ್ಲೇ ನಡೆಯಲಿದೆ," ಎಂದು ಸರ್ಕಾರಿ ಅಧಿಕಾರಿಯನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಹೇಳಿದೆ. ಸರ್ಕಾರವು ಮಾರಾಟದ ನಿಖರವಾದ ಪ್ರಮಾಣವನ್ನು ಇನ್ನೂ ನಿರ್ಧರಿಸಿಲ್ಲ. ಆದರೆ ಮಾಧ್ಯಮಗಳ ವರದಿಯ ಪ್ರಕಾರ ಸರ್ಕಾರವು ಸುಮಾರು ಶೇಕಡ 11ರಷ್ಟು ಷೇರುಗಳನ್ನು ಮಾರಾಟ ಮಾಡುವ ಗುರಿಯನ್ನು ಹೊಂದಿದೆ ಎಂದು ವರದಿ ಹೇಳಿದೆ.
ಜನವರಿ 2021 ರಲ್ಲಿ ಐಆರ್‌ಎಫ್‌ಸಿ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಲೀಸ್ಟ್ ಮಾಡಲಾಗಿದೆ. ಷೇರು ಮಾರಾಟವು ಕಂಪನಿಯಿಂದ ಷೇರುಗಳ ಹೊಸ ವಿತರಣೆಯನ್ನು ಒಳಗೊಂಡಿತ್ತು ಮತ್ತು ಸರ್ಕಾರದಿಂದ ಹೆಚ್ಚುವರಿ ಶೇಕಡ 4.55 ಪಾಲನ್ನು ದುರ್ಬಲಗೊಳಿಸಿತು. ಅಂದಾಜಿನ ಪ್ರಕಾರ, ಶೇಕಡ 11.36 ರಷ್ಟು ಪಾಲನ್ನು ಮಾರಾಟ ಮಾಡುವುದರಿಂದ ಒಟ್ಟು 7,600 ಕೋಟಿ ರೂಪಾಯಿ ಮೌಲ್ಯವನ್ನು ಹೊಂದಿದೆ.
ಕಳೆದ ತಿಂಗಳು ಸರ್ಕಾರವು ಸುಮಾರು ಮತ್ತೊಂದು ಸರ್ಕಾರಿ-ಚಾಲಿತ ರೈಲ್ವೆ ಕಂಪನಿಯಾದ ರೈಲ್ ವಿಕಾಸ್ ನಿಗಮ್‌ನಲ್ಲಿ ಶೇಕಡ 5ಕ್ಕಿಂತ ಅಧಿಕ ಪಾಲನ್ನು ಮಾರಾಟ ಮಾಡಿದೆ. ಇದರಿಂದ 1366 ಕೋಟಿ ರೂಪಾಯಿ (164.34 ಮಿಲಿಯನ್ ಡಾಲರ್) ಸಂಗ್ರಹಿಸಿದೆ. 2024 ರ ಆರ್ಥಿಕ ವರ್ಷದಲ್ಲಿ ಇದುವರೆಗೆ 51,000 ಕೋಟಿ ರೂಪಾಯಿಗಳ ಗುರಿಯಲ್ಲಿ ಸುಮಾರು 5600 ಕೋಟಿ ರೂಪಾಯಿಗಳ ಫಂಡ್ ರೈಸ್ ಮಾಡಲಾಗಿದೆ.


Click it and Unblock the Notifications