For Quick Alerts
ALLOW NOTIFICATIONS  
For Daily Alerts

ಅಮೆರಿಕ ಡಾಲರ್ ವಿರುದ್ಧ ಭಾರೀ ಕುಸಿತ ಕಂಡ ರುಪಾಯಿ ಮೌಲ್ಯ

|

ಅಮೆರಿಕ ಡಾಲರ್ ವಿರುದ್ಧ ರುಪಾಯಿ ಮೌಲ್ಯವು ಗುರುವಾರ 74.27ರೊಂದಿಗೆ ಆರಂಭವಾಯಿತು. ಬುಧವಾರದ ಕೊನೆಗೆ ರುಪಾಯಿ ಮೌಲ್ಯ 73.64ರಲ್ಲಿ ಕೊನೆಗೊಂಡಿತ್ತು. ಸೋಮವಾರದಂದು ಭರ್ಜರಿ ಕುಸಿತ ಕಂಡಿದ್ದ ಕಚ್ಚಾ ತೈಲದ ಬೆಲೆ ಆ ನಂತರ ಎರಡು ದಿನ ಚೇತರಿಕೆ ಕಂಡಿದ್ದು, ಗುರುವಾರದಂದು ಮತ್ತೆ ಕುಸಿಯಿತು.

ಯುರೋಪ್ ನಿಂದ ಅಮೆರಿಕಕ್ಕೆ ಪ್ರವಾಸ ನಿರ್ಬಂಧ ಹೇರಿದ್ದರ ಪರಿಣಾಮ ತೈಲ ಬೆಲೆ ಮೇಲೆ ಆಗಿದೆ. ಕಡಿಮೆ ಗುಣಮಟ್ಟದ ಪೂರೈಕೆಗೆ ಆತಂಕ ಎದುರಾಗಿದೆ. ಬ್ರೆಂಟ್ ಕಚ್ಚಾ ತೈಲದ ಬೆಲೆ 3 ಪರ್ಸೆಂಟ್ ಇಳಿದು, $ 34.76 ನಂತೆ ವಹಿವಾಟು ನಡೆಸಿದೆ. ಯು.ಎಸ್. ಕಚ್ಚಾ ತೈಲವು $ 1.13 ಕುಸಿದು, $ 31.85ನಲ್ಲಿ ವಹಿವಾಟು ನಡೆಸಿದೆ.

ಅಮೆರಿಕ ಡಾಲರ್ ವಿರುದ್ಧ ಭಾರೀ ಕುಸಿತ ಕಂಡ ರುಪಾಯಿ ಮೌಲ್ಯ

ಈ ಮಧ್ಯೆ ಕೊರೊನಾ ವೈರಾಣುವನ್ನು ವಿಶ್ವ ಆರೋಗ್ಯ ಸಂಸ್ಥೆಯು ಜಾಗತಿಕ ಪಿಡುಗು ಎಂದು ಘೋಷಣೆ ಮಾಡಿದೆ. ಅದರ ಬೆನ್ನಿಗೆ ಡೌ ಜೋನ್ಸ್ ಭಾರೀ ಕುಸಿತ ಕಂಡಿತು. ಇನ್ನು ಗುರುವಾರದ ಆರಂಭದ ವಹಿವಾಟಿನಲ್ಲಿ ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳು ಕುಸಿತದ ಹಾದಿ ಮುಂದುವರಿಸಿವೆ.

English summary

Indian Rupee Down To 74.27 Against US Dollar

Indian rupee value against US dollar fall to 74.27. Here is the complete details.
Story first published: Thursday, March 12, 2020, 10:16 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X