ಡಾಲರ್ ಎದುರು ರುಪಾಯಿ ಬಲ ಹೆಚ್ಚಾಗಿದ್ದು, ಕಳೆದ 6 ವಾರಗಳಲ್ಲಿ ಅತಿ ಹೆಚ್ಚಿನ ಮೌಲ್ಯ ಪಡೆದಿದೆ. ಗುರುವಾರ 1 ಅಮೆರಿಕನ್ ಡಾಲರ್‌ಗೆ 70.68 ರುಪಾಯಿನಿಂದ ಆರಂಭಗೊಂಡು 70.64 ರುಪಾಯಿಗೆ ತಲುಪುವ ಮೂಲಕ ಹೊಸ ಗರಿಷ್ಠ ಮಟ್ಟಕ್ಕೆ ತಲುಪಿದೆ.
ಅಮೆರಿಕಾ ಡಾಲರ್ ವಿರುದ್ಧ ಮತ್ತಷ್ಟು ಬಲವರ್ಧನೆಗೊಂಡಿರುವ ಭಾರತದ ರುಪಾಯಿ ಗುರುವಾರ ಸುಮಾರು ಆರು ವಾರಗಳ ಗರಿಷ್ಠ ಮಟ್ಟದಲ್ಲಿ ಆರಂಭ ಪಡೆದಿದೆ. ಅಮೆರಿಕಾ ಫೆಡರಲ್ ಬ್ಯಾಂಕ್ 2020ರ ಉದ್ದಕ್ಕೂ ಪ್ರಮುಖ ನೀತಿ ದರಗಳ ಮೇಲೆ ಯಾವುದೇ ಬದಲಾವಣೆಯಿಲ್ಲ ಎಂದು ಘೋಷಿಸಿದ ಬಳಿಕ ಡಾಲರ್ ಎದುರು ರುಪಾಯಿ ಮೌಲ್ಯ ಹೆಚ್ಚಾಗಿದೆ. ದೇಶೀಯ ವ್ಯಾಪಾರಿಗಳು ಗ್ರಾಹಕ ಹಣದುಬ್ಬರ ಪ್ರಮಾಣ ಮತ್ತು ಕಾರ್ಖಾನೆಗಳ ಮಾಹಿತಿಯನ್ನು ತಿಳಿದುಕೊಳ್ಳಲು ಕಾಯುತ್ತಿದ್ದಾರೆ.

ಗುರುವಾರ ಆರಂಭದಲ್ಲಿ ಡಾಲರ್ ಎದುರು ರುಪಾಯಿ ಮೌಲ್ಯ 70.66ಕ್ಕೆ ವಹಿವಾಟು ನಡೆಸಿದ್ದು, ಬುಧವಾರದ 70.84 ರ ಸಮೀಪದಿಂದ 0.25 ಪರ್ಸೆಂಟ್ ಹೆಚ್ಚಾಗಿದೆ. ನವೆಂಬರ್ 4ರಂದು ಡಾಲರ್ ಎದುರು ರುಪಾಯಿ 70.64 ರುಪಾಯಿಗೆ ತಲುಪುವ ಮೂಲಕ ಗರಿಷ್ಠ ಮಟ್ಟಕ್ಕೆ ತಲುಪಿತ್ತು. ಆದರೆ ಈಗ ಸತತ 6 ವಾರಗಳ ಬಳಿಕ ರುಪಾಯಿ ಏರಿಕೆಯಾಗಿದೆ.
ಸರ್ಕಾರವು ಗುರುವಾರ ಭಾರತದ ಚಿಲ್ಲರೆ ಹಣದುಬ್ಬರ ಮತ್ತು ಕಾರ್ಖಾನೆ ಉತ್ಪಾದನಾ ಅಂಕಿ-ಅಂಶಗಳನ್ನು ಬಿಡುಗಡೆ ಮಾಡುಲಿದೆ. ಚಿಲ್ಲರೆ ಹಣದುಬ್ಬರವು ಅಕ್ಟೋಬರ್ 4.22 ಪರ್ಸೆಂಟ್ ನಿಂದ ನವೆಂಬರ್‌ಗೆ 5.22 ಪರ್ಸೆಂಟ್‌ಗೆ ಏರಿಕೆಯಾಗಿತ್ತು. ಬ್ಲೂಮ್‌ಬರ್ಗ್ ಸಮೀಕ್ಷೆಯ ಪ್ರಕಾರ ಕೈಗಾರಿಕಾ ಉತ್ಪಾದನಾ ಪ್ರಮಾಣವು ಸೆಪ್ಟೆಂಬರ್‌ನಲ್ಲಿ 4.3 ಪರ್ಸೆಂಟ್ ನಿಂದ ಅಕ್ಟೋಬರ್‌ಗೆ 4.8 ಪರ್ಸೆಂಟ್‌ಗೆ ಕುಸಿದಿದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications