ಭಾರತೀಯ ರೈಲ್ವೆಯು 2026ರ ಟೈಮ್ ಟೇಬಲ್ ಅನ್ನು ಇದೀಗ ಬಿಡುಗಡೆ ಮಾಡಿದೆ. ಈ ಟೈಮ್ ಟೇಬಲ್ ಅನ್ನು Trains At A Glance (TAG) 2026 ಎಂದು ಕರೆಯಲಾಗುತ್ತದೆ. ಇನ್ನು ಜನವರಿಯಲ್ಲಿ ಇದನ್ನು ಪ್ರಕಟಿಸಲಾಗುತ್ತದೆ. ಈ ಬದಲಾವಣೆ ಪ್ರಯಾಣಿಕರ ಪ್ರಯಾಣ ಸಮಯ ಕಡಿಮೆ ಮಾಡಿ, ಹೆಚ್ಚು ಸೇವೆ ಮತ್ತು ಆಯ್ಕೆಗಳನ್ನು ನೀಡುತ್ತದೆ.

ಏನಿದು TAG 2026?
TAG ಎಂದರೆ "Trains At A Glance". ಇದು ಭಾರತೀಯ ರೈಲ್ವೇಯ ಅಧಿಕೃತ ಟೈಮ್ ಟೇಬಲ್ ಪ್ರಕಟಣೆಯಾಗಿದೆ. ಪ್ರತೀ ವರ್ಷ ಇದನ್ನು ಬಿಡುಗಡೆ ಮಾಡಲಾಗುತ್ತದೆ. ಈ ಪಟ್ಟಿಯಲ್ಲಿ ರೈಲುಗಳ ಟೈಮ್ ಟೇಬಲ್, ಮಾರ್ಗಗಳು, ವೇಗ ಮತ್ತು ಹೊಸ ಬದಲಾವಣೆಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ.
ಇದೀಗ 2026ರ TAG ಜನವರಿ 9 ರಂದು ಬಿಡುಗಡೆಯಾಗಿದೆ. ಇದು ರೈಲುಗಳ ವೇಗ ಹೆಚ್ಚಳ, ಹೊಸ ರೈಲುಗಳ ಸೇರ್ಪಡೆ ಮತ್ತು ಮಾರ್ಗ ವಿಸ್ತರಣೆ ಬಗ್ಗೆ ವಿವರಿಸುತ್ತದೆ.
TAG 2026ರ ಅಡಿಯಲ್ಲಿ ಏನೆಲ್ಲಾ ಬದಲಾವಣೆಯಾಗಿದೆ?
ವೇಗ ಹೆಚ್ಚಳ: 549 ರೈಲುಗಳ ವೇಗ ಹೆಚ್ಚಿಸಲಾಗಿದೆ. ಈ ಮೂಲಕ ರೈಲುಗಳ ಪ್ರಯಾಣ ಸಮಯ ಬಹಳ ಕಡಿಮೆಯಾಗುತ್ತದೆ. ಅಂದರೆ ಆ ರೈಲುಗಳು ತಲುಪಬೇಕಾದ ಸ್ಥಳಕ್ಕೆ ಬೇಗನೇ ರೀಚ್ ಆಗುತ್ತದೆ.
ಹೊಸ ರೈಲುಗಳ ಸೇರ್ಪಡೆ: ಇದೀಗ ಈ ವರ್ಷ 122 ಹೊಸ ರೈಲುಗಳನ್ನು ಪರಿಚಯಿಸಲಾಗಿದೆ. ಇದರಲ್ಲಿ 60 ಮೇಲ್/ ಎಕ್ಸ್‌ಪ್ರೆಸ್ ರೈಲುಗಳೂ, 28 ವಂದೇ ಭಾರತ್, 26 ಅಮೃತ್ ಭಾರತ್, 2 ರಾಜಧಾನಿ, 2 ಜನ್ ಶತಾಬ್ಧಿ, 2 ಹಂಸಫರ್, 2 ನಮೋ ಭಾರತ್ ರ್ಯಾಪಿಡದದ ರೈಲುಗಳನ್ನು ಸೇರಿಸಲಾಗಿದೆ.
ರೈಲುಗಳ ವಿಸ್ತರಣೆ:
ಇದೀಗ 86 ರೈಲುಗಳ ಮಾರ್ಗಗಳನ್ನು ವಿಸ್ತರಿಸಲಾಗಿದೆ. ಅದರಲ್ಲಿ ಹೊಸ ನಿಲ್ದಾಣಗಳು ಕೂಡಾ ಸೇರಿದೆ.
ಇನ್ನು ದಕ್ಷಿಣ ರೈಲ್ವೆ (SR) 6 ಹೊಸ ರೈಲುಗಳು ಮತ್ತು 75 ವೇಗದ ಸೇವೆಗಳನ್ನು ಪರಿಚಯಿಸಿದೆ. ಉತ್ತರ ರೈಲ್ವೆ (NR) 20 ಹೊಸ ರೈಲುಗಳು, 10 ವಿಸ್ತರಣೆಗಳು, ಮತ್ತು 24 ವೇಗದ ರೈಲುಗಳನ್ನು ಒದಗಿಸಿದೆ. ಪೂರ್ವ ಕೇಂದ್ರ ರೈಲ್ವೆ (ECR) 20 ಹೊಸ ರೈಲುಗಳು, 20 ವಿಸ್ತರಣೆಗಳು, 12 ವೇಗದ ರೈಲುಗಳನ್ನು ಹೊಂದಿದೆ.
ಇತರ ವಲಯಗಳಾದ ಈಶಾನ್ಯ ಗಡಿ ರೈಲ್ವೆ (NFR) 10 ಹೊಸ ರೈಲುಗಳು, 36 ವೇಗದ ಸೇವೆಗಳನ್ನು ತಂದಿದೆ. ಕೇಂದ್ರ ರೈಲ್ವೆ (CR) ನಾಲ್ಕು ಹೊಸ ರೈಲುಗಳು, ಆರು ವಿಸ್ತರಣೆಗಳು, 30 ವೇಗದ ರೈಲುಗಳನ್ನು ಸೇರಿಸಿದೆ.
ಟ್ಯಾಗ್ 2026 ಅಡಿಯಲ್ಲಿ ವಂದೇ ಭಾರತ್, ಅಮೃತ್ ಭಾರತ್ ಸೇರಿದಂತೆ ಪ್ರೀಮಿಯಂ ರೈಲುಗಳನ್ನು ಸಹ ಸೇರಿಸಲಾಗಿದೆ. ವೇಗ ಹೆಚ್ಚಳದ ಈ ಸುಧಾರಣೆಗಳು ಎಸ್‌ಡಬ್ಲ್ಯುಆರ್, ಎನ್‌ಡಬ್ಲ್ಯುಆರ್, ಡಬ್ಲ್ಯುಆರ್ ಮತ್ತು ಎಸ್‌ಆರ್‌ನಂತಹ ವಲಯಗಳಿಗೆ ಮತ್ತು ಪ್ರಯಾಣಿಕರು ಅನುಕೂಲವಾಗಲಿದೆ. ಜನನಿಬಿಡ ಮಾರ್ಗಗಳಲ್ಲಿ ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡುವತ್ತ ಭಾರತೀಯ ರೈಲ್ವೆ ಈ ಕ್ರಮ ಕೈಗೊಂಡಿದೆ.


Click it and Unblock the Notifications